ʼಕ್ರೈಮ್ ಪ್ಯಾಟ್ರೋಲ್ʼ ಖ್ಯಾತಿಯ ಕಿರುತೆರೆ ನಟ ನಿತಿನ್ ಚೌಹಾನ್ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

Update: 2024-11-08 10:32 GMT
photo of Nitin Chauhan

ನಿತಿನ್ ಚೌಹಾನ್ | Credit: Instagram

  • whatsapp icon

ಮುಂಬೈ: ರಿಯಾಲಿಟಿ ಶೋ 'ದಾದಾಗಿರಿ 2' ವಿಜೇತ ಕಿರುತೆರೆ ನಟ, ಕ್ರೈಮ್ ಪ್ಯಾಟ್ರೋಲ್ ಖ್ಯಾತಿಯ ನಿತಿನ್ ಚೌಹಾನ್ ಮುಂಬೈನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಮುಂಬೈನ ಅಪಾರ್ಟ್ಮೆಂಟ್‌ವೊಂದರಲ್ಲಿ ಫ್ಯಾನ್‌ ಗೆ ನೇಣು ಬಿಗಿದ ಸ್ಥಿತಿಯಲ್ಲಿ ನಿತಿನ್ ಮೃತದೇಹ ಪತ್ತೆಯಾಗಿದೆ. ನಿತಿನ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ನಿತಿನ್ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಅವರ ಸಾವಿನ ಬಗ್ಗೆ ಸ್ನೇಹಿತರು, ಕುಟುಂಬಸ್ಥರು ದೃಢಪಡಿಸಿದ್ದಾರೆ ಎಂದು NDTV ವರದಿ ಮಾಡಿದೆ.

ಉತ್ತರ ಪ್ರದೇಶದ ಆಲಿಘಡ ಮೂಲದ ನಿತಿನ್ ಹಿಂದಿಯ “ದಾದಾಗಿರಿ–2ʼ ರಿಯಾಲಿಟಿ ಶೋ ವಿಜೇತರಾಗಿದ್ದರು. ಅವರು ರಿಯಾಲಿಟಿ ಶೋ ಮತ್ತು ಹಿಂದಿ ಧಾರಾವಾಹಿಗಳ ಮೂಲಕ ಕಿರುತೆರೆಯಲ್ಲಿ ಮಿಂಚಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News