ಕನ್ಹಯ್ಯಾಗೆ ಹೆದರಿದ ಗೋಡ್ಸೆ ಪರಿವಾರ
ಕೇವಲ ಒಂದೂವರೆ ತಿಂಗಳ ಹಿಂದೆ ಜೆಎನ್‌ಯು ಮತ್ತು ಎಐಎಸ್‌ಎಫ್‌ನ ದಿಲ್ಲಿ ಘಟಕದ ಹೊರತು ಯಾರಿಗೂ ಗೊತ್ತಿರದಿದ್ದ ಕನ್ಹಯ್ಯಿ ಕುಮಾರ್ ಈಗ ದೇಶ ವಿದೇಶಗಳಲ್ಲಿ ಮನೆ ಮಾತಾಗಿದ್ದಾರೆ. ದೇಶದ ಹೊಸ ತಲೆಮಾರಿನ ಯುವಕರ ಐಕಾನ್ ಆಗುತ್ತಿದ್ದಾರೆ. ಇದನ್ನು ಸಹಿಸಲು ಈ ದೇಶದ ಆಳುವ ವರ್ಗಕ್ಕೆ ಮತ್ತು ಅದನ್ನು ನಿಯಂತ್ರಿಸುವ ಪುರೋಹಿತಶಾಹಿ ಸಂಘಪರಿವಾರಕ್ಕೆ ಸಹಿಸಲು ಆಗುತ್ತಿಲ್ಲ. ದಿನೇ ದಿನೇ ಜನಪ್ರಿಯವಾಗುತ್ತಿರುವ ಕನ್ಹಯ್ಯಿ ಭಾಷಣಗಳು ಕೆಲವರಿಗೆ ನುಂಗಲಾರದ ತುತ್ತಾಗಿವೆ. ಈಗ ಕನ್ಹಯ್ಯಾರ ಬಾಯಿ ಮುಚ್ಚಿಸಲು ಎರಡು ರೀತಿಯ ಹುನ್ನಾರಗಳು ನಡೆದಿವೆ. ಒಂದೆಡೆ ಸಂಘಪರಿವಾರ ಪ್ರಭುತ್ವದ ಮೂಲಕ ಆತನ ದನಿ ಹತ್ತಿಕ್ಕಲು ಯತ್ನಿಸುತ್ತಿದೆ. ಇನ್ನೊಂದೆಡೆ ಕನ್ಹಯ್ಯೊ ಬರೀ ಕನ್ಹಯ್ಯೊನಾಗಿರಲಿ ಕಮ್ಯೂನಿಸ್ಟ್ ಸಿದ್ಧಾಂತದಿಂದ ದೂರ ಸರಿಯಲಿ ಎಂದು ಕೆಲ ಚಡ್ಡಿ ಪತ್ರಕರ್ತರು ಉಪದೇಶ ನೀಡುತ್ತಿದ್ದಾರೆ. ಕನ್ಹಯ್ಯಾ ಪಕ್ಷಾತೀತ ವಿದ್ಯಾರ್ಥಿ ನಾಯಕನಾಗಿ ಬೆಳೆಯಬೇಕೆಂಬುದು ಈ ಕಾರ್ಪೊರೇಟ್ ಕೃಪಾ ಪೋಷಿತ ಮೀಡಿಯಾಗಳ ವಾದ. ಕನ್ಹಯ್ಯಾ ಬರೀ ಕನ್ಹಯ್ಯಾನಾಗಿದ್ದರೆ ಇವರು ಆತನಿಗೆ ಉಪದೇಶ ನೀಡುತ್ತಿರಲಿಲ್ಲ. ಆದರೆ ಈ ಕನ್ಹಯ್ಯಿ ಸಂಘಪರಿವಾರದ ಕೋಮುವಾದದ ವಿರೋಧಿ ಆಗಿದ್ದಾರೆ. ಅಂಬೇಡ್ಕರ್, ಮಾರ್ಕ್ಸ್ ಬಗ್ಗೆ ಮಾತಾಡುತ್ತಾರೆ. ಲಾಲ್ ಸಲಾಂ, ಜೈಭೀಮ್ ಎನ್ನುತ್ತಿದ್ದಾರೆ. ಇದನ್ನು ಸಹಿಸಲು ಇವರಿಂದ ಸಾಧ್ಯವಾಗುತ್ತಿಲ್ಲ. ದೇಶಕ್ಕೆ ಬೆಂಕಿ ಹಚ್ಚುವ ತೊಗಾಡಿಯಾ, ಪ್ರಾಚಿ ಸಾಧ್ವಿ, ಸಾಕ್ಷಿ ಮಹಾರಾಜ್‌ರಂಥವರ ಮಾತು ಎಂಜಾಯ್ ಮಾಡುವ ಇವರು ಕನ್ಹಯ್ಯಿರಿಗೆ ಎಡದತ್ತ ಹೋಗಬೇಡ ಎಂದು ಉಪದೇಶ ನೀಡುತ್ತಿದ್ದಾರೆ. ದೇಶದ ದಲಿತರು, ಆದಿವಾಸಿಗಳು, ದುಡಿಯುವ ಜನರು, ಹಿಂದುಳಿದವರು ತಲೆ ಎತ್ತಿ ನಿಂತಾಗಲೆಲ್ಲ ‘‘ನಿಮಗೆ ಸಿದ್ಧಾಂತ ಬೇಡ’’ ಎಂದು ಉಪದೇಶ ನೀಡುವ ಈ ಪಂಡಿ ತರು ಶೇ.2ರಷ್ಟಿರುವ ತಮ್ಮ ವರ್ಗದ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳುವಲ್ಲಿ ಆಸಕ್ತಿ ಹೊಂದಿರು ತ್ತಾರೆ. ಆರೆಸ್ಸೆಸ್ ತಮ್ಮ ಹಿತರಕ್ಷಿಸುವ ಆಪತ್ಪಾಂಧವ ಎಂಬುದು ಈ ದೇಶದ ಮೇಲ್ವರ್ಗದ ನಿಲುವಾಗಿದೆ. ಕನ್ಹಯ್ಯಾ ದೇಶದ್ರೋಹಿ ಎಂದು ಆರೋಪ ಹೊರಿಸಿ ಅಪಪ್ರಚಾರ ಮಾಡಿ ದ್ದಾಯಿತು. ಆದರೆ, ಇದನ್ನು ಸಾಬೀತು ಪಡಿಸಲು ಕೇಂದ್ರ ಸರಕಾರದಿಂದ ಸಾಧ್ಯವಾಗುತ್ತಿಲ್ಲ. ನಕಲಿ ಸಿಡಿಗಳು, ಆಡಿಯೊ ತುಣುಕುಗಳು ನ್ಯಾಯಾಲಯಗಳಲ್ಲಿ ನೆಗೆದು ಬಿದ್ದು ಹೋಗುತ್ತಿವೆ. ಆದರೂ ನಾಗಪುರದ ಜಗದ್ಗುರುಗಳಿಂದ ಜೆಎನ್‌ಯು ನಾಶ ಮಾಡಲು ಒತ್ತಡ ಬರುತ್ತಲೇ ಇದೆ. ಆರೆಸ್ಸೆಸ್‌ಗೆ ಕಳೆದ ನಲ್ವತ್ತು ವರ್ಷಗಳಲ್ಲಿ ಎಂದೂ ಇಂಥ ಪ್ರತಿರೋಧ ಎದುರಾ ಗಿರಲಿಲ್ಲ. ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ತನ್ನ ಮನುವಾದಿ, ಕೋಮು ವಾದಿ ಅಜೆಂಡಾ ಹೇರಲು ಹೋಗಿ ಅದು ತೀವ್ರ ಮುಖಭಂಗಕ್ಕೆ ಒಳಗಾಗಿದೆ. 28 ವರ್ಷದ ಈ ಯುವಕ ಕನ್ಹಯ್ಯೆ ಕಮಾರ್ ಪ್ರಧಾನಿ ಮೋದಿಗೆ ಮಾತ್ರವಲ್ಲ ಆರೆಸ್ಸೆಸ್, ಸರಸಂಘ ಚಾಲಕ ಮೋಹನ್ ಭಾಗವತ್‌ರಿಗೆ ದುಃಸ್ವಪ್ನವಾಗಿ ಕಾಡುತ್ತಿದ್ದಾರೆ. ತಮ್ಮ ಶ್ರೇಣೀಕೃತ ಹಿಂದೂರಾಷ್ಟ್ರ ನಿರ್ಮಾಣದ ಕನಸು ಭಗ್ನಗೊಂಡದ್ದರಿಂದ ಇವರೆಲ್ಲ ಹತಾಶರಾಗಿದ್ದಾರೆ.
ಗೋಡ್ಸೆ ಮೂಲಕ ಬಾಪೂಜಿಯನ್ನು ಕೊಲ್ಲಿಸಿ ಆತ ತಮ್ಮವನಲ್ಲ ತಲೆಕೆಟ್ಟವನು ಎಂದು ತಪ್ಪಿಸಿಕೊಂಡರು. ಬಾಬರಿ ಮಸೀದಿ ಕೆಡವಿ ದಕ್ಕಿಸಿಕೊಂಡರು. ಗುಜರಾತ್‌ನಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನರನ್ನು ಕೊಂದು ಪಾರಾದರು. ತೀರ ಇತ್ತೀಚೆಗೆ ದಾಭೋಳ್ಕರ್, ಗೋವಿಂದ ಪನ್ಸಾರೆ, ಕಲಬುರ್ಗಿ ಅವರನ್ನು ಕೊಂದು ಅಮಾಯಕರಂತೆ ನಟಿಸಿದರು. ಆದರೆ ರೋಹಿತ್ ವೇಮುಲಾರನ್ನು ಕೊಂದು ದಕ್ಕಿಸಿಕೊಳ್ಳಲಾಗಲಿಲ್ಲ. ಈ ಕಲಂಕದಿಂದ ಪಾರಾಗಲು ಕನ್ಹಯ್ಯಿ ಕುಮಾರ್‌ರನ್ನು ದೇಶದ್ರೋಹಿಯನ್ನಾಗಿ ಮಾಡಲು ಹೋಗಿ ಈಗ ಇಂಗುತಿಂದ ಮಂಗನಂತಾಗಿದ್ದಾರೆ. ಹೀಗಾಗಿ ಇವರೀಗ ಹತಾಶೆಗೊಂಡಿದ್ದಾರೆ. ಈ ಹತಾಶೆ ಎಲ್ಲಿಯವರೆಗೆ ಹೋಗಿದೆ ಅಂದರೆ ಹಿಂದೆ ಗಾಂಧೀಜಿಯನ್ನು ಮುಗಿಸಿದಂತೆ ಕನ್ಹಯ್ಯಾ ಕುಮಾರ್‌ರನ್ನು ಮುಗಿಸುವ ಸಂಚುಗಳು ವರದಿಯಾಗುತ್ತಿವೆ. ನ್ಯಾಯಾಲಯದ ಅಂಗಳದಲ್ಲೇ ಪೊಲೀಸ್ ರಕ್ಷಣೆಯಲ್ಲಿದ್ದಾಗಲೇ ಈ ಯುವಕನ ಕೊಲೆ ಯತ್ನ ನಡೆಯಿತು. ಈಗಲೂ ತಲೆ ತೆಗೆಯುವುದಾಗಿ, ನಾಲಗೆ ಕತ್ತರಿಸುವುದಾಗಿ ಬೆದರಿಕೆಗಳು ಬರುತ್ತಲೇ ಇವೆ. ಹೇಗಾದರೂ ಮಾಡಿ ಕನ್ಹಯ್ಯಾರ ಬಾಯಿ ಮುಚ್ಚಿ ಸಬೇಕೆಂದು ಗೋಳ್ವಲ್ಕರ್‌ವಾದಿ, ಗೋಡ್ಸೆವಾದಿ ಶಕ್ತಿಗಳು ಮಸಲತ್ತು ನಡೆಸುತ್ತಲೇ ಇವೆ.
ಕನ್ಹಯ್ಯ ಈ ಮನುವಾದಿ ಹಿಟ್ಲರ್ ಮರಿಗಳಿಗೆ ನುಂಗಲಾರದ ತುತ್ತಾಗಿದ್ದಾರೆ. ದಾಭೋಳ್ಕರ್, ಪನ್ಸಾರೆ, ಕಲಬುರ್ಗಿ ಅವರಂಥ ವಯೋವೃದ್ಧರನ್ನು ತಲೆಯಲ್ಲಿ ಮೆದುಳಿಲ್ಲದ ತರುಣರ ಮೂಲಕ ಕೊಲ್ಲಿಸಿದರು. ನಮ್ಮ ಯುವಕರೇಕೆ ಹೀಗಾಗುತ್ತಿದ್ದಾರೆ ಎಂದು ಆತಂಕ ಉಂಟಾಗುತ್ತಿರುವಾಗಲೇ, ಎಲ್ಲ ಯುವಕರು ಹಾಗಿಲ್ಲ ನಾವು ಬಹು ಮುಖಿಭಾರತದ ರಕ್ಷಣೆಗಿದ್ದೇವೆ ಎಂದು ಜೆಎನ್‌ಯು ವಿದ್ಯಾರ್ಥಿಗಳು ಕನ್ಹಯ್ಯಾ ನೇತೃತ್ವದಲ್ಲಿ ಬೀದಿಗಿಳಿದಿದ್ದಾರೆ.
ಇದರಿಂದ ದಿಕ್ಕು ತಪ್ಪಿದ ಈ ನಕಲಿ ದೇಶಭಕ್ತರು, ಗಾಂಧಿ ಹಂತಕರು ದೇಶಭಕ್ತಿ ಸರ್ಟಿ ಫಿಕೇಟ್ ನೀಡಲು ಹೊರಟಿದ್ದಾರೆ. ದೇಶಕ್ಕೆ 9 ಸಾವಿರ ಕೋಟಿ ರೂ. ಟೋಪಿ ಹಾಕಿ ಓಡಿ ಹೋದ ಮಲ್ಯನಿಗೆ ಪಲಾಯನ ಮಾಡಲು ನೆರವು ನೀಡಿದ, ರವಿಶಂಕರನಂಥ ಅದ್ಯಾತ್ಮ ವ್ಯಾಪಾರಿಯ ದಲ್ಲಾಳಿಗಿರಿ ಮಾಡುವ ಈ ನಯವಂಚಕರು ದೇಶಕ್ಕಾಗಿ ಬಲಿದಾನ ಮಾಡಿದ ಭಗತ್‌ಸಿಂಗ್ ಪರಂಪರೆಗೆ ಸೇರಿದ ಕನ್ಹಯ್ಯಾ ಕುಮಾರ್‌ಗೆ ಸರ್ಟಿಫಿಕೇಟ್ ನೀಡಿ ನಗೆಗೀಡಾಗಿದ್ದಾರೆ. ಕನ್ಹಯ್ಯಾ ಭಾಷಣದ ಶೈಲಿ ಅತ್ಯದ್ಭುತವಾಗಿದೆ. ಜನಸಾಮಾನ್ಯರ ಹೃದಯವನ್ನು ತಟ್ಟುವ ಭಾಷೆ ಆತನದು. ಬರೀ ಶೈಲಿ ಮಾತ್ರವಲ್ಲ ಪ್ರತಿಪಾದಿಸಿದ ವಿಚಾರಗಳಿವೆಲ್ಲಅವು ಈ ಯುವಕನನ್ನು ಅತ್ಯಂತ ಎತ್ತರಕ್ಕೆ ಒಯ್ದು ನಿಲ್ಲಿಸಿದವು. ಕನ್ಹಯ್ಯೆ ಮಾತಿನಲ್ಲಿ ವಿಶೇಷವಾ ಗಿರುವುದೇನೆಂದರೆ ಜಾತ್ಯತೀತ ಭಾರತದ ನಿಜವಾದ ಶತ್ರುಗಳು ಯಾರು, ಸಮಾನತೆಯ ಸಮಾಜ ನಿರ್ಮಾಣಕ್ಕೆ ಅಡ್ಡಿಯಾಗಿರುವವರು ಯಾರು ಎಂಬುದನ್ನು ಸ್ಪಷ್ಟವಾಗಿ ಗುರು ತಿಸಿದ ಕನ್ಹಯ್ಯಿ ಸಂಘಪರಿವಾರವೇ ಈ ದೇಶದ ಶತ್ರು ಎಂದು ಸ್ಪಷ್ಟವಾಗಿ ಹೇಳಿದರು.
ಕನ್ಹಯ್ಯ ಭಾಷಣ ಎಷ್ಟು ಜನಪ್ರಿಯವಾಗಿದೆ ಅಂದರೆ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೆ ಮೋದಿ ಭಾಷಣವನ್ನು ಹುಚ್ಚೆದ್ದು ಕೇಳುತ್ತಿದ್ದವರು ಈಗ ಕನ್ಹಯ್ಯಿ ಭಾಷಣಕ್ಕೆ ಮಾರು ಹೋಗಿದ್ದಾರೆ. ಯೂಟ್ಯೂಬ್‌ಗಳಲ್ಲಿ ಹರಿದಾಡುವ ಈ ಭಾಷಣ ತರುಣರನ್ನು ಆಕರ್ಷಿಸುತ್ತಿದೆ. ಕನ್ಹಯ್ಯಿ ಕುಮಾರ್‌ನಂತೆ ನಾನು ಎಡಪಂಥೀಯರ ಜೊತೆ ಬೆಳೆದು ಬಂದವನು, ಕಳೆದ ನಾಲ್ಕೂವರೆ ದಶಕಗಳಲ್ಲಿ ಎಸ್.ಎ.ಡಾಂಗೆ, ಇಎಂಎಸ್, ಜ್ಯೋತಿಬಸು ಅವರಿಂದ ಹಿಡಿದು ಇತ್ತೀಚಿನ ಬರ್ದನ್‌ವರೆಗೆ ಅನೇಕರ ಭಾಷಣಗಳನ್ನು ಕೇಳಿದ್ದೇನೆ. ಆದರೆ ಕನ್ಹಯ್ಯೋ ಭಾಷಣ ನನ್ನ ಮೇಲೆ ಪ್ರಭಾವಿಸಿದಷ್ಟು ಇನ್ಯಾರ ಭಾಷಣವೂ ಪ್ರಭಾವಿಸಿಲ್ಲ. ಇಡೀ ದೇಶದ ಯುವ ಪೀಳಿಗೆಯೇ ಕನ್ಹಯ್ಯಾರ ಮೂಲಕ ಮಾತಾನಾಡು ತ್ತಿದೆಯೇನೋ ಎಂಬಂತೆ ಭಾಸವಾಗುತ್ತಿತ್ತು. ಅಂತಲೆ ಚಿತ್ರತಾರೆ ನಂದಿತಾ ದಾಸ್, ರಂಗಕರ್ಮಿ ಸಂಜನಾ ಕಪೂರ್(ರಾಜ್‌ಕಪೂರ್ ಮೊಮ್ಮಗಳು) ಕನ್ಹಯ್ಯಿ ಭಾಷಣ ಮೆಚ್ಚಿಕೊಂಡು ಬರೆದಿದ್ದಾರೆ. ಈ ಹಿಂದಿನ ಕಮ್ಯೂನಿಸ್ಟ್ ನಾಯಕರು ದುಡಿಯುವ ಜನತೆಗಾಗಿ ತಮ್ಮ ಬದುಕನ್ನೇ ಅರ್ಪಿಸಿದರೂ ಜಾತಿ ವ್ಯವಸ್ಥೆಯ ಕ್ರೌರ್ಯದ ಬಗ್ಗೆ ಹೆಚ್ಚು ಪ್ರಸ್ತಾಪಿಸುತ್ತಿರಲಿಲ್ಲ. ಅಂಬೇಡ್ಕರ್, ಶಾಹು ಮಹಾರಾಜ್, ಜ್ಯೋತಿಬಾ ಫುಲೆ ಅವರ ಬಗ್ಗೆ ಮಾತಾಡು ತ್ತಿರಲಿಲ್ಲ. ಸಿಪಿಐ ನಾಯಕ ಎಸ್.