ಹೃದಯಾಘಾತಕ್ಕೆ ಹತ್ತು ಪ್ರಮುಖ ಕಾರಣಗಳು

Update: 2016-05-21 06:18 GMT

ಹೃದಯಕ್ಕೆ ರಕ್ತ ಪಂಪು ಮಾಡುವುದು ನಿಂತ ಕೂಡಲೇ ಹೃದಯಾಘಾತವಾಗುತ್ತದೆ. ಸಾಮಾನ್ಯವಾಗಿ ಕೊಲೆಸ್ಟರಾಲ್, ಕೊಬ್ಬು ಮತ್ತು ಇತರ ವಸ್ತುಗಳು ಹೃದಯದ ಬಾಗಿಲನ್ನು ಮುಚ್ಚಿದಾಗ ಈ ಸಮಸ್ಯೆ ಬರುತ್ತದೆ. ಕೆಲವೊಂದು ಹೃದಯಾಘಾತಗಳು ಮಾರಕವಾಗಿರಬಹುದು. ಇನ್ನು ಕೆಲವನ್ನು ಚಿಕಿತ್ಸೆಯ ಮೂಲಕ ಗುಣಪಡಿಸಬಹುದು. ಆದರೆ ತಕ್ಷಣ ವೈದ್ಯರನ್ನು ಕಾಣಲೇಬೇಕು. ಹೃದಯಾಘಾತಕ್ಕೆ ಕೆಲವು ಕಾರಣಗಳು ಇಲ್ಲಿವೆ.

1. ವಯಸ್ಸು

45 ವರ್ಷವನ್ನು ಮೀರಿದ ಪುರುಷರು ಅಥವಾ 55 ವರ್ಷ ಮೀರಿದ ಮಹಿಳೆಯರು ಹೆಚ್ಚು ಹೃದಯಾಘಾತದ ಅಪಾಯದಲ್ಲಿರುತ್ತಾರೆ. ಕೊರೊನರಿ ಹೃದಯ ರೋಗದಿಂದ ನರಳುವ ಬಹಳಷ್ಟು ಮಂದಿ 65ರ ಮೇಲಿನವರು.

2. ಮಧುಮೇಹ

ಇನ್ಸುಲಿನ್ ಎನ್ನುವ ಹಾರ್ಮೋನು ನಮ್ಮ ಮೇದೋಜೀರಕ ಗ್ರಂಥಿಯಿಂದ ಸ್ರವಿಸುತ್ತದೆ. ಇದು ದೇಹಕ್ಕೆ ಸಕ್ಕರೆ ರೂಪದಲ್ಲಿರುವ ಗ್ಲುಕೋಸನ್ನು ಬಳಸಲು ಅವಕಾಶ ಕೊಡುತ್ತದೆ. ಮಧುಮೇಹ ಇದ್ದಾಗ ಅಥವಾ ಇನ್ಸುಲಿನ್ ಸಾಕಷ್ಟು ಇಲ್ಲದಾಗ ದೇಹದಲ್ಲಿ ಸಕ್ಕರೆ ಪ್ರಮಾಣ ಏರಬಹುದು. ಮಧುಮೇಹ ನಿಯಂತ್ರಿಸದಿದ್ದರೆ ಹೃದಯಾಘಾತದ ಅಪಾಯ ಹೆಚ್ಚಾಗಲಿದೆ.

3. ಕೌಟುಂಬಿಕ ಇತಿಹಾಸ

ನಿಮ್ಮ ಹೆತ್ತವರು, ಸಹೋದರರು, ತಾತ- ಅಜ್ಜಿಗೆ ಹೃದಯಾಘಾತವಾಗಿದ್ದರೆ, ಪುರುಷ ಸಂಬಂಧಿಕರಿಗೆ 55 ವರ್ಷದೊಳಗೆ ಮತ್ತು ಮಹಿಳಾ ಸಂಬಂಧಿಕರಿಗೆ 65 ವರ್ಷದೊಳಗೆ ಹೃದಯಾಘಾತದ ಅಪಾಯ ಬರಲಿದೆ.

4. ಒತ್ತಡ ನಿರ್ವಹಣೆ

ಕೋಪವನ್ನು ಮತ್ತು ಒತ್ತಡವನ್ನು ಸರಿಯಾಗಿ ನಿಭಾಯಿಸದಿದ್ದರೆ ಹೃದಯಾಘಾತವಾಗಬಹುದು. ಒತ್ತಡ ನಿಭಾಯಿಸುವುದು ಕಲಿಯಿರಿ. ರಿಲ್ಯಾಕ್ಸೇಶನ್ ತಂತ್ರ ಅಭ್ಯಾಸ ಮಾಡುವುದು ಮತ್ತು ವಾಸ್ತವಿಕ ಗುರಿ ಇಟ್ಟುಕೊಳ್ಳುವುದು ಮುಖ್ಯ. ಮಸಾಜ್ ಮತ್ತು ಯೋಗ ಕೂಡ ಒತ್ತಡ ನಿವಾರಿಸಲಿದೆ.

