ಬಿರಿಯಾನಿ ಅಲ್ಲ, ಬಿರಿಯಾನಿ ಕಾ ಅಚಾರ್ ತಿಂದಿದ್ದೀರಾ?
ಹೈದರಾಬಾದಿನ ನಾಂಪಲ್ಲಿ ಎನ್ನುವ ನಗರವನ್ನು ಒಂದೇ ಬಾರಿಗೆ ನಾಶ ಮಾಡಲಾಗಿದೆ ಮತ್ತು ಸೃಷ್ಟಿಸಲಾಗಿದೆ. ರಸ್ತೆ ಅಗಲೀಕರಣವೆಂದರೆ ಧೂಳು ಪರಿಸರದಲ್ಲಿ ತುಂಬಿ ತುಳುಕುವುದು. ನಿರ್ಮಾಣ ಹಂತದಲ್ಲಿರುವ ಮೆಟ್ರೋ ಕಂಬಗಳು ಅಪೊಕಲಿಪ್ಸ್ ಸಿನಿಮಾ ನೆನಪಿಸುತ್ತದೆ. ನಿಲ್ದಾಣದ ಹಿಂದಿನ ಕಿರಿದಾದ ಗಲ್ಲಿಗಳಲ್ಲಿ ಬುರ್ಕಾ ಧರಿಸಿದ ವಿದ್ಯಾರ್ಥಿಗಳು ಸಮೀಪದ ಕಾಲೇಜುಗಳಿಂದ ಬರುತ್ತಾರೆ. ಪಾದಾಚಾರಿ ರಸ್ತೆಗಳಲ್ಲಿ ಹಾರ್ಡ್ವೇರ್ ಮಾರಾಟಗಾರರೇ ಬೀಡುಬಿಟ್ಟಿದ್ದಾರೆ. ಜತೆಯಲ್ಲಿ ಬೇಸಿಗೆಯ ಬಿಸಿಗೆ ಕಲ್ಲಂಗಡಿ ಮಾರುವವರೂ ಇದ್ದಾರೆ. ಅಂತ್ಯದಲ್ಲಿ ಸಿಗುತ್ತದೆ ಎಕ್ ಮಿನಾರ್ ಮಸೀದಿ. ನಂತರ ಕೆಲವು ಮಳಿಗೆಗಳಿವೆ. ಇದೇ ಉಪ್ಪಿನಕಾಯಿ ಕೇಂದ್ರ. ಹೈದರಾಬಾದ್, ಅವಾಮ್, ಯೂಸುಫೈ ಮೊದಲಾದ ಹೆಸರಲ್ಲಿ ಈ ಉಪ್ಪಿನಕಾಯಿ ಮಳಿಗೆಗಳಿವೆ. ಡೆಕ್ಕನ್ ಆಚಾರ್ ಎನ್ನುವ ಇಲ್ಲಿನ ಉಪ್ಪಿನಕಾಯಿ ಮಳಿಗೆ ಹೈದರಾಬಾದಿನ ದಂತಕತೆ.
ಮಳಿಗೆಯ ಒಳಗೆ ಎಲ್ ಆಕಾರದ ಕೌಂಟರಲ್ಲಿ ಮಾರಾಟ ಜೋರಾಗಿ ನಡೆಯುತ್ತದೆ. ಈ ಮಳಿಗೆಯನ್ನು 1961ರಲ್ಲಿ ನಿರ್ಮಿಸಲಾಗಿದೆ. ಮುತ್ತಾತಂದಿರಿಂದ ಉದ್ಯಮ ಬೆಳೆದು ಬಂದಿದೆ. ಸದೇಕ್ ಬಿನ್ ಮಹಫೂಜ್ ಈಗ ಇದರ ಮಾಲೀಕರು. ನಮ್ಮಲ್ಲಿ 30 ರೀತಿಯ ಉಪ್ಪಿನಕಾಯಿಗಳು ಸಿಗುತ್ತವೆ. ಹುಣೆಸೆಯಿಂದ ಅಂಬಟೆವರೆಗೆ ಸಿಗುತ್ತವೆ. ನೆಲ್ಲಿಕಾಯಿ, ಹಾಗಲಕಾಯಿ, ಕರಿಬೇವು ಹೀಗೆ ವಿವಿಧ ರುಚಿಗಳಲ್ಲಿವೆ. ಹಾಗಾದರೆ ಇಲ್ಲಿ ಅತ್ಯಧಿಕ ಮಾರಾಟವಾಗುವುದೇನು? ಮಾವಿನಕಾಯಿ ಉಪ್ಪಿನಕಾಯಿಯಲ್ಲಿ ಆರು ರೀತಿಯ ಉಪ ವಿಧಗಳಿವೆ. ಅವೇ ಹೆಚ್ಚು ಓಡುತ್ತವೆ. ಮೆಂತ್ಯದ ಉಪ್ಪಿನಕಾಯಿ ಮತ್ತು ಗ್ರೀನ್ ತಿಲ್ ಬಹಳ ಪ್ರಸಿದ್ಧ. ಕೆಲವರು ಇಲ್ಲೇ ರುಚಿ ನೋಡಲು ಬಯಸುತ್ತಾರೆ. ಹೀಗಾಗಿ ಸಣ್ಣ ತಿಂಡಿಗಳಿಗೆ ಉಪ್ಪಿನಕಾಯಿ ಬೆರೆಸಿ ಕೊಡುತ್ತಾರೆ. ಒಮ್ಮೆ ರುಚಿ ನೋಡಿದವರು ಬಿಡುವುದಿಲ್ಲ.
