8,470 ಕೋಟಿ ರೂ.ಮೌಲ್ಯದ ನೋಟುಗಳು ಈಗಲೂ ಜನರ ಬಳಿಯಿವೆ : RBI

Update: 2024-03-01 16:47 GMT

RBI | Photo: PTI 

ಹೊಸದಿಲ್ಲಿ: ಸುಮಾರು ಶೇ.97.62ರಷ್ಟು 2,000 ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದ್ದು, ಕೇವಲ 8,470 ಕೋಟಿ ರೂ.ಮೌಲ್ಯದ ನೋಟುಗಳು ಈಗಲೂ ಜನರ ಬಳಿ ಉಳಿದುಕೊಂಡಿವೆ ಎಂದು ಆರ್‌ ಬಿ ಐ ಶುಕ್ರವಾರ ತಿಳಿಸಿದೆ.

2,000 ರೂ.ನೋಟುಗಳನ್ನು ಚಲಾವಣೆಯಿಂದ ಹಿಂದೆಗೆದುಕೊಳ್ಳುವುದಾಗಿ ಆರ್‌ ಬಿ ಐ 2023, ಮೇ 19ರಂದು ಪ್ರಕಟಿಸಿತ್ತು.

2023 ಮೇ 19ರಂದು ವ್ಯವಹಾರದ ಅಂತ್ಯದಲ್ಲಿ 3.56 ಲಕ್ಷ ಕೋಟಿ ರೂ.ಮೌಲ್ಯದ 2,000 ರೂ.ನೋಟುಗಳು ಚಲಾವಣೆಯಲ್ಲಿದ್ದು,ಅದು 2024,ಫೆ.29ರಂದು ವ್ಯವಹಾರದ ಅಂತ್ಯದಲ್ಲಿ 8,470 ಕೋಟಿ ರೂ.ಗೆ ಇಳಿದಿದೆ ಎಂದು ಆರ್‌ ಬಿ ಐ ಹೇಳಿಕೆಯಲ್ಲಿ ತಿಳಿಸಿದೆ. 2,000 ರೂ.ನೋಟುಗಳು ಕಾನೂನುಬದ್ಧವಾಗಿ ಮುಂದುವರಿಯುತ್ತವೆ ಎಂದು ಅದು ಹೇಳಿದೆ.

ಜನರು ತಮ್ಮ ಬಳಿಯಿರುವ 2,000 ರೂ.ನೋಟುಗಳನ್ನು ದೇಶಾದ್ಯಂತದ 19 ಆರ್‌ ಬಿ ಐ ಕಚೇರಿಗಳಿಗೆ ಜಮೆ ಮಾಡಬಹುದು ಅಥವಾ ವಿನಿಮಯಿಸಿಕೊಳ್ಳಬಹುದು. ಜನರು ತಮ್ಮ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲು ಯಾವುದೇ ಅಂಚೆ ಕಚೇರಿಯಿಂದ ಈ ಯಾವುದೇ ಆರ್‌ ಬಿ ಐ ಕಚೇರಿಗೆ ಕಳುಹಿಸಬಹುದು.

2,000 ರೂ.ನೋಟುಗಳನ್ನು ಬ್ಯಾಂಕುಗಳಿಗೆ ಮರಳಿಸಲು ಮೊದಲು 2023, ಸೆ.30ರವರೆಗೆ ಗಡುವು ನೀಡಲಾಗಿತ್ತು. ಬಳಿಕ ಅದನ್ನು 2023,ಅ.7ರವರೆಗೆ ವಿಸ್ತರಿಸಲಾಗಿತ್ತು. ಈ ಗಡುವಿನ ಬಳಿಕ ಬ್ಯಾಂಕ್ ಶಾಖೆಗಳಲ್ಲಿ 2,000 ರೂ.ನೋಟುಗಳ ಠೇವಣಿ ಮತ್ತು ವಿನಿಮಯ ಸೇವೆಯನ್ನು ನಿಲ್ಲಿಸಲಾಗಿದೆ.

2016, ನವಂಬರ್ ನಲ್ಲಿ ನೋಟು ನಿಷೇಧದ ಬಳಿಕ 2,000 ರೂ.ನೋಟುಗಳನ್ನು ಚಲಾವಣೆಗೆ ತರಲಾಗಿತ್ತು

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News