ಕಪ್ಪೆಯಿಂದ ಸುಟ್ಟಗಾಯಕ್ಕೆ ಚಿಕಿತ್ಸೆ!

Update: 2016-03-24 09:00 GMT

ಕಪ್ಪೆ ತನ್ನ ಸೂಕ್ಷ್ಮ ಮೊಟ್ಟೆಗಳನ್ನು ರಕ್ಷಿಸುವ ಸಲುವಾಗಿ ಉತ್ಪಾದಿಸುವ ಬುರುಜು (ನೊರೆ) ಇದೀಗ ಸುಟ್ಟಗಾಯದ ಚಿಕಿತ್ಸೆಗೆ ದಿವ್ಯೌಷಧಿ. ಇದು ಯಾವುದೇ ನಾಟಿ ವೈದ್ಯರ ಮಾತಲ್ಲ; ವಿಜ್ಞಾನಿಗಳು ಸಂಶೋಧನೆಯಿಂದ ಕಂಡುಕೊಂಡ ಸತ್ಯ. ಸುಟ್ಟಗಾಯದ ಡ್ರೆಸ್ಸಿಂಗ್ ಹಾಗೂ ಹಾನಿಗೊಳಗಾದ ಚರ್ಮದ ನಡುವೆ ಸುರಕ್ಷಾ ಸಾಧನವಾಗಿ ಈ ನೊರೆ ಬಳಸಬಹುದು.


ಸ್ಟ್ರಾಚ್‌ಲೈಡ್ ವಿವಿ ಸಂಶೋಧಕರು ಈಗಾಗಲೇ ಕೃತಕ ನೊರೆ ಸೃಷ್ಟಿಯ ಪ್ರಯತ್ನದಲ್ಲಿದ್ದಾರೆ. ಟ್ರಿನಿಡಾಡ್‌ನ ಪುಟ್ಟ ತುಂಗರ ಕಪ್ಪೆಯಿಂದ ಸ್ಫೂರ್ತಿ ಪಡೆದು ಈ ಸಂಶೋಧನೆಯಲ್ಲಿ ತೊಡಗಿದ್ದಾರೆ.


ಕಪ್ಪೆಗಳ ಮಿಲನಕ್ರಿಯೆ ಬಳಿಕ, 5 ಸೆಂಟಿಮೀಟರ್ ಗಾತ್ರದ ಉಭಯವಾಸಿಗಳು ಗುಳ್ಳೆಗುಳ್ಳೆಯ ಜಾಲವನ್ನು ರೂಪಿಸುತ್ತವೆ. ಇದು ಪುಟ್ಟ ಮೊಟ್ಟೆಗಳನ್ನು ರೋಗ, ದಾಳಿ ಹಾಗೂ ಪ್ರತಿಕೂಲ ಹವಾಮಾನದಿಂದ ರಕ್ಷಿಸುತ್ತದೆ. ಆರು ಪ್ರೊಟೀನ್‌ಗಳಿಂದ ಮಾಡಲ್ಪಟ್ಟ ಈ ನೊರೆ ಅದೇ ಆಕಾರ ಉಳಿಸಿಕೊಳ್ಳುತ್ತದೆ ಹಾಗೂ ಬಲೆಯ ಬಲವನ್ನೂ ಹೊಂದಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News