ಬೆವರಿನ ಬೇಗೆಯಿಂದ ಬಚಾವಾಗಲು ಅತ್ಯಂತ ಸಹಕಾರಿ ಇವು

Update: 2016-07-26 18:36 GMT

ಬೇಸಗೆ ಬಂದೇ ಬಿಟ್ಟಿದೆಯಾದ ಕಾರಣ ಬೆವರು ಒಂದು ದೊಡ್ಡ ಸಮಸ್ಯೆ ಮತ್ತು ಅದರಿಂದ ಖುಷಿಯಂತೂ ಸಿಗದು. ಇದು ಸಹಜವಾದ ಪ್ರಕ್ರಿಯೆ ಆಗಿದ್ದರೂ, ಕೆಲವೊಮ್ಮೆ ಪ್ರಮುಖ ಸಭೆಗೆ ಹೋದಾಗ ಅಥವಾ ಯಾರ ಜೊತೆಗಾದರೂ ಹೊರಗೆ ಹೋದಾಗ ಬಹಳ ಮುಜುಗರ ತರಬಹುದು. ಬಟಾಟೆ ತುಂಡುಗಳನ್ನು ನಿಮ್ಮ ತೋಳಿನಡಿ ಇರುವುದು ಮತ್ತು ಪ್ರತೀ ದಿನ ಟೊಮ್ಯಾಟೋ ಪಾನೀಯ ಕುಡಿಯುವುದರಿಂದ ಹೀಗೆ ಹೆಚ್ಚುವರಿ ಬರುವ ಬೆವರಿನಿಂದ ಪರಿಹಾರ ಪಡೆಯಬಹುದು.


ತೆಂಗಿನೆಣ್ಣೆ:

ಒಂದು ತಟ್ಟೆ ತೆಂಗಿನೆಣ್ಣೆಗೆ 10 ಗ್ರಾಂ ಕರ್ಪೂರ ಹಾಕಿ ಸ್ನಾನವಾದ ಮೇಲೆ ಬೆವರು ಬರುವ ಜಾಗಗಳಿಗೆ ಹಚ್ಚಿ. ಅದನ್ನು 40-60 ನಿಮಿಷ ಇಡಿ. ಸ್ವಚ್ಛ ನೀರಲ್ಲಿ ತೊಳೆಯಿರಿ. ವಾಸನೆ ದೂರವಾಗಲಿದೆ.


ಉಪ್ಪು:

ಈ ಬೇಸಗೆಯಲ್ಲಿ ಅತಿಯಾದ ಬೆವರಿನಿಂದ ರಕ್ಷಣೆ ಪಡೆಯಲು ಉಪ್ಪನ್ನು ಲಿಂಬೆ ರಸಕ್ಕೆ ಹಾಕಿ. ಅದರಲ್ಲಿ ನಿಮ್ಮ ಕೈಗೆ ಮಸಾಜ್ ಮಾಡಿಕೊಳ್ಳುವುದರಿಂದ ಬೆವರು ಗ್ರಂಥಿಗಳು ನಿಷ್ಕ್ರಿಯಗೊಳ್ಳುತ್ತವೆ.


ಟೀ ಟ್ರೀ ಎಣ್ಣೆ:

ಟೀ ಟ್ರೀ ಎಣ್ಣೆಯನ್ನು ಬೆವರಿನ ಜಾಗಕ್ಕೆ ಹಚ್ಚಿಕೊಳ್ಳಬೇಕು.

ಬಟಾಟೆ:

ಇವು ಬೆವರು ಹೋಗಲಾಡಿಸಲು ಉತ್ತಮ ಉಪಾಯ. ಬಟಾಟೆ ತುಂಡುಗಳಿಂದ ತೋಳಿನಡಿ ಮತ್ತು ಹೆಚ್ಚು ಬೆವರು ಬರುವ ಜಾಗದಲ್ಲಿ ಉಜ್ಜಿಕೊಳ್ಳಿ. ಜಾಗ ಒಣಗಿದ ಮೇಲೆ ಬಟ್ಟೆ ಧರಿಸಿ


ಟೊಮ್ಯಾಟೊ ಪಾನೀಯ:

ಪ್ರತೀ ದಿನ ಒಂದು ಗ್ಲಾಸ್ ಟೊಮ್ಯಾಟೋ ಪಾನೀಯ ಕುಡಿಯುವುದರಿಂದ ಬೇಸಗೆ ಸಮಯದಲ್ಲಿ ಹೆಚ್ಚುವರಿ ಬೆವರು ಹೊರಟು ಹೋಗುತ್ತದೆ.

ದ್ರಾಕ್ಷಿ:

ಸಹಜವಾದ ಆಂಟಿ ಆಕ್ಸಿಡಂಟ್ ದ್ರಾಕ್ಸಿ. ಇದು ದೇಹದ ಉಷ್ಣತೆ ಕಾಪಾಡಲು ನೆರವಾಗುತ್ತದೆ. ಹೀಗಾಗಿ ನಿತ್ಯವೂ ದ್ರಾಕ್ಷಿ ಸೇವಿಸುವುದು ಹೆಚ್ಚಿನ ಬೆವರನ್ನು ಕಡಿಮೆ ಮಾಡಲಿದೆ.


ವಿನೆಗರ್:

ಎರಡು ಚಮಚ ಪ್ರಾಕೃತಿಕ ವಿನೆಗರ್ ಮತ್ತು ಒಂದು ಚಮಚ ಸೇಬಿನ ಸೈಡರ್ ವಿನೆಗರ್ ಬೆವರಿಗೆ ಉತ್ತಮ ಮದ್ದು. ದಿನಕ್ಕೆ ಈ ಮಿಶ್ರಣವನ್ನು ಮೂರು ಬಾರಿ ಖಾಲಿ ಹೊಟ್ಟೆಗೆ ಆಹಾರ ತೆಗೆದುಕೊಳ್ಳುವುದಕ್ಕಿಂತ ಒಂದು ಗಂಟೆ ಮೊದಲು ಸೇವಿಸಿ.


ಜೋಳ: ಅತಿಯಾಗಿ ಬೆವರುತ್ತಿದ್ದಲ್ಲಿ ಜೋಳದ ಸ್ಟಾರ್ಕ್ ಮತ್ತು ಉಪ್ಪನ್ನು ತೋಳಿನಡಿ ಇಟ್ಟುಕೊಳ್ಳಬಹುದು. ನಂತರ ಸ್ವಚ್ಛ ನೀರಲ್ಲಿ ತೊಳೆದುಕೊಳ್ಳಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News