ಸಸ್ಯಾಹಾರದಿಂದ ಕ್ಯಾನ್ಸರ್ ಸಾಧ್ಯತೆ ಹೆಚ್ಚು ?!

Update: 2016-07-26 18:44 GMT

ಸಸ್ಯಾಹಾರ ಸೇವನೆಯಿಂದ ವಂಶವಾಹಿನಿ ರೂಪಾಂತರಕ್ಕೆ ಕಾರಣವಾಗಿ ಭಾರತೀಯರನ್ನು ಉರಿಯೂತ ಮತ್ತು ಅದಕ್ಕೆ ಸಂಬಂಧಿಸಿದ ಹೃದಯ ರೋಗ ಮತ್ತು ಕರುಳಿನ ಕ್ಯಾನ್ಸರಿನಿಂದ ರಕ್ಷಣೆ ಒದಗಿಸಬಲ್ಲದು ಎಂದು ಅಧ್ಯಯನ ಹೇಳಿದೆ.

ಕಾರ್ನೆಲ್ ವಿಶ್ವವಿದ್ಯಾಲಯವು 234 ಭಾರತೀಯ ಸಸ್ಯಾಹಾರಿಗಳು ಮತ್ತು 311 ಅಮೆರಿಕದ ವ್ಯಕ್ತಿಗಳಲ್ಲಿ ರೂಪಾಂತರದ ಅವಧಿಯನ್ನು ವಿಶ್ಲೇಷಿಸಿ ಈ ಫಲಿತಾಂಶ ಪಡೆದಿದ್ದಾರೆ.

ಶೇ 68ರಷ್ಟು ಭಾರತೀಯರು ಮತ್ತು ಶೇ 18ರಷ್ಟು ಅಮೆರಿಕನ್ನರಲ್ಲಿ ಇರುವ ಸಸ್ಯಾಹಾರದ ಜೊತೆಗೆ ಕಂಡುಬಂದಿರುವ ವಂಶವಾಹಿನಿಯನ್ನು ಕಂಡಿದ್ದಾರೆ. ಈ ಅಧ್ಯಯನದ ವಿವರಗಳನ್ನು ಮೊಲೆಕ್ಯುಲರ್ ಬಯಾಲಜಿ ಆಂಡ್ ಇವೊಲ್ಯುಷನ್ ಅಂತರ್ಜಾಲ ಆವೃತ್ತಿಯಲ್ಲಿ ಪ್ರಕಟಿಸಲಾಗಿದೆ.

1000 ಜಿನೊಮ್ಸ್ ಪ್ರಾಜೆಕ್ಟ್ ನಿಂದ ಉಲ್ಲೇಖ ದಾಖಲೆಗಳನ್ನು ಪಡೆದುಕೊಂಡು ಸಂಶೋಧನಾ ತಂಡ ಜೀವವಿಕಾಸದ ಸಾಕ್ಷ್ಯಗಳನ್ನು ಒದಗಿಸಿದ್ದು, ಸಸ್ಯಾಹಾರವು ಹಲವು ತಲೆಮಾರುಗಳಲ್ಲಿ ಭಾರತೀಯ ಜನಸಂಖ್ಯೆಯಲ್ಲಿ ಅಧಿಕ ರೂಪಾಂತರಕ್ಕೆ ಕಾರಣವಾಗಲಿದೆ.


FADS2 ಜೀನ್ ಅಲ್ಲಿ ಕಂಡು ಬರುವ rs66698963 ಎಂದು ಕರೆಯಲಾದ ರೂಪಾಂತರವು FADS1 ಮತ್ತು FADS2 ಎರಡು ಜೀನುಗಳ ಅಭಿವ್ಯಕ್ತಿಯನ್ನು ನಿಯಂತ್ರಿಸುವ ಡಿಎನ್‌ಎ ಪಾಳಿಯ ಸೇರ್ಪಡೆ ಅಥವಾ ರದ್ದು ಆಗಿರುತ್ತದೆ. ಈ ಜೀನ್ ಗಳು ಪಾಲಿ ಅನ್‌ಸ್ಯಾಚುರೇಟೆಡ್ ಕೊಬ್ಬುಗಳ ಉದ್ದನೆಯ ಸರಣಿ ನಿರ್ಮಿಸುವುದರಲ್ಲಿ ನಿರ್ಣಾಯಕವಾಗಿರುತ್ತದೆ. ಇವುಗಳಲ್ಲಿ ಆರ್ಕಿಡಾನಿಕ್ ಆಸಿಡ್ ಫಾರ್ಮಾಸ್ಯುಟಿಕಲ್ ಉದ್ಯಮದ ಪ್ರಮುಖ ಗುರಿ. ಏಕೆಂದರೆ ಹೃದಯ ರೋಗ, ಕರುಳಿನ ಕ್ಯಾನ್ಸರ್ ಮತ್ತು ಹಲವು ಇತರ ಉರಿಯೂತ ಸಂಬಂಧಿ ಸ್ಥಿತಿಗಳಲ್ಲಿ ಇದು ಕೇಂದ್ರಬಿಂದುವಾಗಿದೆ.

ವಂಶವಾಹಿನಿ ಬದಲಾವಣೆಯನ್ನು ಅಲೆಲ್ ಎಂದು ಕರೆಯಲಾಗಿದೆ. ಅದು ಭಾರತದ ಸಸ್ಯಾಹಾರಿ ಜನಸಂಖ್ಯೆಯಲ್ಲಿ ಕಂಡುಬಂದಿದೆ. ಅಲ್ಲದೆ ಐತಿಹಾಸಿಕವಾಗಿ ಸಸ್ಯಾಹಾರ ಸೇವಿಸುವ ಕೆಲವು ಆಫ್ರಿಕಾ ಮತ್ತು ಪೂರ್ವ ಏಷ್ಯಾದ ಜನಸಂಖ್ಯೆಯಲ್ಲಿದೆ ಎಂದು ಅಧ್ಯಯನಕಾರ ಕೈಕ್ಸಿಯಾಂಗ್ ಯೆ ಹೇಳಿದ್ದಾರೆ.

ಸಸ್ಯಾಹಾರ ಸೇವನೆಯಿಂದ ಇವರು ಒಮೆಗಾ 3 ಮತ್ತು ಒಮೆಗಾ 6 ಫ್ಯಾಟಿ ಆಸಿಡ್ ಪ್ರಕ್ರಿಯೆಗೆ ಕಾರಣವಾಗುತ್ತದೆ, ಮತ್ತು ಅವುಗಳನ್ನು ಉಪಯುಕ್ತ ಸಂಯುಕ್ತಗಳಾಗಿ ಆರಂಭಿಕ ಮೆದುಳಿನ ಅಭಿವೃದ್ಧಿಗೆ ಬಳಕೆಯಾಗುತ್ತದೆ. ಅವರು ಒಮೆಗಾ 6ನಿಂದ ಒಮೆಗಾ 3 ಆಹಾರದ ಕಡೆಗೆ ಹೋದರೆ ಉರಿಯೂತ ಸಮಸ್ಯೆ ಅಧಿಕವಾಗಿ ಹೃದಯ ರೋಗ ಮತ್ತು ಕರುಳಿನ ಕ್ಯಾನ್ಸರ್ ಅಪಾಯ ಬರಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News