ಮಾಂಸಾಹಾರ ನಿಲ್ಲಿಸಿದ ಕೂಡಲೇ ನಿಮ್ಮ ದೇಹದಲ್ಲಾಗುವ 5 ಬೆಳವಣಿಗೆಗಳು!

Update: 2016-07-27 18:43 GMT

ಬ್ರಿಟಿಷ್ ಸಾಮಾಜಿಕ ನಡವಳಿಕೆ ಸಮೀಕ್ಷೆಯ ಪ್ರಕಾರ ಕಳೆದ ವರ್ಷ ಅರ್ಧದಷ್ಟು ಬ್ರಿಟಿಷರು ಮಾಂಸಾಹಾರ ಸೇವನೆಯನ್ನು ಕಡಿಮೆಗೊಳಿಸಿದ್ದಾರೆ. ಸಮೀಕ್ಷೆಯಲ್ಲಿ ಶೇ 29ರಷ್ಟು ಮಂದಿ ಕಳೆದ ವರ್ಷ ಮಾಂಸಾಹಾರ ಸೇವನೆಯನ್ನು ಶೇ 9ರಷ್ಟು ಕಡಿಮೆ ಮಾಡಿರುವುದು ತಿಳಿದು ಬಂದಿದೆ. ಅವರು ಮಾಂಸಾಹಾರ ಸೇವನೆ ಕಡಿಮೆ ಮಾಡುವುದು ಅಥವಾ ಒಟ್ಟಾರೆಯಾಗಿ ನಿಲ್ಲಿಸಲು ಬಯಸಿರುವುದಾಗಿಯೂ ಹೇಳಿದ್ದಾರೆ. ಶೇ 3ರಷ್ಟು ಮಂದಿ ಈಗಾಗಲೇ ಸಸ್ಯಾಹಾರಿಗಳಾಗಿದ್ದಾರೆ.
ಬೇಯಿಸಿದ ಮಾಂಸ ಮತ್ತು ಬರ್ಗರುಗಳ ಬದಲಾಗಿ ಸಸ್ಯಾಹಾರಿ ಜೀವನಶೈಲಿಯನ್ನು ಆರಿಸಿಕೊಳ್ಳಲು ನೀವು ನೈತಿಕ ಕಾರಣಗಳಿಗಾಗಿ ಅಥವಾ ಮಾಂಸಾಹಾರದ ಮತ್ತು ಆರೋಗ್ಯದ ಕಾಳಜಿಗಳ ಕಾರಣ ತೆಗೆದುಕೊಂಡಿರಬಹುದು. ಹಾಗಿದ್ದರೆ ಆಕಸ್ಮಿಕವಾಗಿ ಮಾಂಸ ಸೇವನೆ ಬಿಟ್ಟರೆ ನಿಮ್ಮ ದೇಹದಲ್ಲಿ ಯಾವ ಬದಲಾವಣೆಗಳಾಗುತ್ತವೆ?

