ನೀವು ಕಬ್ಬಿಣದಂಶ ವಿರುವ ಮಾತ್ರೆಗಳನ್ನು ಸೇವಿಸುತ್ತೀರಾ? ನಿಮಗೆ ಕಾದಿದೆ ಅಪಾಯ!
ಕಬ್ಬಿಣದಂಶ ಇರುವ ಮಾತ್ರೆಗಳು ನಿಮ್ಮ ದೇಹಕ್ಕೆ ಹತ್ತು ನಿಮಿಷದೊಳಗೆ ದೋಷವುಂಟುಮಾಡಬಹುದಾಗಿದೆ. ವೈದ್ಯರು ಸಾಮಾನ್ಯವಾಗಿ ಈ ಔಷಧಗಳನ್ನು ನೀಡುತ್ತಾರೆ. ಆದರೆ, ಸಂಶೋಧಕರು ಇದು ಹಾನಿಕಾರಿಯೆಂದು ತಿಳಿಸಿದ್ದಾರೆ. ನ್ಯಾಶನಲ್ ಹಾರ್ಟ್ ಆಂಡ್ ಲಂಗ್ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿಗಳು ಅಯರ್ನ್(ಕಬ್ಬಿಣದಂಶದ) ಮಾತ್ರೆಗಳು ಹಾನಿಕಾರಿ ಎಂಬ ಸಮಾಚಾರವನ್ನು ಸಂಶೋಧನೆ ಮೂಲಕ ಬೆಳಕಿಗೆ ತಂದಿದ್ದಾರೆ. ಶರೀರದಲ್ಲಿ ವಿಪರೀತ ಕಬ್ಬಿಣದ ಅಂಶಹೆಚ್ಚುವುದರಿಂದ ರಕ್ತ ನಾಳದ ಡಿಎನ್‌ಎ ನಾಶಗೊಳ್ಳುವುದು. ಮಾತ್ರೆ ಸೇವಿಸಿ ಹತ್ತು ನಿಮಿಷದಲ್ಲಿ ಇದರ ಅಡ್ಡಪರಿಣಾಮ ಶರೀರದ ಮೇಲಾಗುವುದು ಎಂದು ಅವರು ಹೇಳುತ್ತಾರೆ.
ನಿತ್ರಾಣ ಮತ್ತು ದುರ್ಬಲ ರೋಗಿಗಳಿಗೆ ವೈದ್ಯರು ಆಯರ್ನ್ ಮಾತ್ರೆಗೆಳನ್ನು ಬರೆಯುತ್ತಾರೆ. ರಕ್ತದ ಆಕ್ಸಿಜನ್ ವಾಹಕವಾದ ಕೆಂಪು ರಕ್ತಕಣಗಳಿಗೆ ಇದು ಅವಶ್ಯವಾಗಿದೆ. ಆರೋಗ್ಯಪ್ರದ ಪುರುಷನಿಗೆ 8.7 ಮಲಿ ಆಯರ್ನ್ ಅಗತ್ಯವಿದೆ. ಮುಟ್ಟಾದ ಮಹಿಳೆಗೆ 14.8 ಮಿಲಿಗ್ರಾಂ ಅವಶ್ಯವಾಗಿದೆ. ಆದರೆ ಇದರ ಹತ್ತುಪಟ್ಟು ಕಬ್ಬಿಣದಂಶ ಆಯರ್ನ್ ಮಾತ್ರೆಗಳಲ್ಲಿ ಇವೆ. ಇದು ದೇಹಾರೋಗ್ಯಕ್ಕೆ ಅಪಾಯಕಾರಿ ಎಂದು ಸಂಶೋದನೆಯ ನೇತೃತ್ವ ವಹಿಸಿರುವ ಡಾ,ಕ್ಲೇರ್ ಶೋವ್ಲಿನ್ ಹೇಳಿದ್ದಾರೆ. ಶರೀರದಲ್ಲಿ ಹೆಚ್ಚಳವಾದ ಕಬ್ಬಿಣದಂಶ ರಕ್ತ ಸಂಗ್ರಹಕಗಳನ್ನು ನಾಶಪಡಿಸುತ್ತವೆ ಎಂದು ಅವರು ಹೇಳಿದ್ದಾರೆ. ಆದರೆ ಕೆಲವು ರೋಗಿಗಳಿಗೆ ಇಂತಹ ಮಾತ್ರೆಗಳು ಅತಿಅಗತ್ಯವಿರುವುದರಿಂದ ಅದನ್ನು ಸೇವಿಸಬಾರದು ಎನ್ನಲಾಗದು. ಸೇವಿಸುವ ಆಹಾರದ ಮೂಲಕ ದೇಹದ ಕಬ್ಬಿಣದಂಶಗಳನ್ನು ಹೆಚ್ಚಿಸುವುದು ಅತ್ಯುತ್ತಮ ಎಂದು ಅವರು ಸಲಹೆ ನೀಡಿದ್ದಾರೆ.