ತಾಯಿ ಹಾಲು ಮಗುವಿಗೆ ಅಮೃತ

Update: 2016-04-01 17:34 GMT

ಭಾಗ-2

ಎದೆಹಾಲು ನಿಮ್ಮ ಮಗುವಿಗೆ ಅತ್ಯುತ್ತಮ ಆಹಾರ. ಅದು ಕೇವಲ ಪೋಷಕಾಂಶ ಮಾತ್ರವಲ್ಲ; ಅದರಿಂದ ನಿಮ್ಮ ಮಗುವಿಗೆ ಇನ್ನೂ ಹೆಚ್ಚಿನ ಲಾಭಗಳಿವೆ. ಭಾರತೀಯ ಶಿಶು ಚಿಕಿತ್ಸಾ ಅಕಾಡಮಿ ಮತ್ತು ವಿಶ್ವ ಆರೋಗ್ಯ ಸಂಸ್ಥೆಗಳು ಮಗುವಿಗೆ ಮೊದಲ ಆರು ತಿಂಗಳುಗಳ ತನಕ ಕೇವಲ ಎದೆ ಹಾಲು ನೀಡುವುದನ್ನೂ ಶಿಫಾರಸು ಮಾಡುತ್ತವೆ. (ಮಗುವಿಗೆ ಯಾವುದೇ ಪ್ರಮಾಣದಲ್ಲಿ ಎದೆ ಹಾಲು ದೊರೆತರೂ ಅದು ಲಾಭದಾಯಕ).

ಮುಂದೆ ಬದುಕಿನಲ್ಲಿ ಬರಬಹುದಾದ ಮಧುಮೇಹ, ಅತಿ ಕೊಲೆಸ್ಟರಾಲ್, ಜಠರದ ಉರಿಯೂತದಂತಹ ತೊಂದರೆಗಳ ನಿವಾರಣೆಗೆ ತಾಯಿ ಹಾಲು ತುಂಬಾ ಸಹಾಯಕ. ಅಲರ್ಜಿಗಳು, ಪ್ರತಿಕ್ರಿಯಾತ್ಮಕ ಗಾಳಿಹಾದಿಯ ತೊಂದರೆಗಳನ್ನು ಕೂಡ ಎದೆಹಾಲು ನಿವಾರಿಸಬಲ್ಲದು. IgA (ಇದು ಕೇವಲ ಎದೆ ಹಾಲಿನಲ್ಲಿ ಮಾತ್ರ ಲಭ್ಯ). ಮಗುವಿನ ಕರುಳಿನಲ್ಲಿ ಒಂದು ರಕ್ಷಕ ಪದರ ಏರ್ಪಡಿಸುವ ಮೂಲಕ ಮಗುವಿಗೆ ಸೋಂಕುಗಳಿಂದ ರಕ್ಷಣೆ ನೀಡುತ್ತದೆ. ಅದಿಲ್ಲದಿದ್ದರೆ, ಮಗುವಿನ ಕರುಳಿನ ಗೋಡೆಯಲ್ಲಿ ಸೋಂಕುಗಳು ಕಾಣಿಸಿಕೊಂಡು, ಕರುಳು ಸ್ರಾವ ಸಂಭವಿಸಬಹುದು, ಇದರಿಂದಾಗಿ ಕರುಳು ದಾಟಿಹೋಗುವ ಇನ್ನೂ ಜೀರ್ಣವಾಗದ ಪೊಟೀನ್‌ಗಳು ಅಲರ್ಜಿ, ಮತ್ತಿತರ ದೇಹದ ಆರೋಗ್ಯ ತೊಂದರೆಗಳಿಗೆ ಕಾರಣ ಆಗಬಹುದು. ಎದೆಹಾಲಿನ ಬದಲು ಕೃತಕ ಹಾಲು ಸೇವಿಸುವ ಮಕ್ಕಳಲ್ಲಿ ಈ ರಕ್ಷಕ ಪದರ ಇರುವುದಿಲ್ಲ. ಹಾಗಾಗಿ, ಅವರಿಗೆ ಉರಿಯೂತ, ಅಲರ್ಜಿ ಮತ್ತು ಜೀವನದಲ್ಲಿ ಆರೋಗ್ಯದ ತೊಂದರೆಗಳ ಸಾಧ್ಯತೆ ಹೆಚ್ಚು.