ನೀವು ತೂಕ ಕಳೆದುಕೊಳ್ಳುತ್ತೀರಿ
ವಾಷಿಂಗ್ಟನ್‌ನ ಜಾರ್ಜ್ ವಾಷಿಂಗ್ಟನ್ ವೈದ್ಯಕೀಯ ವಿಶ್ವವಿದ್ಯಾಲಯದ ತಂಡವೊಂದು ಇತ್ತೀಚೆಗೆ ಅಮೆರಿಕದಲ್ಲಿ ಸಸ್ಯಾಹಾರಿಯಾಗಿ ಬದಲಾದ ವ್ಯಕ್ತಿ ಎಷ್ಟರಮಟ್ಟಿಗೆ ತೂಕವನ್ನು ಕಳೆದುಕೊಳ್ಳುತ್ತಾನೆ ಎಂದು ತಿಳಿದುಕೊಳ್ಳಲು ಯತ್ನಿಸಿದೆ. ಹಿಂದಿನ ಅಧ್ಯಯನಗಳನ್ನೂ ತಿಳಿದುಕೊಂಡು ಮಾಡಿದ ಸಂಶೋಧನೆಯಲ್ಲಿ, ಮಾಂಸಾಹಾರ ತ್ಯಜಿಸಿದ ವ್ಯಕ್ತಿಗಳು ತಮ್ಮ ಕ್ಯಾಲರಿ ಸೇವನೆಯಲ್ಲಿ ಅಥವಾ ವ್ಯಾಯಾಮದ ಅವಧಿಯಲ್ಲಿ ಬದಲಾವಣೆ ಮಾಡದೆ ಇದ್ದರೂ ಸರಾಸರಿ 10 ಎಲ್‌ಬಿಎಸ್‌ಗಳಷ್ಟು ತೂಕವನ್ನು ಇಳಿಸಿರುವುದು ತಿಳಿದಿದೆ. ಒಟ್ಟಾರೆ ಸಸ್ಯಾಹಾರದಿಂದ ಕ್ಯಾಲರಿಗಳ ಬಗ್ಗೆ ಹೆಚ್ಚು ಗಮನ ಕೊಡದೆಯೇ ತೂಕ ಇಳಿಸಿಕೊಳ್ಳಬಹುದು ಎಂದು ಅಧ್ಯಯನ ಹೇಳಿದೆ.
ನಿಮ್ಮ ಬ್ಯಾಕ್ಟೀರಿಯ ಬದಲಾಗಲಿದೆ
ನೀವು ಏನು ತಿನ್ನುತ್ತೀರೋ ಅದೇ ಆಗುತ್ತೀರಿ ಎನ್ನುವ ಮಾತಿದೆ. ಇದು ಮಾನವನ ಜೀರ್ಣವ್ಯವಸ್ಥೆಗೆ ಹೆಚ್ಚು ಒಪ್ಪಿಕೊಳ್ಳುತ್ತದೆ. 2014ರ ಅಧ್ಯಯನದಲ್ಲಿ ಗಟ್ ಬ್ಯಾಕ್ಟೀರಿಯವು ಸಸ್ಯಾಹಾರಿ ಮತ್ತು ಮಾಂಸಾಹಾರಿಗಳಲ್ಲಿ ಭಿನ್ನವಾಗಿದ್ದದ್ದನ್ನು ಪತ್ತೆ ಮಾಡಲಾಗಿದೆ. ಸಸ್ಯಾಹಾರಿಗಳಲ್ಲಿ ಹೆಚ್ಚು ರಕ್ಷಣಾತ್ಮಕ ಪ್ರಭೇಧದ ಗಟ್ ಬ್ಯಾಕ್ಟೀರಿಯ ಇರುವುದು ಪತ್ತೆಯಾಗಿದೆ.

ಪೌಷ್ಠಿಕಾಂಶದ ಕೊರತೆ
ಸಮತೋಲಿತ ಸಸ್ಯಾಹಾರವು ಅತ್ಯುತ್ತಮ ಕಾರ್ಯಯೋಜನೆಯಿಂದ ಸಾಕಷ್ಟು ಪೌಷ್ಟಿಕಾಂಶಗಳನ್ನು ಒದಗಿಸುತ್ತದೆ. ಆದರೆ ಕಬ್ಬಿಣ, ವಿಟಮಿನ್ ಡಿ ಮತ್ತು ವಿಟಮಿನ್ ಬಿ12ಗಳನ್ನು ಪಡೆದುಕೊಳ್ಳುವುದು ಕಷ್ಟ. ದೇಹಕ್ಕೆ ಹೆಚ್ಚು ಧಾನ್ಯಗಳು, ಬೀನ್ಸ್, ದ್ವಿದಳ ಧಾನ್ಯ, ಕಡಲೆ ಕಾಳುಗಳು, ಹಣ್ಣುಗಳು, ತರಕಾರಿಗಳು, ಇಡೀ ಧಾನ್ಯಗಳನ್ನು ಸೇವಿಸುವ ಅಗತ್ಯವಿದೆ. ಹಾಗೆ ಸಾಕಷ್ಟು ಕಬ್ಬಿಣದಂಶ ಸಿಗುವಂತೆ ಮಾಡಬೇಕು. ವಿಟಮಿನ್ ಬಿ12 ಯೀಸ್ಟ್ ಉತ್ಪನ್ನಗಳಾದ ಮಾರ್ಮೈಟ್, ಉಪಹಾರ ಧಾನ್ಯಗಳು ಮತ್ತು ಸೋಯಾ ಉತ್ಪನ್ನಗಳಲ್ಲಿ ಸಿಗಲಿದೆ. ಮೊಟ್ಟೆಗಳು, ಸಿರಲ್ಸ್ ಹಾಗೂ ಹಾಲಿನಿಂದ ವಿಟಮಿನ್ ಡಿ ಪಡೆಯಬಹುದು.