5. ಅಧಿಕ ರಕ್ತದೊತ್ತಡ

ಅಧಿಕರಕ್ತದೊತ್ತಡ ಹೃದಯಾಘಾತ ಬರಲು ಅತೀ ಮುಖ್ಯ ಕಾರಣ. ರಕ್ತದೊತ್ತಡ 120/80 ಕ್ಕಿಂತ ಕಡಿಮೆ ಇದ್ದರೆ ಆರೋಗ್ಯಕರ. ಅಧಿಕ ರಕ್ತದೊತ್ತಡ ಹೃದಯಕ್ಕೆ ರಕ್ತ ಪಂಪು ಮಾಡುವ ನಾಳಗಳ ಮೇಲೆ ಒತ್ತಡ ಹೇರಬಹುದು. ಧೂಮಪಾನ, ಕೊಬ್ಬು, ಅಧಿಕ ಕೊಲೆಸ್ಟರಾಲ್ ಮತ್ತು ಮಧುಮೇಹದಿಂದ ರಕ್ತದೊತ್ತಡ ಏರುತ್ತದೆ. ಸೂಕ್ತ ಆಹಾರ, ವ್ಯಾಯಾಮ ಮತ್ತು ಆರೋಗ್ಯಕರ ತೂಕದಿಂದ ಸಮಸ್ಯೆಗೆ ಪರಿಹಾರ ಪಡೆಯಬಹುದು.

6. ಅಧಿಕ ಕೊಲೆಸ್ಟರಾಲ್

ಒಟ್ಟು ಕೊಲೆಸ್ಟರಾಲ್ 5ರಿಂದ 1ಕ್ಕಿಂತ ಹೆಚ್ಚಾಗಿದ್ದರೆ ಹೃದಯ ರೋಗದ ಅಪಾಯ ಹೆಚ್ಚು. ಒಟ್ಟು ಕೊಲೆಸ್ಟರಾಲ್ 200 ಎಂಜಿ/ಡಿಎಲ್ ಒಳಗಿರಬೇಕು. ಉತ್ತಮ ಕೊಲೆಸ್ಟರಾಲ್ 60 ಎಂಜಿ/ಡಿಎಲ್ ಇರಬಹುದು. ಉತ್ತಮ ಆಹಾರ ಆರಿಸುವುದು, ವ್ಯಾಯಾಮ ಮತ್ತು ಧ್ಯಾನ ಕೊಲೆಸ್ಟರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ.

7. ಅಧಿಕ ಕೊಬ್ಬಿನ ಶಿಸ್ತಿನ ಆಹಾರ

ಅಧಿಕ ಸ್ಯಾಚುರೇಟೆಡ್ ಕೊಬ್ಬು ಇರುವ ಶಿಸ್ತಿನ ಆಹಾರ ನಿಮ್ಮ ಹೃದಯ ರೋಗದ ಮತ್ತು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. 8. ನಿಷ್ಕ್ರಿಯ ಜೀವನಶೈಲಿ

ತಟಸ್ಥವಾದ ಜೀವನಶೈಲಿ ಹೃದಯಾಘಾತದ ಅಪಾಯ ಹೆಚ್ಚಿಸುತ್ತದೆ. ಅಪಾಯ ಕಡಿಮೆ ಮಆಡಲು ದೈಹಿಕ ಚಟುವಟಿಕೆ ಹೆಚ್ಚಿಸಿ.

9. ಬೊಜ್ಜು

ಹೆಚ್ಚು ದೇಹದ ಕೊಬ್ಬು ಹೊಂದಿರುವವರು ಮುಖ್ಯವಾಗಿ ಸೊಂಟದಲ್ಲಿ ಕೊಬ್ಬು ತುಂಬಿಕೊಂಡವರಿಗೆ ಹೃದಯಾಘಾತದ ಅಪಾಯ ಹೆಚ್ಚು. ಹೆಚ್ಚು ತೂಕ ಹೃದಯದ ಮೇಲೆ ಒತ್ತಡ ಹೇರಬಹುದು. ಇದಕ್ಕಾಗಿ ಆರೋಗ್ಯಕರ ಶಿಸ್ತಿನ ಆಹಾರ, ಕಡಿಮೆ ಸಕ್ಕರೆ, ಸ್ಯಾಚುರೇಟೆಡ್ ಕೊಬ್ಬು, ಟ್ರಾನ್ಸ್ ಕೊಬ್ಬು ಮತ್ತು ಕಡಿಮೆ ಸೋಡಿಯಂ ಬಳಸಬೇಕು.

10. ಧೂಮಪಾನ

ಧೂಮಪಾನ ತಡೆಯಬಹುದಾದ ಹೃದಯ ರೋಗದ ಅಪಾಯ. ಸಿಗರೇಟ್ ಸೇವನೆಯಿಂದ ಹೃದಯ ರೋಗದ ಅಪಾಯ ಹೆಚ್ಚಾಗುತ್ತದೆ. ಸಿಗರೇಟು ಬಿಡುವುದೇ ಪರಿಹಾರ.

ಕೃಪೆ: www.1mhealthtips.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News