ನಿಮ್ಮ ಮೆದುಳಿಗೆ ಬೇಕು ಈ ಒಂಭತ್ತು ಆಹಾರಗಳು

Update: 2016-05-12 05:29 GMT

ಮರೆವು ರೋಗ ವಯಸ್ಸಾಗುತ್ತಾ ಸಾಮಾನ್ಯವಾಗುತ್ತದೆ. ಇದರಿಂದ ನಿದ್ರಾರಾಹಿತ್ಯ, ಒತ್ತಡ ಮತ್ತು ದೈಹಿಕ ಚಟುವಟಿಕೆಯ ಕೊರತೆ ಮೊದಲಾದವು ಇದಕ್ಕೆ ಕಾರಣ. ವಿಶ್ವ ಆರೋಗ್ಯ ಸಂಸ್ಥೆಯು ಮರೆವು ರೋಗದ ತೀವ್ರತೆ ಬಗ್ಗೆ ಇತ್ತೀಚೆಗೆ ಎಚ್ಚರಿಸಿದೆ. ಮೆದುಳಿನ ಕೋಶಗಳು ವೇಗವಾಗಿ ನಶಿಸುತ್ತಿರುವ ಕಾರಣ ಅದರ ಪುನಶ್ಚೇತನದ ಪ್ರಯತ್ನ ಅಗತ್ಯ. ನಿಮ್ಮ ಮಾನಸಿಕ ಸಾಮರ್ಥ್ಯ ಹೆಚ್ಚಿಸಲು 9 ಆಹಾರಗಳ ವಿವರ ಇಲ್ಲಿ ಕೊಟ್ಟಿದ್ದೇವೆ.

ಮೊಟ್ಟೆಗಳು

ಪೌಷ್ಠಿಕಾಂಶದತ್ತ ಗಮನಹರಿಸಿ. ಮೊಟ್ಟೆ ಇದರಲ್ಲಿ ಮೊದಲು ಬರುತ್ತದೆ. ನಿಮಿಷಗಳಲ್ಲಿ ಈ ಆರೋಗ್ಯಕರ ಆಹಾರ ಸಿದ್ಧವಾಗುತ್ತದೆ. ಮೊಟ್ಟೆಯ ಬಿಳಿ ದ್ರವದಲ್ಲಿ ಖೊಲೈನ್ ಇರುವ ಕಾರಣ ಮೆದುಳಿಗೆ ಮುಖ್ಯವಾಗಿ ಶಾರ್ಟ್ ಟರ್ಮ್ ಮೆಮೊರಿ ಕ್ರಿಯೆಗೆ ಉತ್ತಮ.


ಸೂರ್ಯಕಾಂತಿ ಬೀಜಗಳು


ವಿಟಮಿನ್ ಇ ಇದರಲ್ಲಿ ಶ್ರೀಮಂತವಾಗಿದ್ದು ನೆನಪು ಶಕ್ತಿಗೆ ಉತ್ತಮ. ಈ ಬೀಜಗಳು ವಯಸ್ಸಾದ ಮೇಲೂ ನೆನಪಿನ ಶಕ್ತಿಗೆ ಉತ್ತಮ. ಖೊಲೈನ್ ಹೆಚ್ಚಾಗಿದ್ದು, ಶಾರ್ಟ್ ಟರ್ಮ್ ಮೆಮೊರಿ ಕ್ರಿಯೆಗೆ ಉತ್ತಮ. ಇದರ ಎಣ್ಣೆ ವಿಶ್ವದಾದ್ಯಂತ ಹೆಚ್ಚು ಬಳಕೆಯಾಗುತ್ತದೆ.


ಮೀನಿನ ಕೊಬ್ಬು

ಮೀನಿನ ಕೊಬ್ಬು ಒಮೆಗಾ 3 ಫ್ಯಾಟಿ ಆಸಿಡುಗಳನ್ನು ಕೊಡುವ ಕಾರಣ ಮೆದುಳಿನ ಕ್ರಿಯೆಗೆ ಮತ್ತು ಅಭಿವೃದ್ಧಿಗೆ ಮುಖ್ಯ. ಗರ್ಭಿಣಿ ಮಹಿಳೆಯರು ವಾರಕ್ಕೆ ಎರಡು ಮೂರು ಬಾರಿ ಮೀನು ತಿಂದರೆ ಮಗುವಿಗೆ ಉತ್ತಮ. ಗರ್ಭಿಣಿಯರು ಮೀನು ಸೇವಿಸುವುದರಿಂದ ಮಗುವಿನ ಮೆದುಳಿನ ಶಕ್ತಿಗೆ ಉತ್ತಮ. ಸಲ್ಮಾನ್ ಮತ್ತು ಟುನಾ ಮೀನುಗಳಲ್ಲಿ ಒಮೆಗಾ 3 ಹೆಚ್ಚಿರುತ್ತದೆ.


ಬೆರ್ರಿಗಳು


ಪ್ರಕೃತಿ ಅಧಿಕ ಆಹಾರ ಆಯ್ಕೆ ಕೊಟ್ಟಿದೆ. ಬೆರ್ರಿಗಳು ಉತ್ತಮ ಆಯ್ಕೆ. ಸ್ಟ್ರಾಬೆರಿ, ಬ್ಲಾಕ್ ಬೆರಿ ಮತ್ತು ಬ್ಲೂಬೆರಿಗಳು ಆಂಟಿ ಆಕ್ಸಿಡಂಟ್ ಹೆಚ್ಚಿರುವ ಕಾರಣ ಮೆದುಳಿನ ಆರೋಗ್ಯಕ್ಕೆ ಉತ್ತ. ಕೋಶಗಳು ನಾಶವಾಗುವುದು ಮತ್ತು ಮೆದುಳಿನ ಉರಿಯೂತದಿಂದ ಇವು ರಕ್ಷಿಸುತ್ತವೆ. ಅಲ್ಜೀಮರ್ ಮತ್ತು ಡೆಮೆನ್ಷಿಯ ರೋಗದಿಂದ ಪಾರಾಗಲು ಇದು ಉತ್ತಮ.


ಪಾಲಾಕ್


ದೇಹದ ಆರೋಗ್ಯಕ್ಕೆ ಪಾಲಾಕ್ ಉತ್ತಮವಾಗಿರುವಂತೆಯೇ ಅದರಲ್ಲಿರುವ ಲ್ಯುಟಿನ್ ಶಕ್ತಿಯುತ ಆಂಟಿ ಆಕ್ಸಿಡಂಟ್. ಕೊಗ್ನಿಟಿವ್ ಕುಸಿತವನ್ನು ತಡೆಯುತ್ತದೆ. ಲ್ಯುಟಿನ್ ಮೆದುಳಿನ ಕಾರ್ಯವನ್ನು ಸುಧಾರಿಸಿ ನೆನಪಿನ ಶಕ್ತಿ ಮತ್ತು ಕಲಿಕೆಯನ್ನು ವೃದ್ಧಿಸುತ್ತದೆ.


ಕಡಲೆ ಕಾಳುಗಳು


ಬಾದಾಮಿ, ಗೇರುಬೀಜ, ನೆಲಗಡಲೆ, ವಾಲ್ನಟ್ ವಿಟಮಿನ್ ಇ ಇರುವ ಕಡಲೆಗಳು. ಇವು ಮೆದುಳಿನ ಕ್ರಿಯೆಗೆ ಅಗತ್ಯ. ಇಡೀ ಧಾನ್ಯಗಳು ರಕ್ತದ ಹರಿವನ್ನು ವೃದ್ಧಿಸಿ ಉತ್ತಮ ಹೃದಯದ ಆರೋಗ್ಯವನ್ನೂ ಕೊಡುತ್ತವೆ. ದೇಹದ ಎಲ್ಲಾ ಅಂಗಗಳೂ ಉತ್ತಮವಾಗಿ ಕೆಲಸ ಮಾಡಲು ನೆರವಾಗುತ್ತವೆ. ಮೆದುಳಿಗೆ ಉತ್ತಮವಾಗಿ ರಕ್ತಪರಿಚಲನೆಯಾಗಲು ಸಹಾಯ ಮಾಡುತ್ತದೆ.

ಡಾರ್ಕ್ ಚಾಕಲೇಟು

ಡಾರ್ಕ್ ಚಾಕಲೇಟು ಸಹಜ ಪ್ರಚೋದಕಗಳು ಮತ್ತು ಆಂಟಿ ಆಕ್ಸಿಡಂಟ್ ಹೊಂದಿರುತ್ತವೆ. ಇವು ಮೆದುಳಿನ ಮನೋಸ್ಥಿತಿಗೆ ಮುಖ್ಯವಾಗುತ್ತದೆ.

http://timesofindia.indiatimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News