ನಿಜ, ಮೀನು ತಿನ್ನುವವರೇ ಬುದ್ಧಿವಂತರು ! ಅಧ್ಯಯನದಿಂದ ಬಹಿರಂಗ

Update: 2016-05-14 04:44 GMT

ಮೀನು ಮತ್ತಿತರ ಸಮುದ್ರಾಹಾರ (ಸೀಫುಡ್) ನಿಮ್ಮ ಆರೋಗ್ಯಕ್ಕೆ ಅತ್ಯುತ್ತಮ .ಏಕೆಂದರೆ ಮೀನು ಅಥವಾ ಒಮೆಗಾ3 ಅಂಶವಿರುವ ಆಹಾರವನ್ನು ಕನಿಷ್ಟ ವಾರಕ್ಕೊಮ್ಮೆ ಸೇವಿಸುವುದರಿಂದ ವಯಸ್ಕರಲ್ಲಿ ಉಂಟಾಗುವ ಮರೆಯುವಿಕೆ ಮತ್ತು ವಯೋವೃದ್ಧರಲ್ಲಿ ಅಲೋಚನಾ ಶಕ್ತಿಗೆ ಕುಂದುಂಟಾಗುವುದನ್ನು ತಡೆಯುವ ಶಕ್ತಿ ಸಿಗುತ್ತದೆ ಎಂದು ಸಂಶೋಧನೆ ತಿಳಿಸಿದೆ.

ನೆದರ್‌ಲ್ಯಾಂಡ್‌ನ ವೇಗನ್‌ಗನ್ ವಿಶ್ವವಿದ್ಯಾನಿಲಯ ಹಾಗೂ ವೈದ್ಯಕೀಯ ಕೇಂದ್ರ ಜಂಟಿಯಾಗಿ ನಡೆಸಿರುವ ಸಂಶೋಧನೆಯ ಪ್ರಕಾರ ವಾರಕ್ಕೆ ಕನಿಷ್ಟ ಒಮ್ಮೆ ಸಮುದ್ರಾಹಾರ ಸೇವಿಸುವವರಿಗಿಂತ ,ವಾರದಲ್ಲಿ ಒಂದಕ್ಕಿಂತ ಕಡಿಮೆ ಬಾರಿಗೆ ಸೇವಿಸಿವವರಲ್ಲಿ ಈ ಎರಡು ಸಮಸ್ಯೆ ಹೆಚ್ಚು ಕಂಡುಬಂದಿದೆ.

ಸಾಮಾನ್ಯ ವಯಸ್ಕರಲ್ಲಿ ಸ್ವಾಭಾವಿಕವಾಗಿ ಜ್ಞಾನ ಸಾಮರ್ಥ್ಯ ಕ್ಷೀಣಿಸುವುದರಿಂದ ಈ ಅಧ್ಯಯನ ತುಂಬಾ ಉಪಯುಕ್ತಕಾರಿಯಾಗಿದೆ.ಅಲ್ಲದೇ ಈ ಪ್ರಕ್ರಿಯೆಯನ್ನು ಕಡಿಮೆ ಮಾಡುವಲ್ಲಿ ಕೆಲವೊಂದು ಸಂಶೋಧನೆಯನ್ನು ನಾವು ಮಾಡುವುತ್ತಿದ್ದೇವೆ ಎಂದು ಹೇಳುತ್ತಾರೆ ಅಧ್ಯಯನ ಸಂಶೋಧನೆಯ ಹಿರಿಯ ಲೇಖಕಿ ನ್ಯುಟ್ರಿಷನಲ್ ತಜ್ಞೆ ಮಾರ್ಥಾ ಕ್ಲೇರೆ ಮೋರಿಸ್.

ಸರಾಸರಿ 81.4 ವರ್ಷದವರನ್ನು ಸರಾಸರಿ 5 ವರ್ಷಗಳ ಕಾಲ 915 ಜನರನ್ನು ಸಮೀಕ್ಷೆಗೊಳಪಡಿಸಲಾದ ಜನರಿಗೆ ಯಾವುದೇ ರೀತಿಯಲ್ಲೂ ಮನೋವೈಕಲ್ಯ ಉಂಟಾಗಿಲ್ಲ.ಸಮೀಕ್ಷೆಯಲ್ಲಿ ಪಾಲ್ಗೊಂಡ ಜನರಲ್ಲಿ ವಾರದಲ್ಲಿ ಸರಾಸರಿ ಎರಡು ಬಾರಿ ಸಮುದ್ರಾಹಾರವನ್ನು ಸೇವಿಸುವವರು ಅಧಿಕ ಪ್ರಮಾಣದಲ್ಲಿದ್ದರೆ ,ಕಡಿಮೆ ಸಂಖ್ಯೆಯಲ್ಲಿದ್ದ ಗುಂಪಿನ ಜನರು ವಾರದಲ್ಲಿ ಸರಾಸರಿ 0.5 ರಷ್ಟು ಸಮುದ್ರಾಹಾರವನ್ನು ಸೇವಿಸುತ್ತಿದ್ದರು ಎಂದು ಸಂಶೋಧನೆಯಲ್ಲಿ ತಿಳಿಸಲಾಗಿದೆ.

ಒಮೆಗಾ-3 ಹೇರಳವಾದ ಪೌಷ್ಟಿಕ ಆಹಾರದ ಅಂಶ ಸಮುದ್ರಾಹಾರದಲ್ಲಿ ಇದೆ.ಇದು ನಮ್ಮ ಮಿದುಳಿಗೆ ಪ್ರಮುಖವಾದ ರಚನಾತ್ಮಕ ಅಂಶವಾಗಿದೆ.ಅಲ್ಲದೇ ಇದು ಮನೋವೈಕಲ್ಯತೆಯನ್ನು ತಡೆಯುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ನರ ವಿಜ್ಞಾನ ಸಂಶೋಧನೆ ಅಧ್ಯಯನ ವರದಿಯಲ್ಲಿ ಪ್ರಕಟವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News