ಎದೆ ಹಾಲಿನಿಂದ ಮಗುವಿನ ಬುದ್ಧಿ ಮತ್ತೆ ಕೂಡ ಸುಧಾರಿಸುತ್ತದೆ. ಎದೆಹಾಲಿಗೂ ಗೃಹಿಕೆಯ ಸಾಮರ್ಥ್ಯಕ್ಕೂ ಸಂಬಂಧಗಳಿರುವುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಹುಟ್ಟಿನಿಂದ 6.5 ವರ್ಷದ ತನಕ ಸುಮಾರು 17,000 ಶಿಶುಗಳ ಅಧ್ಯಯನ ನಡೆಸಲಾಗಿದ್ದು, ಅದರಲ್ಲಿ ಕೇವಲ ಎದೆಹಾಲು ಮಾತ್ರ ಮೊದಲ ಆರು ತಿಂಗಳ ಕಾಲ ಸೇವಿಸಿದ ಮಕ್ಕಳ ಐಕಿ ಅಂಕಗಳು, ಬೇರೆ ಬುದ್ಧಿ ಮತ್ತೆ ಪರೀಕ್ಷೆಗಳ ಫಲಿತಾಂಶಗಳು ಬೇರೆ ಮಕ್ಕಳಿಗಿಂತ ಹೆಚ್ಚಿರುವುದು ಹಾಗೂ ಅವರ ಗೃಹಣ ಶಕ್ತಿ ಎದೆಹಾಲು ಸೇವಿಸದ ಮಕ್ಕಳ ಗೃಹಣ ಶಕ್ತಿಗಿಂತ ಹೆಚ್ಚಿರುವುದು ಸಾಬೀತಾಗಿದೆ.

ಎದೆಹಾಲು ನೀಡುವಾಗ ತಾಯಿ-ಮಗುವಿನ ನಡುವಿನ ಭಾವನಾತ್ಮಕ ಅನುಭೂತಿಗಳು ಮೆದುಳಿನ ಮೇಲೆ ಒಳ್ಳೆಯ ಪರಿಣಾಮ ಬೀರುತ್ತವೆ ಎಂಬುದು ತಜ್ಞರ ವಾದ. ಎದೆಹಾಲಿನಲ್ಲಿರುವ ಕೊಬ್ಬಿನ ಆಮ್ಲಗಳು ಕೂಡ ಇದರಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ. ಎದೆಹಾಲಿನ ಕೊಬ್ಬಿನಲ್ಲಿ ಪಾಲಿಅನ್ ಸ್ಯಾಚುರೇಟೆಡ್ ಕೊಬ್ಬಿನ ಆಮ್ಲಗಳ ದೀರ್ಘ ಸರಪಳಿ (ಡೊಕೊಸಾಹೆಕ್ಸೆಯಾನಿಕ್ ಆಮ್ಲ ಅಥವಾ DHA ಮತ್ತು ಅರಾಷಿಡೋನಿಕ್ ಆಮ್ಲ ARA) ಇದ್ದು, ಇವು ಬೇರಾವುದೇ ಹಾಲಿನಲ್ಲಿ ಲಭ್ಯವಿಲ್ಲ. ಮಗುವಿನ ನರವ್ಯೆಹಗಳ ಬೆಳವಣಿಗೆಗೆ ಈ ಕೊಬ್ಬಿನ ಆಮ್ಲಗಳು ಬಹಳ ಮುಖ್ಯ.