ಜಿ.ಸರ್ದೇಸಾಯಿ ಎಪ್ಪತ್ತರ ದಶಕದ ಕೊನೆಯಲ್ಲಿ ಜಾತಿ ವ್ಯವಸ್ಥೆಯ ಕ್ರೌರ್ಯದ ಬಗ್ಗೆ ಮೊದಲ ಬಾರಿ ಬರೆದರು. ಆದರೆ ಪಕ್ಷದಲ್ಲಿ ಆ ಬಗ್ಗೆ ಹೆಚ್ಚು ಚರ್ಚೆಯಾಗಲಿಲ್ಲ. ಚರ್ಚೆಯಾಗದಿದ್ದರೂ ನಿಧಾನವಾಗಿ ಪಕ್ಷ ಅದನ್ನು ಒಪ್ಪಿಕೊಂಡಿತು. ಕನ್ಹಯ್ಯಿ ಬೆಳೆದು ಬಂದ ಸಿಪಿಐ ಪಕ್ಷದ ಬಲ ಲೋಕಸಭೆಯಲ್ಲಿ ಹನ್ನೊಂದರಿಂದ ಒಂದಕ್ಕೆ ಕುಸಿಯಿತು. ಈಗ ಅದೆಲ್ಲ ಚರ್ಚೆ ಅನಗತ್ಯ. ಕನ್ಹಯ್ಯೆ ಭಾಷಣ ಈ ಪರಿ ಜನ ಮಾನಸ ಗೆಲ್ಲಲು ಕಾರಣ ಆತ ಆಧುನಿಕ ಭಾರತದ ನಿಜವಾದ ಶತ್ರುವನ್ನು ಗುರುತಿಸಿದ್ದು ಮಾತ್ರವಲ್ಲ, ತನ್ನ ಭಾಷಣದುದ್ದಕ್ಕೂ ಡಾ. ಅಂಬೇಡ್ಕರ್, ಭಗತ್ ಸಿಂಗ್, ರೋಹಿತ್ ವೇಮುಲಾ ಬಗ್ಗೆ ಪ್ರಸ್ತಾಪಿಸಿದ್ದು. ತನ್ನ ಐಕಾನ್ ಬಾಬಾ ಸಾಹೇಬರು, ಭಗತ್ ಸಿಂಗ್ ಎಂದು ಸಾರಿದ್ದು ಗಮನಾರ್ಹವಾಗಿದೆ. ಏಕಲವ್ಯನ ಹೆಬ್ಬೆರಳು ಕತ್ತರಿಸಿದ, ಶಂಭೂಕನ ಶಿರಚ್ಛೇದ ಮಾಡಿದ ಈ ಶಕ್ತಿಗಳು ಕನ್ಹಯ್ಯಿ ಮೇಲೆ ಈ ಪರಿ ಕೋಪಗೊಳ್ಳಲು ಕಾರಣವೇನು ಎಂಬುದು ಸ್ಪಷ್ಟವಾಗಿದೆ. ಜೆಎನ್‌ಯು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಎಬಿವಿಪಿಯನ್ನು ಸೋಲಿಸಿ ಜಯಶಾಲಿಯಾಗಿದ್ದು ಮಾತ್ರ ಕಾರಣವೆ; ಅಲ್ಲ ಇದೊಂದೇ ಕಾರಣವಲ್ಲ. ಈ ವಿಶ್ವ ವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಕನ್ಹಯ್ಯಾ ಕುಮಾರ್ ಮಾಡಿದ ಎರಡು ಭಾಷಣಗಳು ಸಂಘಿಗಳ ಈ ಆಕ್ರೋಶಕ್ಕೆ ಕಾರಣ. ಈ ಭಾಷಣಗಳಲ್ಲಿ ಚಡ್ಡಿಗಳ ದೇಶದ್ರೋಹದ, ಜನದ್ರೋಹದ ಕತೆಯನ್ನೇ ಕನ್ಹಯ್ಯೋ ಬಿಚ್ಚಿಟ್ಟಿದ್ದಾರೆ. ‘‘ನಮಗೆ ಬಾಬಾ ಸಾಹೇಬರ ಸಂವಿಧಾನದಲ್ಲಿ ನಂಬಿಕೆಯಿದೆ. ನಾಗಪುರದಲ್ಲಿ ಹೇಳಿ ಕೊಡುವ ಸಂವಿಧಾನದ ಮೇಲೆ ನಂಬಿಕೆಯಿಲ್ಲ’’. ಬ್ರಿಟಿಷರ ಕ್ಷಮೆ ಕೇಳಿದ ಸಾವರ್ಕರ್ ಚೇಲಾಗಳಿವರು. ಲಾಲ್ ಸಲಾಮ್ ಜೊತೆಗೆ ನೀಲಿ ಸಲಾಮ್ ಮಾತಾಡಿದಾಗ, ಮಾರ್ಕ್ಸ್ ಜೊತೆ ಬಾಬಾ ಸಾಹೇಬ ಅಂಬೇಡ್ಕರ್ ಹೆಸರು ಹೇಳಿದಾಗ ಈ ಸಂಘಿಗಳಿಗೆ ತಳಮಳ ಉಂಟಾಗುತ್ತದೆ. ಹೀಗೆಲ್ಲ ಕನ್ಹಯ್ಯ್ ಕುಮರ್ ಮಾತಾಡಿದ್ದು ಫ್ಯಾಶಿಸ್ಟ್ ಪರಿವಾರಕ್ಕೆ ಸಹಿಸಲಾಗಲಿಲ್ಲ. ಈ ವರೆಗೆ ನಿಜವಾಗಿ ಒಂದುಗೂಡ ಬೇಕಾದ ಮಿತ್ರರು ಎಲ್ಲೆಲ್ಲೊ ಹರಿದು ಹಂಚಿ ಹೋಗಿದ್ದರು. ಎಡಪಕ್ಷಗಳು ಚುನಾವಣೆ ಬಂದಾಗ ಒಮ್ಮೆ ತಮಿಳುನಾಡಿನಲ್ಲಿ ಜಯಲಲಿತಾ ಜೊತೆ, ಇನ್ನೊಮ್ಮೆ ಕರುಣಾನಿಧಿ ಜೊತೆ, ಕರ್ನಾಟಕದಲ್ಲಿ ದೇವೇಗೌಡರ ಜೊತೆ ಹೀಗೆ ತತ್ವಬಾಹಿರ ಮೈತ್ರಿ ಮಾಡಿಕೊಳ್ಳುತ್ತಿದ್ದವು. ಈಗ ಅದಕ್ಕೆಲ್ಲ ಕೊನೆಯಾಗಿದೆ. ನಮ್ಮ ಶತ್ರುಗಳು ಯಾರು, ಮಿತ್ರರು ಯಾರು ಎಂಬುದು ಸ್ಪಷ್ಟವಾಗಿದೆ. ಹೈದರಾಬಾದ್ ವಿವಿಯಲ್ಲಿ ರೋಹಿತ್ ವೇಮುಲಾ ಆತ್ಮಹತ್ಯೆ ನಂತರ ಈ ದೇಶದ ರಾಜಕೀಯ ಮಾತ್ರವಲ್ಲ ಸಾಮಾಜಿಕ ಆಯಾಮವೇ ಬದಲಾಯಿತು. ರೋಹಿತ್ ಹತ್ಯೆ ಯನ್ನು ಮುಚ್ಚಿಹಾಕಲು ಜೆಎನ್‌ಯು ನಾಶಕ್ಕೆ ಮೋದಿ ಸರಕಾರ ಮುಂದಾದಾಗ ಈ ದೇಶ ಮುಂದೆ ಸಾಗಬೇಕಾದ ದಿಕ್ಕು, ತಲುಪಬೇಕಾದ ಗುರಿ ಸ್ಪಷ್ಟವಾಗಿ ಗೋಚರಿಸಿತು. ಅಂಬೇಡ್ಕರ್ ರೂಪಿಸಿದ ಸಂವಿಧಾನ ನಾಶ ಮಾಡಲು ಹೊರಟ ಮನುವಾದಿ ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧ ಯಾರೆಲ್ಲ ಒಂದಾಗಬೇಕೆಂಬುದನ್ನು ಜೆಎನ್‌ಯು ತೋರಿಸಿತು. ಈ ಹೊಸ ಧ್ರುವೀಕರಣದ ಸೂಚನೆ ಸಂಸತ್ತಿನಲ್ಲಿ ಮೊದಲ ಬಾರಿ ಕಂಡುಬಂತು. ಸಾಮಾನ್ಯವಾಗಿ ತಮ್ಮ ಬಿಎಸ್ಪಿ ಪಕ್ಷಕ್ಕೆ ಸಂಬಂಧ ಪಡದ ಹಾಗೂ ತನ್ನ ಉತ್ತರಪ್ರದೇಶ ರಾಜ್ಯದ ದಲಿತ ಸಮುದಾಯಕ್ಕೆ ಸಂಬಂಧ ಪಡದ ವಿಷಯದ ಬಗ್ಗೆ ಎಂದೂ ಮಾತಾಡದ ಮಾಯಾವತಿ ಅವರು ರಾಜ್ಯಸಭೆಯಲ್ಲಿ ಎದ್ದುನಿಂತು ಜೆಎನ್‌ಯುನಲ್ಲಿ ಮೋದಿ ಸರಕಾರ ಮಾಡಿದ ಅವಾಂತರಗಳ ಬಗ್ಗೆ ಸಚಿವೆ ಸ್ಮತಿ ಇರಾನಿಅವರನ್ನು ತರಾಟೆಗೆ ತೆಗೆದುಕೊಂಡರು. ಪ್ರತಿಷ್ಠಿತ ಜವಾಹರಲಾಲ್ ನೆಹರೂ ವಿಶ್ವವಿದ್ಯಾ ನಿಲಯದ ಮೇಲೆ ಆರೆಸ್ಸೆಸ್ ತಮ್ಮ ಫ್ಯಾಶಿಸ್ಟ್ ಅಜೆಂಡಾ ಹೇರುತ್ತಿದೆ ಎಂದು ತರಾಟೆಗೆ ತೆಗೆದುಕೊಂಡ ಮಾಯಾವತಿ ಕನ್ಹಯ್ಯಿ ಕುಮಾರ್ ಬಂಧನವನ್ನು ಬಲವಾಗಿ ಖಂಡಿಸಿದರು. ರೋಹಿತ್ ಹತ್ಯೆಗೆ ಸರಕಾರವೇ ಕಾರಣ ಎಂದರು. ಹೈದರಾಬಾದ್ ವಿಶ್ವವಿದ್ಯಾನಿಲಯ, ಜವಾಹರಲಾಲ್ ನೆಹರೂ ವಿಶ್ವವಿದ್ಯಾ ನಿಲಯ, ಮಾತ್ರವಲ್ಲ ದೇಶದ ಕೆಲ ವಿಶ್ವ ವಿದ್ಯಾನಿಲಯಗಳಲ್ಲಿ ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆಗಳು ಮತ್ತು ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಒಂದುಗೂಡಿವೆ. ಅಂಬೇಡ್ಕರ್ ನನ್ನ ಆದರ್ಶ ಎಂದು ಕನ್ಹಯ್ಯಾ ಬಹಿರಂಗವಾಗಿ ಹೇಳುತ್ತಿದ್ದಾರೆ. ಕಮ್ಯುನಿಸ್ಟ್ ಚಳವಳಿಯ ನಿಜವಾದ ವಾರಸುದಾರರು ದಲಿತರು. ಈ ಪಕ್ಷವನ್ನು ಅವರಿಗೆ ಬಿಟ್ಟುಕೊಡಬೇಕೆಂದು ಕಲಬುರ್ಗಿಯ ಕಮ್ಯೂನಿಸ್ಟ್ ನಾಯಕರಾಗಿದ್ದ ಶ್ರೀನಿವಾಸಗುಡಿ ಆಗಾಗ ಹೇಳುತ್ತಿದ್ದರು. ಈ ಕೆಂಬಾವುಟದ ನಾಯಕತ್ವ ಈ ದೇಶದ ನಿಜವಾದ ದಲಿತರ ಕೈಗೆ ನಿಧಾನವಾಗಿ ಬರುತ್ತಿದೆ. ಈ ಬಾರಿ ಎಸ್‌ಎಫ್‌ಐ ಅಖಿಲ ಭಾರತ ಜಂಟಿ ಕಾರ್ಯದರ್ಶಿಯಾಗಿ ದಲಿತ ತರುಣ ಅಧಿಕಾರ ವಹಿಸಿಕೊಂಡಿದ್ದಾರೆ. ಈ ನಡುವೆ ಕನ್ಹಯ್ಯಾ ಕುಮಾರ್ ಅವರನ್ನು ಪಶ್ಚಿಮ ಬಂಗಾಳ ಮತ್ತು ಕೇರಳ ಚುನಾವಣೆಯ ಪ್ರಚಾರಕ್ಕೆ ಬಳಸಿಕೊಳ್ಳುವ ಮಾತು ಕಮ್ಯೂನಿಸ್ಟ್ ನಾಯಕರಿಂದ ಕೇಳಿ ಬಂತು. ನಮ್ಮ ಪಾರ್ಟಿಗೆ ತರುಣ ಮುಖಗಳೇ ಇಲ್ಲ. ಕನ್ಹಯ್ಯ್ ಬಂದರೆ ಓಟು ಬರುತ್ತವೆ ಎಂದು ಬಂಗಾಳದ ಸಂಗಾತಿಗಳು ಹೇಳುತ್ತಿದ್ದಾರೆ. ಆದರೆ ಚುನಾವಣಾ ರಾಜಕಾರಣಕ್ಕೆ ಬರುವ ಇಷ್ಟ ಕನ್ಹಯ್ಯೆರಿಗಿಲ್ಲ. ಈಗ ಕನ್ಹಯ್ಯೆ ಗಂಭೀರ ಅಧ್ಯಯನದಲ್ಲಿ ತೊಡಗಿದ್ದಾಗಿ ಹೇಳಿಕೊಂಡಿದ್ದಾರೆ. ಸಂಘಪರಿವಾರದ ಫ್ಯಾಶಿಸ್ಟ್ ರಾಷ್ಟ್ರೀಯವಾದದ ವಿರುದ್ಧ, ನೈಜ ರಾಷ್ಟ್ರೀಯವಾದದ ಬಗ್ಗೆ ಬರೆಯುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಅದಕ್ಕಾಗಿ ಡಾ.