ಹೊಟ್ಟೆಯ ಬೊಜ್ಜು ಕರಗಿಸಲು ಇಲ್ಲಿವೆ 8 ಸರಳ ದಾರಿಗಳು

Update: 2016-07-26 18:03 GMT

ಹೊಟ್ಟೆಯ ಕೊಬ್ಬನ್ನು ಕರಗಿಸುವುದು ಸುಲಭವಲ್ಲ. ಆದರೆ ಅದಕ್ಕೂ ಕೆಲವು ಹಾದಿಗಳಿವೆ.

1. ನಿಮ್ಮ ದಿನವನ್ನು ಲಿಂಬೆ ರಸದ ಜೊತೆಗೆ ಆರಂಭಿಸಿ. ಬಿಸಿ ನೀರಿಗೆ ಲಿಂಬೆ ರಸ ಬೆರೆಸಿ ಉಪ್ಪು ಹಾಕಿ. ಪ್ರತೀ ದಿನ ಬೆಳಗ್ಗೆ ಇದನ್ನು ಕುಡಿಯುವ ಅಭ್ಯಾಸ ಮಾಡಿ. ಇದು ನಿಮ್ಮ ಚಯಾಪಚಯ ಕ್ರಿಯೆಗೆ ನೆರವಾಗುತ್ತದೆ.

2. ಬಿಳಿ ಅನ್ನ ಕಡಿಮೆ ಸೇವಿಸಿ. ಬದಲಾಗಿ ಗೋಧಿ ಆಹಾರ ತಿನ್ನಿ. ಬ್ರೌನ್ ರೈಸ್, ಬ್ರೌನ್ ಬ್ರೆಡ್, ಇಡೀ ಧಾನ್ಯ, ಓಟ್ಸ್ ಮತ್ತು ಕ್ವಿನೋವಾ ಆಹಾರ ನೆರವಾಗಲಿದೆ.

3. ಸಿಹಿ, ಸಿಹಿ ಪಾನೀಯ ಮತ್ತು ಎಣ್ಣೆ ಹೆಚ್ಚಾಗಿರುವ ಆಹಾರಗಳಿಂದ ದೂರವಿರಿ.

4. ಸಾಕಷ್ಟು ನೀರು ಕುಡಿಯಿರಿ. ನೀರು ಹೆಚ್ಚು ಕುಡಿಯುವುದರಿಂದ ಚಯಾಪಚಯ ಕ್ರಿಯೆಗೆ ತಾಕತ್ತು ಸಿಗುತ್ತದೆ ಮತ್ತು ದೇಹದಿಂದ ಟಾಕ್ಸಿನ್‌ಗಳನ್ನು ಹೊರ ಹಾಕುತ್ತದೆ.

5. ದಿನಾ ಬೆಳಗ್ಗೆ ಹಸಿ ಬೆಳ್ಳುಳ್ಳಿಯನ್ನು ಕಚ್ಚಿ ತಿನ್ನಿ. ಹಾಗೆಯೇ ಮೂರು ಲವಂಗ ಬಾಯಿಗೆ ಹಾಕಿಕೊಳ್ಳಿ. ನಂತರ ಲಿಂಬೆ ರಸ ಕುಡಿಯಿರಿ. ಇದು ದೇಹದಲ್ಲಿ ತೂಕ ಇಳಿತ ದ್ವಿಗುಣಗೊಳಿಸಿ ರಕ್ತ ಪರಿಚಲನೆಯನ್ನು ಸುಗಮ ಮಾಡುತ್ತದೆ.

6. ಮಾಂಸಾಹಾರವನ್ನು ಕಡಿಮೆ ಮಾಡಿದರೆ ಹೊಟ್ಟೆ ಕೊಬ್ಬನ್ನು ಕರಗಿಸಬಹುದು. ಸಾಧ್ಯವಾದಷ್ಟು ಮಾಂಸಾಹಾರ ಸೇವನೆ ಕಡಿಮೆ ಮಾಡಿ.

7. ಹಣ್ಣುಗಳು ಮತ್ತು ತರಕಾರಿಗಳನ್ನು ಬೆಳಗ್ಗೆ ಮತ್ತು ಸಂಜೆ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಿ.

8. ಅಡುಗೆಯಲ್ಲಿ ದಾಲ್ಚಿನ್ನಿ, ಶುಂಠಿ ಮತ್ತು ಕರಿಮೆಣಸುಗಳನ್ನು ಹೆಚ್ಚು ಬಳಸಿ. ಇವುಗಳಿಂದ ಸಾಕಷ್ಟು ಆರೋಗ್ಯ ಲಾಭಗಳಿವೆ. ಇದು ಇನ್ಸುಲಿನ್ ನಿರೋಧವನ್ನು ಏರಿಸುವುದಲ್ಲದೆ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News