ಎದೆಹಾಲು ಮಗುವನ್ನು ಬೊಜ್ಜಿನಿಂದಲೂ ರಕ್ಷಿಸುತ್ತದೆ. ಎದೆಹಾಲು ಕುಡಿಯುವ ಮಕ್ಕಳ ಆಹಾರ ಸೇವನೆ ವಿನ್ಯಾಸ ಕೂಡಾ ಉತ್ತಮ ಇರುವುದರಿಂದ, ಅವರು ಬೆಳೆಯುತ್ತಾ ಒಳ್ಳೆಯ ಆಹಾರ ಸೇವನೆ ವಿನ್ಯಾಸವನ್ನು ಗಳಿಸಿಕೊಳ್ಳುತ್ತಾ ಸಾಗುತ್ತಾರೆ. ಎದೆಹಾಲು ಕುಡಿಯುವ ಮಕ್ಕಳಿಗಿಂತ ಫಾರ್ಮುಲಾ ಹಾಲು ಕುಡಿಯುವ ಮಕ್ಕಳು ಆರಂಭಿಕ ಕೆಲವು ವಾರಗಳಲ್ಲಿ ಹೆಚ್ಚು ತೂಕ ಗಳಿಸಿಕೊಳ್ಳುತ್ತಾರೆ. ಇದಕ್ಕೂ ಬದುಕಿನಲ್ಲಿ ಮುಂದೆ ಬರುವ ಬೊಜ್ಜಿಗೂ ಸಂಬಂಧಗಳಿರುವುದನ್ನು ಕಂಡುಕೊಳ್ಳಲಾಗಿದೆ.

ಹಠಾತ್ ಶಿಶು ಸಾವಿನ ಸಿಂಡ್ರೋಮ್ ಅಪಾಯಗಳು ಎದೆ ಹಾಲು ಕುಡಿಯುವ ಮಕ್ಕಳಲ್ಲಿ ಕಡಿಮೆ. ಅಂಡಾಶಯ, ಗರ್ಭಕೋಶದ ಕತ್ತಿನ ಕ್ಯಾನ್ಸರ್ ಸಾಧ್ಯತೆಗಳೂ, ಎದೆಹಾಲು ನೀಡುವ ತಾಯಿಗೆ ಕಡಿಮೆ. ಮಗುವಿಗೆ ಮಾತ್ರವಲ್ಲದೆ, ಎದೆಹಾಲು ನೀಡಿಕೆಯಿಂದ ತಾಯಿಗೂ ಬಾಣಂತನದ ಖಿನ್ನತೆ ಬರುವ ಸಾಧ್ಯತೆಗಳು ಕಡಿಮೆ. ಎದೆಹಾಲು ಶಿಶು ಆರೈಕೆಗಳ ಆಕ್ಟಿಟೋಸಿಸ್ ಹಾರ್ಮೊನು ತಾಯಿಯ ದೇಹದಲ್ಲಿ ಬಿಡುಗಡೆ ಆಗುತ್ತದೆ. ಇದು ಶಿಶು ಜನನದ ಬಳಿಕ ಗರ್ಭಾಶಯದ ಗಾತ್ರ ಕುಗ್ಗುವುದಕ್ಕೂ ಅಗತ್ಯವಾಗಿದ್ದು, ಹೆರಿಗೆ ಬಳಿಕದ ಈ ಸ್ರಾವ ತೂಕ ಕಡಿಮೆ ಇರುತ್ತದೆ.

ಎದೆಹಾಲು ನೀಡಿಕೆಯ ಲಾಭಗಳ ಬಗ್ಗೆ ಅವಿರತ ಅಧ್ಯಯನಗಳು ನಡೆದಿದೆ. ಒಂದು ಅಧ್ಯಯನದ ಪ್ರಕಾರ, ದಾಕುಗಳನ್ನು ಹಾಕಿಸಿಕೊಂಡ ಬಳಿಕ ಜ್ವರ ಬರುವ ಸಾಧ್ಯತೆ ಎದೆಹಾಲು ಕುಡಿಯದ ಮಗುವಿಗಿಂತ ಎದೆಹಾಲು ಕುಡಿದ ಮಗುವಿನಲ್ಲಿ ಕಡಿಮೆ.

ಎದೆಹಾಲು ನೈಸರ್ಗಿಕ ಆದರೆ ಎಲ್ಲ ಪ್ರಕರಣಗಳಲ್ಲೂ ಅದು ಸುಲಭವಾಗಲಾರದು. ನಿಮಗೆ ನಿಮ್ಮ ಎದೆಹಾಲು ನೀಡಿಕೆಗೆ ಸಂಬಂಧಿಸಿದಂತೆ, ಬೆಂಬಲ ಅಥವಾ ಸಹಾಯ ಬೇಕಿದ್ದಲ್ಲಿ ನಿಮ್ಮ ಶಿಶುತಜ್ಞರನ್ನು ಸಂಪರ್ಕಿಸಲು ಹಿಂಜರಿಯಬೇಡಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News