ಅಂಬೇಡ್ಕರ್ ಮತ್ತು ಭಾರತ ಕಮ್ಯೂನಿಸ್ಟ್ ಪಕ್ಷದ ಮೊಲದ ಪ್ರಧಾನ ಕಾರ್ಯದರ್ಶಿಯಾಗಿದ್ದ ಪಿ.ಸಿ.ಜೋಶಿ ಮತ್ತು ನೆಹರೂ ಸಾಹಿತ್ಯ ಓದುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಈ ದೇಶದಲ್ಲಿ ಪ್ರಜಾಪ್ರಭುತ್ವವನ್ನೇ ನಾಶ ಮಾಡುವಷ್ಟು ಬಲಿಷ್ಠವಾಗಿರುವ ಮನುವಾದಿ ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧ ಬಲಿಷ್ಠ ಫ್ಯಾಸಿಸ್ಟ್ ವಿರೋಧಿ ಚಳವಳಿ ಕಟ್ಟಬೇಕಾಗಿದೆ. ಬರೀ ಚುನಾವಣೆ ಮೈತ್ರಿಗಳಿಂದ ಫ್ಯಾಶಿಸಂ ಸೋಲಿಸಲು ಸಾಧ್ಯವಿಲ್ಲ. ಅಂತಲೆ ಕನ್ಹಯ್ಯಾ ಕುಮಾರ್ ಫ್ಯಾಶಿಸ್ಟ್ ವಿರೋಧಿ ಆಂದೋಲನದ ಐಕಾನ್ ಆಗಿ ಹೊರಹೊಮ್ಮಬೇಕಾಗಿದೆ. ಯಾವುದೇ ಕಾರಣಕ್ಕೂ ಚುನಾವಣಾ ರಾಜಕಾರಣಕ್ಕೆ ಕನ್ಹಯ್ಯೆರನ್ನು ತರಬಾರದು. ಇದು ಇಲ್ಲಿಗೆ ಮುಗಿಯುವ ಹೋರಾಟವಲ್ಲ. ಭಾರತವನ್ನು ಶ್ರೇಣೀಕೃತ ಹಿಂದು ರಾಷ್ಟ್ರವನ್ನಾಗಿ ಮಾಡಲು ಸಂಘಪರಿವಾರ ತನ್ನೆಲ್ಲ ಶಕ್ತಿಯನ್ನು ವಿನಿಯೋಗಿಸುತ್ತಿದೆ. ಮೋದಿ ಸರಕಾರ ನಾಗಪುರದ ಸೂತ್ರದ ಬೊಂಬೆಯಂತೆ ಕುಣಿಯುತ್ತಿದೆ. ಬರಲಿರುವ ದಿನಗಳು ನಿರ್ಣಾಯಕ ಸಂಘರ್ಷದ ದಿನಗಳಾಗಿವೆ. ಈ ಮಹಾಸಮರದಲ್ಲಿ ಮನುವಾದಿ ಶಕ್ತಿಗಳನ್ನು ಹಿಮ್ಮೆಟ್ಟಿಸಲು ಕನ್ಹಯ್ಯಿರಂಥ ಯುವಕರ ಪಡೆ ಸಿದ್ಧವಾಗಬೇಕಾಗಿದೆ. ಸಂಘಪರಿವಾರದ ಫ್ಯಾಶಿಸ್ಟ್ ಶಕ್ತಿಗಳನ್ನು ರಾಜಕೀಯ ಪ್ರತಿರೋಧದಿಂದ ಮಾತ್ರ ಎದುರಿಸಲು ಸಾಧ್ಯವಿಲ್ಲ. ಸಾಂಸ್ಕೃತಿಕ, ಸಾಮಾಜಿಕ ಪ್ರತಿರೋಧವೂ ತುರ್ತು ಅಗತ್ಯವಾಗಿದೆ. ದಲಿತಶಕ್ತಿ ಮತ್ತು ಎಡಶಕ್ತಿ ಒಂದುಗೂಡಬೇಕಾಗಿದೆ. ಜೈಭೀಮ್-ಲಾಲ್ ಸಲಾಂ ಘೋಷಣೆ ಎಲ್ಲೆಡೆ ಮೊಳಗಬೇಕಾಗಿದೆ.