ಅಲೋವೆರ ಜ್ಯೂಸ್ - ಜ್ಯೂಸ್ ಎಷ್ಟು ಸರಳವೋ ದೇಹಕ್ಕೆ ಅಷ್ಟೇ ಒಳ್ಳೆಯದು

Update: 2016-04-07 05:15 GMT

ಸಕ್ಕರೆಯುಕ್ತ ಜ್ಯೂಸ್ ಹಾಗೂ ತಂಪು ಪಾನೀಯ ಸೇವಿಸಿ, ವಾಸ್ತವವಾಗಿ ಆರೋಗ್ಯಕರ ಪೇಯ ಸೇವಿಸುವ ಪರಿಪಾಠ ತಪ್ಪಿಹೋಗಿದೆ. ಬೇಸಿಗೆಯ ದಾಹ ತಣಿಸಿಕೊಳ್ಳಲು ತಂಪುಪಾನೀಯ ಮೊರೆ ಹೋಗುವ ಮೊದಲು ಟೆರೇಸ್‌ನಲ್ಲಿರುವ ಅಲವೇರಾ ಗಿಡ ನೆನಪಿಸಿಕೊಳ್ಳಿ. ಇದು ಉತ್ತಮ ಆಯುರ್ವೇದೀಯ ಗುಣ ಹೊಂದಿದ್ದು, ಹಲವು ಆರೋಗ್ಯ ಪ್ರಯೋಜನಗಳಿವೆ.


1. ತೂಕ ಇಳಿಸಲು ಸಹಕಾರಿ

ಅಲೋವೆಲಾ ಜ್ಯೂಸ್ ತೂಕ ಇಳಿಸಲು ಸಹಕಾರಿ. ಮೆಟೊಬೊಲಿಕ್ ಪ್ರಮಾಣ ಹೆಚ್ಚಿಸುವ ಮೂಲಕ ಹೆಚ್ಚು ಕ್ಯಾಲೊರಿ ಸುಡುವಂತೆ ಮಾಡುತ್ತದೆ. ಇದು ಸಹಜವಾಗಿ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸ್ವಚ್ಛಗೊಳಿಸುತ್ತದೆ. ಇದು ಆರೋಗ್ಯಕರ ತೂಕ ನಿರ್ವಹಣೆಗೆ ಸಹಕಾರಿ.

2. ಉತ್ತಮ ಆರೋಗ್ಯಕರ ಚರ್ಮ

ನಿಮ್ಮ ಚರ್ಮಕ್ಕೆ ಪರಿಪೂರ್ಣ ರಕ್ಷಣೆ. ಕೊಲಾಜಿನ್ ಹಾಗೂ ಎಲಸ್ಟೀನ್ ದುರಸ್ತಿ ಮಾಡುತ್ತದೆ. ಅಲೋವೆರಾದಲ್ಲಿರುವ ಪೌಷ್ಟಿಕಾಂಶಗಳು ನಿಮ್ಮ ಚರ್ಮವನ್ನು ಕಾಂತಿಯುತಗೊಳಿಸುವ ಜತೆಗೆ ಮುಪ್ಪಾಗುವಿಕೆ, ಸುಕ್ಕುಗಟ್ಟುವುದನ್ನು ತಡೆಯುತ್ತದೆ.

3. ರೋಗನಿರೋಧಕ ಶಕ್ತಿ ಬೆಳೆಸುತ್ತದೆ

ಹಲವು ಆಂಟಿ ಆಕ್ಸಿಡೆಂಟ್‌ಗಳು ದೇಹಕ್ಕೆ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತವೆ.

4. ಹೃದಯ ಆರೋಗ್ಯ ರಕ್ಷಣೆ

ರಕ್ತ ಪರಿಚಲನೆ ಸುಧಾರಿಸಲು ಸಹಕಾರಿ. ಅಧಿಕ ಕೊಲೆಸ್ಟ್ರಾಲ್ ಇರುವ ರೋಗಿಗಳಲ್ಲಿ ಕೊಬ್ಬಿನ ಮಟ್ಟವನ್ನು ಕಡಿಮೆ ಮಾಡಲು ಉಪಯುಕ್ತ. ಕೊಬ್ಬು ಸಂಗ್ರಹ ತಡೆಯುತ್ತದೆ. ರಕ್ತ ಹೆಪ್ಪುಗಟ್ಟುವಿಕೆ ತಡೆಯುತ್ತದೆ.

5. ದಂತ ಆರೋಗ್ಯಕ್ಕೂ ಪೂರಕ

ಬಾಯಿಯನ್ನು ಕೀಟಗಳಿಂದ ರಕ್ಷಿಸುತ್ತದೆ. ನೈಸರ್ಗಿಕವಾಗಿ ಮೈಕ್ರೊಬಿಲ್ ಹಾಗೂ ಬ್ಯಾಕ್ಟೀರಿಯಾ ವಿರುದ್ಧ ರಕ್ಷಣೆ ನೀಡುತ್ತದೆ. ಕೋಶಗಳ ಬೆಳವಣಿಗೆಗೆ ಪೂರಕವಾದ ಹಲವು ವಿಟಮಿನ್‌ಗಳನ್ನೂ ಒಳಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News