ಮಗುವಿನ ಪ್ರಾಣ ಉಳಿಸಲು ಒಂದಾದ ಅತ್ಯಪರೂಪದ Bombay negative ರಕ್ತವಿರುವ ಮೂವರು ಮುಂಬೈಗರು

Update: 2016-05-26 07:55 GMT

ಮೂವರು ಮುಂಬೈ ನಿವಾಸಿಗಳು ಜೊತೆಗೂಡಿ ಅಮೂಲ್ಯವಾದ ರಕ್ತವನ್ನು ದಾನ ಮಾಡಿ ಹೈದರಾಬಾದಿನಲ್ಲಿ ಹುಟ್ಟಿದ ಮಗುವನ್ನು ಜೀವಕ್ಕೆ ಮಾರಕವಾದ ಹೃದಯ ರೋಗದಿಂದ ಬಚಾವ್ ಮಾಡಿದ್ದಾರೆ. ಭಾರತದಲ್ಲಿ 20 ಮಂದಿಯಲ್ಲಿ ಮಾತ್ರ ಇದೆ ಎನ್ನಲಾದ ಅತೀ ಅಪರೂಪದ ರಕ್ತದ ಗುಂಪು ಇವರಲ್ಲಿದೆ.

ದೇಶದಾದ್ಯಂತ ನಾಲ್ಕು ದಿನಗಳ ಕಾಲ ವಿಪರೀತ ಹುಡುಕಾಡಿದ ಮೇಲೆ ಬಾಂಬೆ ಬ್ಲಡ್ ಗ್ರೂಪ್ (ನೆಗೆಟಿವ್) ರಕ್ತದ ಮೂರು ಯುನಿಟ್‌ಗಳು ಹೈದರಾಬಾದಿನ ಸ್ಟಾರ್ ಆಸ್ಪತ್ರೆಗೆ ಬಂದಾಗ ಆರು ತಿಂಗಳ ಮಗು ಬಾಬು ಜೀವಕ್ಕೆ ಮಾರಕವಾದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ. ಬಾಂಬೆ ಬ್ಲಡ್ ಗ್ರೂಪ್ ಅತೀ ಅಪರೂಪ. ಇಡೀ ದೇಶದಲ್ಲಿಯೇ 400ಕ್ಕೂ ಕಡಿಮೆ ಮಂದಿ ಇದನ್ನು ಹೊಂದಿರುವ ಸಾಧ್ಯತೆಯಿದೆ. ಆದರೆ ಜೀವಿತವಿದ್ದವರಲ್ಲಿ ಕೇವಲ 20 ಮಂದಿಯಲ್ಲಿ ಈ ರಕ್ತದ ನೆಗೆಟಿವ್ ವಿಧವಿರುವುದು ತಿಳಿದಿದೆ. ಮುಂಬೈನಲ್ಲಿ ಈ ರಕ್ತವನ್ನು ಕೊಡುವ ನಾಲ್ವರು ದಾನಿಗಳಿದ್ದಾರೆ.

ಮಗು ನಾಲ್ಕು ತಿಂಗಳ ಪ್ರಾಯದಲ್ಲಿದ್ದಾಗ ಅಪರೂಪದ ರಕ್ತದ ಗುಂಪು ಇದೆ ಎನ್ನುವುದು ಕುಟುಂಬಕ್ಕೆ ತಿಳಿದಿತ್ತು. ಅದೇ ಸಮಯದಲ್ಲಿ ಮಗುವಿಗೆ ಹೃದಯ ಸಮಸ್ಯೆ ಇರುವುದು ಮತ್ತು ಶುದ್ಧೀಕೃತ ರಕ್ತವು ಹೃದಯದ ತಪ್ಪು ಕಡೆಗೆ ಹೋಗುತ್ತಿರುವುದೂ ತಿಳಿದು ಬಂತು. ಅಪರೂಪದ ರಕ್ತದ ಮಗುವಾಗಿದ್ದರೂ ರೋಗವನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆ ಅಗತ್ಯವಿತ್ತು. ಜೀವ ಉಳಿಸುವ ಈ ಶಸ್ತ್ರಚಿಕಿತ್ಸೆಗೆ ಕನಿಷ್ಠ ಮೂರು ಯುನಿಟ್ ರಕ್ತವಾದರೂ ಬೇಕಿತ್ತು.

ಕುಟುಂಬ ಆತಂಕದಿಂದ ರಕ್ತಕ್ಕಾಗಿ ಹುಡುಕಾಡಲಾರಂಭಿಸಿತು. ಕುಟುಂಬದಲ್ಲಿ ಯಾರಿಗೂ ಈ ರಕ್ತದ ಗುಂಪು ಇರಲಿಲ್ಲ. ನಗರದಲ್ಲಿ ಹುಡುಕಿದೆವು. ನಿಧಾನವಾಗಿ ದೇಶಕ್ಕೆ ಹುಡುಕಾಟ ವ್ಯಾಪಿಸಿತು. ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಭಾರತದಾದ್ಯಂತ ಸಂಪರ್ಕಿತ ಕೇಂದ್ರಗಳಲ್ಲಿ ವಿಚಾರಿಸಿತು ಎಂದು ಮಗುವಿನ ತಂದೆ ಜಿ ಮೈಕಲ್ ಹೇಳುತ್ತಾರೆ. ಮೈಕಲ್ ದಿನಗೂಲಿ ನೌಕರ. ಅಂತಿಮವಾಗಿ ಥಿಂಕ್ ಫೌಂಡೇಶನ್ ಬಳಿ ಬಾಂಬೆ ಬ್ಲಡ್ ಗ್ರೂಪ್ ದಾನಿಗಳ ದೊಡ್ಡ ನೋಂದಣಿ ಇರುವುದು ತಿಳಿಯಿತು. ಹಿಂದೆಯೂ ನಾವು ಬಾಂಬೆ ಬ್ಲಡ್ ಅನ್ನು ಅನೇಕ ಬಾರಿ ವ್ಯವಸ್ಥೆ ಮಾಡಿದ್ದೇವೆ. ಆದರೆ ಬಾಂಬೆ ನೆಗೆಟಿವ್ ಬೇಡಿಕೆ ದುಃಸ್ವಪ್ನವಾಗಿತ್ತು. ದೇಶದಲ್ಲಿ ನಮಗೆ ತಿಳಿದಿದ್ದ 20 ಮಂದಿಯಲ್ಲಿ ಅಗತ್ಯವಿರುವುದು ತಿಳಿದಾಗ ನಿತೇಶ್ ಖೊಂಡ್ವಿಲ್ಕರ್, ಪ್ರವೀಣ್ ಪಾಟೀಲ್ ಮತ್ತು ಆದೇಶ್ ಗಜಾರೆ ರಕ್ತದಾನಕ್ಕೆ ಮುಂದೆ ಬಂದರು ಎನ್ನುತ್ತಾರೆ ಥಿಂಕ್ ಫೌಂಡೇಶನಿನ ವಿನಯ್ ಶೆಟ್ಟಿ. ಅವರು ವಿಮಾನ ನಿಲ್ದಾಣಕ್ಕೆ ಸಮೀಪವಿರುವ ಬಾಂದ್ರಾದ ಮಹಾತ್ಮಾ ಗಾಂಧಿ ಸೇವಾ ಮಂದಿರ ಬ್ಯಾಂಕಲ್ಲಿ ರಕ್ತ ದಾನ ಮಾಡಿದರು. ಹೃದಯ ತಜ್ಞ ಬಿ.ಜಗನ್ನಾಥ್ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಬಾಬು ಈಗ ಗುಣಮುಖನಾಗುತ್ತಿದ್ದಾನೆ. ಶಸ್ತ್ರಚಿಕಿತ್ಸೆ ಕಷ್ಟವಾಗಿತ್ತು. ರಕ್ತಪರಿಚಲನೆ ಯಂತ್ರದಲ್ಲಿ ನಡೆಯುತ್ತಿರುವಾಗ ರಕ್ತವನ್ನು ದೇಹದಿಂದ ಪೂರ್ಣವಾಗಿ ತೆಗೆಯಬೇಕಿತ್ತು. ಇಂತಹ ಸಮಯದಲ್ಲಿ ರಕ್ತಸ್ರಾವವಾಗುವ ಸಂಭವವಿರುತ್ತದೆ. ಆಗ ರಕ್ತದ ಯುನಿಟುಗಳು ಅಗತ್ಯವಿರುತ್ತದೆ ಎಂದು ಜಗನ್ನಾಥ್ ಹೇಳುತ್ತಾರೆ.

ಕೃಪೆ: http://timesofindia.indiatimes.com/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News