ಛತ್ತೀಸ್ ಗಢ | ನಕ್ಸಲರಿಂದ ಐಇಡಿ ಸ್ಫೋಟ: ಇಬ್ಬರು ಯೋಧರಿಗೆ ಗಾಯ
Update: 2025-01-16 05:59 GMT
ರಾಯ್ಪುರ: ನಕ್ಸಲರು ಹುದುಗಿಸಿಟ್ಟಿದ್ದ ಸುಧಾರಿತ ಸ್ಫೋಟಕ ಸಾಧನ ಸ್ಫೋಟಗೊಂಡು ಇಬ್ಬರು ಯೋಧರು ಗಾಯಗೊಂಡಿರುವ ಘಟನೆ ಗುರುವಾರ ಬಸಾಗುಡ ಪೊಲೀಸ್ ಠಾಣೆ ಪ್ರದೇಶ ವ್ಯಾಪ್ತಿಯ ಪುತ್ಕೆಲ್ ಗ್ರಾಮದ ಬಳಿ ನಡೆದಿದೆ ಎಂದು ಬಿಜಾಪುರ್ ಪೊಲೀಸರನ್ನು ಉಲ್ಲೇಖಿಸಿ ANI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಗಾಯಗೊಂಡ ಯೋಧರನ್ನು ತೆರವುಗೊಳಿಸಲಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ ಎಂದೂ ಪೊಲೀಸರು ತಿಳಿಸಿದ್ದಾರೆ.