ನಿಮ್ಮ BPಗೆ ಸ್ವಾರ್ಥ ಮೆದುಳು ಕಾರಣ !

Update: 2016-03-21 06:07 GMT

ನಿಯಂತ್ರಣದಲ್ಲಿಡದ ಹೈಪರ್‌ಟೆನ್ಷನ್ (ಅಧಿಕ ರಕ್ತದೊತ್ತಡ) ಅಪಾಯಕಾರಿಯಾಗಿರುತ್ತದೆ. ಹೃದಯಾಘಾತಗಳು ಮತ್ತು ಕಿಡ್ನಿ ಸಮಸ್ಯೆಗಳೂ ಬರಬಹುದು. ಜಾಗತಿಕವಾಗಿ ಶೇ 62ರಷ್ಟು ಹೃದಯಾಘಾತ ಮತ್ತು ಶೇ 49ರಷ್ಟು ಹೃದಯ ರೋಗಕ್ಕೆ ಅಧಿಕ ರಕ್ತದೊತ್ತಡ ಕಾರಣವಾಗಿರುತ್ತದೆ. ಮುಖ್ಯವಾಗಿ 140.90 ಎಂಎಂ ಎಚ್‌ಜಿಗಿಂತ ಮೇಲೆ ಇರುವ ಅಧಿಕ ರಕ್ತದ ಒತ್ತಡ.


ಯಾವುದೇ ದುಶ್ಚಟಗಳೂ ಇಲ್ಲದಾಗ ಕಾರಣವಿಲ್ಲದೆ ರಕ್ತದೊತ್ತಡ ಅಧಿಕವಾಗುವುದು ಹಲವರ ಸಮಸ್ಯೆಯಾಗಿರುತ್ತದೆ. ಪ್ರೊಫೆಸರ್ ಜುಲಿಯನ್ ಪಾಟನ್ ಅಧ್ಯಯನದ ಪ್ರಕಾರ ಅಧಿಕ ರಕ್ತದೊತ್ತಡ ಮತ್ತು ಮೆದುಳಿಗೆ ಸಂಬಂಧವಿದೆ. ಮೆದುಳಿನ ಭಾಗವಾಗಿರುವ ಹೈಪೊಥಲಮಸ್ ಸ್ವಯಂಚಾಲಿತ ಭಾವನಾತ್ಮಕ ನರಗಳ ವ್ಯವಸ್ಥೆಯ ಕೇಂದ್ರವಾಗಿ ತಾಪ, ಹೃದಯಬಡಿತ, ರಕ್ತದೊತ್ತಡ, ಹಸಿವು ಮತ್ತು ದೇಹದ ತೂಕವನ್ನು ನಿಭಾಯಿಸುತ್ತದೆ. ಮೆದುಳಿನ ಕಾಂಡವು ಹೃದಯ ಮತ್ತು ಶ್ವಾಸಕೋಶದ ಕಾರ್ಯಗಳನ್ನು ನಿಯಂತ್ರಿಸುತ್ತದೆ.


ವಿವರಿಸಲಾಗದ ರಕ್ತದೊತ್ತಡಕ್ಕೆ ಪಾಟನ್ ಅವರು, ಸ್ವಾರ್ಥಿ ಮೆದುಳಿನ ಸಿದ್ಧಾಂತ ನೀಡಿದ್ದಾರೆ. ಇದರ ಪ್ರಕಾರ ಮೆದುಳಿಗೆ ರಕ್ತದ ಹರಿವು ಕಡಿಮೆಯಾದಾಗ ಸ್ವಾರ್ಥಿ ಮೆದುಳು ಭಾವನಾತ್ಮಕ ನರವ್ಯೆಹವನ್ನು ಸಕ್ರಿಯಗೊಳಿಸಿ ಸಂದೇಶ ಕಳುಹಿಸಿ ರಕ್ತನಾಳಗಳನ್ನು ಸಂಕುಚಿತಗೊಳಿಸಿ ರಕ್ತದೊತ್ತಡವನ್ನು ಏರಿಸುತ್ತದೆ. ಹಾಗೆ ಮೆದುಳಿಗೆ ಹೆಚ್ಚಿನ ರಕ್ತವನ್ನು ಹರಿಸುತ್ತದೆ. ಅತಿಯಾಗಿ ಸಕ್ರಿಯವಾಗಿರುವ ಮೆದುಳು ಪದೇ ಪದೇ ಬೇಡಿಕೆ ಇಟ್ಟಾಗ ಅಧಿಕ ರಕ್ತದೊತ್ತಡವಾಗುತ್ತದೆ. ಭವಿಷ್ಯದಲ್ಲಿ ಹೀಗೆ ರಕ್ತಕ್ಕಾಗಿ ಸಂದೇಶ ಕಳುಹಿಸುವ ಮೆದುಳಿಗಾಗಿ ಔಷಧಿಗಳನ್ನು ಕಂಡುಹುಡುಕಿ ಪ್ರಕ್ರಿಯೆಯನ್ನು ತಿರುವು ಮರುವುಗೊಳಿಸುವುದು ಪರಿಹಾರವಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News