ನೆಲಗಡಲೆ ಎಣ್ಣೆಯನ್ನು ಸಿಬ್ಬಂದಿ ತಾಜಾ ಆಗಿ ಇಟ್ಟುಕೊಳ್ಳುತ್ತಾರೆ. ಇಲ್ಲಿ ಬರುವ ಅತೀ ದೊಡ್ಡ ಗ್ರಾಹಕರು ಅನಿವಾಸಿ ಭಾರತೀಯರು. ಗಲ್ಫ್ ಮತ್ತು ಅಮೆರಿಕದಿಂದ ಇಲ್ಲಿ ಉಪ್ಪಿನಕಾಯಿಗೆ ಬೇಡಿಕೆ ಇದೆ. ಈ ಬೀದಿಯ ಮಳಿಗೆಗಳು ಉಪ್ಪಿನಕಾಯಿ ಪ್ಯಾಕ್ ಮಾಡುವ ವಿಶಿಷ್ಟ ದಾರಿಗಳನ್ನು ಕಂಡುಕೊಂಡಿದ್ದಾರೆ. ಹೀಗಾಗಿ ವಾಯು ಯಾನದಲ್ಲೂ ಅದು ಪಾಸಾಗುತ್ತದೆ! ಇದು ಸೋರಿಕೆಯಾಗುವುದೇ ಎಂದು ಗ್ರಾಹಕರು ಕೇಳುತ್ತಾರೆ. ಆದರೆ ಸಿಬ್ಬಂದಿಗಳು ಗಟ್ಟಿಯಾದ ಮೂರು ಪದರದ ಸೀಲ್ ಮಾಡಿರುವ ರೀತಿಯನ್ನು ವಿವರಿಸುತ್ತಾರೆ. ಹೊರಗಿನ ಉಪ್ಪಿನಕಾಯಿ ಪ್ಯಾಕಿಂಗನ್ನೂ ಅವರು ಈಗ ಮಾಡುತ್ತಾರೆ. ಸಣ್ಣ ಶುಲ್ಕ ತೆತ್ತರೆ ವಿಮಾನ ಹತ್ತಲು ಸಾಧ್ಯವಾಗುವ ಉಪ್ಪಿನಕಾಯಿ ಪ್ಯಾಕ್ ಸಿದ್ಧವಾಗುತ್ತದೆ.
ಕೆಂಪು ಮೆಣಸಿನಕಾಯಿಯ ಉಪ್ಪಿನಕಾಯಿ ಜೊತೆಗೆ ಮಾವಿನಹಣ್ಣು ಬಲಿಷ್ಟವಾದ ಉಪ್ಪಿನಕಾಯಿ ಕೂಡ ಅವರಲ್ಲಿದೆ. ಹುಳಿ ಉಪ್ಪಿನಕಾಯಿ, ಸಿಹಿ ಉಪ್ಪಿನಕಾಯಿಯೂ ಇವೆ. ಇವುಗಳಲ್ಲಿ ಸಕ್ಕರೆ ಮತ್ತು ಒಣಹಣ್ಣುಗಳಿರುತ್ತವೆ. ಪಪಡಾಗಳು, ಸಹಜ ಉಪ್ಪಿನಕಾಯಿ ಹೀಗೆ 15ಕ್ಕೂ ಹೆಚ್ಚಿನ ವಿಧಗಳಿವೆ. ಉದ್ದಿನ ಬೇಳೆ, ಅಕ್ಕಿ ಮತ್ತು ಸಬುದನ ಪಾಪಡ್ ಕೂಡ ಸಿಗುತ್ತವೆ.
ನಾವಿದ್ದಾಗಲೇ ಬುರ್ಕಾ ಧರಿಸಿದ ಮಹಿಳೆಯ ಸಮೂಹವೊಂದು ಬಂದು ಉಡುಗೊರೆ ನೀಡಲು ಉಪ್ಪಿನಕಾಯಿ ಖರೀದಿಸಿದರು. ಚಲನಚಿತ್ರ ತಾರೆಯರು, ಶಾಸಕರು ಕೂಡ ರಂಜಾನ್ ಸೀಸನಲ್ಲಿ ಇಲ್ಲಿಗೆ ಉಪ್ಪಿನಕಾಯಿಗೆ ಬರುತ್ತಾರೆ.
ಇಲ್ಲಿನ ವಿಶೇಷ ಉಪ್ಪಿನಕಾಯಿ ಯಾವುದು? ಬಿರಿಯಾನಿ ಕಾ ಆಚಾರ್! ಅದು ಸಸ್ಯಾಹಾರಿ ಉಪ್ಪಿನಕಾಯಿ! ಮಾವಿನಕಾಯಿ ತುಂಡು, ಬಿರಿಯಾನಿ ಮಸಾಲ, ಈರುಳ್ಳಿ, ಕೆಂಪು ಮೆಣಸು, ಶುಂಠಿ, ಅರಿಶಿಣ, ಗೇರು ಬೀಜಗಳನ್ನು ಹಾಕಿ ಇದನ್ನು ತಯಾರಿಸಲಾಗುತ್ತದೆ. ಇದನ್ನು ಬಿಳಿ ಅನ್ನದ ಜೊತೆಗೆ ಬೆರೆಸಿದರೆ ಬಿರಿಯಾನಿ ರುಚಿ ಸಿಗುತ್ತದೆ.
ಕೃಪೆ: http://indianexpress.com/