ನಿಮಗದು ಒಳ್ಳೆಯದು !
ಬೆವರಿನ ಬಗ್ಗೆ ನೀವು ಏನು ಮಾಡಲೂ ಸಾಧ್ಯವಿಲ್ಲ. ಬೆವರಿನಿಂದ ನೀವು ದಣಿದಂತೆ ಕಾಣಬಹುದು. ಅದರ ವಾಸನೆ ಹಿತಕರವಾಗಿರದು. ಆದರೆ ಅದು ಆರೋಗ್ಯಕ್ಕೆ ಉತ್ತಮ. ಯಾಕೆ? ಇಲ್ಲಿ ನೋಡಿ.
ಸದೃಢಗೊಳಿಸುತ್ತದೆ:
ತಜ್ಞರ ಪ್ರಕಾರ, ನೀವು ಸಕ್ರಿಯವಾಗಿದ್ದು, ದಿನಕ್ಕೆ ಒಂದು ಲೀಟರ್‌ನಷ್ಟು ಬೆವರು ಸುರಿಸಿದರೆ ಅದು ನಿಮ್ಮ ರೋಗ ನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ. ರಕ್ತದ ಚಲನೆ ಸುಧಾರಿಸುತ್ತದೆ ಹಾಗೂ ರಕ್ತದ ಒತ್ತಡ ಕಡಿಮೆ ಮಾಡುತ್ತದೆ.
ಕಿಡ್ನಿ ಸ್ಟೋನ್ ಅಪಾಯ ಇಲ್ಲ
ದೇಹದಲ್ಲಿರುವ ಅನಗತ್ಯ ಲವಣಾಂಶ ಮತ್ತು ಕ್ಯಾಲ್ಸಿಯಂ ಪ್ರಮಾಣವನ್ನು ಬೆವರು ಮೂತ್ರಕೋಶದಿಂದ ಹೊರಹಾಕುತ್ತದೆ. ಬೆವರಿದಾಗ ನೀವು ಹೆಚ್ಚು ನೀರು ಕುಡಿದು, ದೇಹದಲ್ಲಿರುವ ಘನ ಅಂಶಗಳು ಮತ್ತು ವಿಷಕಾರಿ ಅಂಶಗಳು ಹೊರಹೋಗುತ್ತವೆ.
ತಂಪಾಗಿಸುತ್ತದೆ
ಬೆವರು ನಿಮ್ಮ ಚರ್ಮದ ಉಷ್ಣತೆ ಹೆಚ್ಚದಂತೆ ತಡೆಯುತ್ತದೆ. ಚರ್ಮದ ಮೇಲ್ಮೈನಿಂದ ಬೆವರು ಆವಿಯಾದಾಗ, ಅದು ತಂಪಾಗಿಸುತ್ತದೆ.
ಕಾಂತಿ ಹೆಚ್ಚಿಸುತ್ತದೆ:
ವಿಷಕಾರಿ ಅಂಶಗಳು ಬೆವರಿನ ಮೂಲಕ ಹೊರಹಾಕಲ್ಪಡುತ್ತವೆ. ಚರ್ಮ ಕೊಳಕು ಹಾಗೂ ಕೀಟದಿಂದ ಮುಕ್ತವಾಗುತ್ತದೆ. ಚರ್ಮಕ್ಕೆ ಪುನಶ್ಚೇತನ ನೀಡಿ, ಕಾಂತಿಯುತವಾಗಿ ಕಾಣುತ್ತದೆ.
ಒತ್ತಡ ಕಡಿಮೆ ಮಾಡುತ್ತದೆ:
ಬೆವರು ನಿಮ್ಮ ಮೆದುಳಿನಲ್ಲಿ ಸಂತೋಷಕ್ಕೆ ಕಾರಣವಾಗುವ ರಸದೂತ ಉತ್ಪತ್ತಿಗೂ ಕಾರಣವಾಗುತ್ತದೆ. ಇದರಿಂದ ನೀವು ಹಗುರ, ಆರಾಮದಾಯಕ ಮೂಡ್ ಪಡೆಯುತ್ತೀರಿ.