ರಾಜಸ್ತಾನದಲ್ಲಿ ಮದುವೆ ಸೀಸನ್; ಚುನಾವಣೆ 2 ದಿನ ಮುಂದಕ್ಕೆ

Update: 2023-10-11 13:08 GMT

Photo : NDTV

ಹೊಸದಿಲ್ಲಿ: ರಾಜಸ್ಥಾನದ ವಿಧಾನಸಭಾ ಚುನಾವಣೆಗೆ ಈಗಾಗಲೇ ದಿನ ಘೋಷಣೆಯಾಗಿದ್ದು, ರಾಜ್ಯದಲ್ಲಿ ಆ ಸಮಯದಲ್ಲಿ ಮದುವೆ ಸೀಸನ್‌ ಹೆಚ್ಚಿರುವುದರಿಂದ, ಚುನಾವಣೆಯನ್ನು 2 ದಿನ ಪರಿಷ್ಕರಿಸಿ, ಮುಂದೂಡಲಾಗಿದೆ ಎಂದು ಭಾರತ ಚುನಾವಣಾ ಆಯೋಗ ತಿಳಿಸಿದೆ.

ಈ ಹಿಂದೆ ನವೆಂಬರ್ 23 ರಂದು ಮತದಾನ ಮಾಡಲು ನಿರ್ಧರಿಸಲಾಗಿತ್ತು. ಈಗ ಎರಡು ದಿನಗಳ ನಂತರ, ನವೆಂಬರ್ 25 ರಂದು ಮತದಾನ ನಡೆಯಲಿದೆ.

ಜೋಧ್‌ಪುರ ಬಿಜೆಪಿ ಸಂಸದ ಪಿಪಿ ಚೌಧರಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು, ಸಾಮಾಜಿಕ ಸಂಸ್ಥೆಗಳು ಮತ್ತು ಹಲವಾರು ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ಚುನಾವಣಾ ಆಯೋಗವು ಆ ದಿನದಂದು ದೊಡ್ಡ ಪ್ರಮಾಣದ ಮದುವೆ ಅಥವಾ ನಿಶ್ಚಿತಾರ್ಥ ಕಾರ್ಯಕ್ರಮಗಳಿರುವುದರ ಕುರಿತು ಮನವಿಗಳನ್ನು ಸ್ವೀಕರಿಸಿತ್ತು. ಅವುಗಳನ್ನು ಪರಿಗಣಿಸಿ ಮತದಾನದ ದಿನಾಂಕವನ್ನು ಚುನಾವಣಾ ಬದಲಾಯಿಸಿದೆ ಎಂದು ತನ್ನ ಹೇಳಿಕೆಯಲ್ಲಿ ಚುನಾವಣಾ ಆಯೋಗ ತಿಳಿಸಿದೆ.

ಮದುವೆ ಸೇರಿದಂತೆ ಶುಭಕಾರ್ಯಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಲಿರುವುದರಿಂದ ಜನರು ಚುನಾವಣೆಯಲ್ಲಿ ಪಾಲ್ಗೊಳ್ಳಲು ಅನಾನುಕೂಲವಾಗಬಹುದು. ಇದರಿಂದ ಮತದಾನ ಪ್ರಮಾಣ ಕಡಿಮೆಯಾಗಬಹುದು ಎಂದು ಆಯೋಗವು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News