ಕ್ಯಾನ್ಸರ್ ಅಪಾಯ ಕಡಿಮೆಯಾಗಲಿದೆ
ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ವರದಿಯ ಪ್ರಕಾರ ಒಣಗಿದ ಹಂದಿ ಮಾಂಸ ಮತ್ತು ಸಲಾಮಿಗಳಲ್ಲಿ ಫಾರ್ಮಾ ಡಿಹೈಡ್ರೇಡ್, ಗಾಮಾ ವಿಕಿರಣ ಮೊದಲಾದುವು ಇರುವುದು ತಿಳಿದಿದೆ. ರೆಡ್ ಮೀಟ್ ಬಾಗಶಃ ಕ್ಯಾನ್ಸರ್ ತರಬಹುದು ಎಂದೂ ಹೇಳಲಾಗಿದೆ. ಕೇವಲ 50 ಗ್ರಾಂ ಮಾಂಸವನ್ನು ಅಥವಾ ದಿನಕ್ಕೆ ಎರಡು ತುಂಡು ಒಣಗಿದ ಹಂದಿ ಮಾಂಸವು ಕರುಳಿನ ಕ್ಯಾನ್ಸರ್ ಅಪಾಯವನ್ನು ಶೇ 18ರಷ್ಟು ತರುತ್ತದೆ. ನೂರು ಜೀವಿತಾವಧಿ ಒಣಗಿದ ಹಂದಿ ಮಾಂಸ ಸೇವಿಸುವವರಲ್ಲಿ ಆರು ಮಂದಿಗೆ ಕ್ಯಾನ್ಸರ್ ಬರುವ ಸಾಧ್ಯತೆಯಿದೆ ಎನ್ನಲಾಗಿದೆ.

ಹೃದಯ ರೋಗದ ಅಪಾಯ
ವಿಜ್ಞಾನಿಗಳು ಇತ್ತೀಚೆಗೆ ಹೃದಯ ರೋಗವನ್ನು ಮಾಂಸಾಹಾರದ ಜೊತೆಗೆ ಜೋಡಿಸಿದ್ದಾರೆ. ಲರ್ನರ್ ರೀಸರ್ಚ್ ಸಂಸ್ಥೆ ಅಮೆರಿಕದಲ್ಲಿ ನಡೆಸಿದ ಅಧ್ಯಯನ ಪ್ರಕಾರ ಆಹಾರದಲ್ಲಿ ಕಂಡು ಬರುವ ಕಾರ್ನಿಟೈನ್ ಎನ್ನುವ ಪೌಷ್ಠಿಕಾಂಶವು ಗಟ್ ಮೈಕ್ರೋಬ್ ಪ್ರತಿಕ್ರಿಯೆಯನ್ನು ತರುವ ಕಾರಣ ಹೃದಯ ರೋಗದ ಅಪಾಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News