ಈ ಆರನ್ನು ನೀವು ಪ್ರತೀದಿನ ತಿನ್ನಬೇಕು. ಏಕೆಂದರೆ...?

Update: 2016-03-21 05:58 GMT

ನೀವು ಈ ಆರು ಆಹಾರವನ್ನು ನಿತ್ಯವೂ ತಿನ್ನಬೇಕು. ಅದಕ್ಕೆ ಕಾರಣಗಳು ಇಲ್ಲಿವೆ.
 

ಕಪ್ಪು ಬೀನ್ಸ್:

ಎಲ್ಲಾ ಬೀನ್ಸ್‌ಗಳು ಹೃದಯಕ್ಕೆ ಉತ್ತಮ. ಆದರೆ ಕಪ್ಪು ಬೀನ್ಸ್‌ನಂತೆ ನಿಮ್ಮ ಮೆದುಳಿನ ಶಕ್ತಿಯನ್ನು ಯಾವುದೂ ಏರಿಸುವುದಿಲ್ಲ. ಅದರಲ್ಲಿ ಪೂರ್ಣವಾಗಿ ಆಂತೊಸೈನಿನ್‌ಗಳು, ಆಂಟಿ ಆಕ್ಸಿಡಂಟ್ ಸಂಯುಕ್ತಗಳಿದ್ದು, ಮೆದುಳಿನ ಕೆಲಸವನ್ನು ಸುಧಾರಿಸುತ್ತದೆ.


ಬ್ಲೂ ಬೆರ್ರಿಗಳು:

ಬ್ಲೂ ಬೆರ್ರಿಗಳು ಫೈಬರ್ ಮತ್ತು ವಿಟಮಿನ್ ಎ ಮತ್ತು ಸಿಗಳನ್ನು ತುಂಬಿಕೊಂಡಿರುತ್ತವೆ. ಇವು ಹೃದಯದ ಆರೋಗ್ಯವನ್ನು ಸುಧಾರಿಸುತ್ತವೆ.

ಕ್ಯಾರಟ್‌ಗಳು:

ಬಹುತೇಕ ಕೆಂಪು ಮತ್ತು ಹಳದಿ, ಅಥವಾ ಕಿತ್ತಳೆ ತರಕಾರಿಗಳು ಮತ್ತು ಲಿಂಬೆಗಳು ಕ್ಯಾರೆಟಿನಾಯ್ಡಾಗಳನ್ನು ಹೊಂದಿರುತ್ತವೆ. ಈ ಕ್ಯಾರೆಟಿನಾಯ್ಡುಗಳು ಕೊಬ್ಬು ಕರಗಿಸುವ ಸಂಯುಕ್ತಗಳಾಗಿದ್ದು ಕ್ಯಾನ್ಸರ್ ರೋಗದ ಅಪಾಯವನ್ನು ಕಡಿಮೆಗೊಳಿಸುತ್ತವೆ. ಉರಿಯೂತ, ಅಸ್ತಮಾ ಮತ್ತು ರುಮಾಟಾಯ್ಡಾ ಆರ್ಥರೈಟಿಸ್ ಇದ್ದಾಗ ಉತ್ತಮ ಆಹಾರ.


ಪಾಲಾಕ್ ಸೊಪ್ಪು:

ಇದು ಒಮೆಗಾ 3 ಮತ್ತು ಫೊಲಾಟ್ ಇರುವ ಸಸ್ಯ ಮೂಲ. ಇದು ಹೃದಯ ರೋಗ, ಆಘಾತ ಮತ್ತು ಆಸ್ಟಿಯೊಪೊರಿಸಿಸ್ ಅಪಾಯ ಕಡಿಮೆಗೊಳಿಸುತ್ತದೆ. ಫೊಲಾಟ್ ರಕ್ತದ ಪರಿಚಲನೆಯನ್ನು ಏರಿಸುತ್ತದೆ. ವಯಸ್ಸಿನಿಂದ ಬರುವ ಲೈಂಗಿಕ ರೋಗಗಳ ಅಪಾಯ ಕಡಿಮೆ ಮಾಡುತ್ತದೆ.

ಟೊಮ್ಯಾಟೋಗಳು:

ಈ ಬಗ್ಗೆ ಎರಡು ವಿಷಯ ತಿಳಿದುಕೊಳ್ಳಬೇಕು. ಕೆಂಪು ಟೊಮ್ಯಾಟೋಗಳು ಉತ್ತಮ. ಏಕೆಂದರೆ ಅದರಲ್ಲಿ ಹೆಚ್ಚು ಆಂಟಿ ಆಕ್ಸಿಡಂಟ್ ಲೈಕೊಪಿನ್ ಇವೆ. ಲೈಕೊಪಿನ್ ಬ್ಲಾಡರ್, ಶ್ವಾಸಕೋಶ, ಪ್ರೋಸ್ಟೇಟ್, ಚರ್ಮ ಮತ್ತು ಹೊಟ್ಟೆಯ ಕ್ಯಾನ್ಸರ್ ಬಾರದಿರುವಂತೆ ಕಾಪಾಡಲು ಉತ್ತಮ.


ಯೊಗಾರ್ಟ್: 
ನಿಮ್ಮ ನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ. ಹೀಗಾಗಿ ಈ ಕೆಲವು ತಿನ್ನಲೇಬೇಕಾದ ಆಹಾರ ಸೇರಿಸಿಕೊಂಡು ನಿಮ್ಮ ನಿತ್ಯದ ಆಹಾರ ಸೇವನೆಯನ್ನು ಸಮತೋಲಿತ ಮತ್ತು ಆರೋಗ್ಯಕಾರಿಯನ್ನಾಗಿ ಮಾಡಿಕೊಳ್ಳಿರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News