ಫಾಸ್ಟ್‌ಫುಡ್ ಬದಲು ಇವುಗಳನ್ನು ಮೆಲ್ಲುವ ಮೂಲಕ ಹಸಿವು ನೀಗಿಸಿ

Update: 2016-05-28 06:26 GMT

ಊಟದ ನಡುವೆ ಹಸಿವೆಯಾದಲ್ಲಿ ಸಂಸ್ಕರಿತ ಆಹಾರಗಳನ್ನೇ ಸೇವಿಸಬೇಕಾಗಿಲ್ಲ. ಆರೋಗ್ಯಕರವಾದ ಬದಲಿ ಆಹಾರ ಬಳಸಬಹುದು. ಹಸಿವೆಯಾದಾಗ ತಿನ್ನಲೆಂದು ಈ ಆಹಾರಗಳನ್ನು ಜೊತೆಗಿಟ್ಟುಕೊಳ್ಳಿ.

►ಕಡಲೆ

ಯಾವುದೇ ಸಮಯದಲ್ಲೂ ಇದನ್ನು ಸೇವಿಸಬಹುದು. ಪ್ರೊಟೀನ್ ಹೊಂದಿದೆ. ಕೊಬ್ಬಿಲ್ಲ. ಖಾಲಿ ಕಡಲೆ, ಮಸಾಲೆ ಕಡಲೆ ಅಥವಾ ಕಡಲೆ ಬೇಳೆ ಏನನ್ನು ಬೇಕಾದರೂ ಸೇವಿಸಬಹುದು.

►ಉರಿಯಕ್ಕಿ (ಮಂಡಕ್ಕಿ)

ಮಂಡಕ್ಕಿ ಹಗುರವಾದ ಸ್ನಾಕ್ ಮತ್ತು ದಿನದ ಯಾವ ಸಮಯದಲ್ಲಿ ಬೇಕಾದರೂ ಸೇವಿಸಬಹುದು. ಎಣ್ಣೆ, ಉಪ್ಪು ಮತ್ತು ಅರಿಶಿಣ ಜೊತೆಗೆ ಕರಿದರೆ ಉತ್ತಮ ರುಚಿ ಸಿಗುತ್ತದೆ.

►ಕಡಲೆ ಕಾಳುಗಳು

ಪ್ರೊಟೀನ್, ಆರೋಗ್ಯಕರ ಕೊಬ್ಬು ಮತ್ತು ಹಲವು ವಿಟಮಿನ್ ಗಳು ಮತ್ತು ಲವಣಗಳು ಇವುಗಳನ್ನು ಅದ್ಭುತ ಆರೋಗ್ಯಕರ ಆಹಾರವಾಗಿಸುತ್ತದೆ. ಬೋರ್ ಆದರೆ ಮಸಾಲ ಕಡಲೆ ಕಾಳುಗಳನ್ನು ಖರೀದಿಸಿ ಸೇವಿಸಬಹುದು.

►ಬೇಯಿಸಿದ ಸ್ನಾಕ್ ಗಳು

ಕರಿದ ಪೊಟಾಟೊ ಚಿಪ್ಸ್ ಬದಲಾಗಿ ಬೇಯಿಸಿದ ಖಾಖ್ರ, ರಾಗಿ ಇನಚಿಪ್ಸ್ ಅಥವಾ ಸೋಯಾ ಸ್ಟಿಕ್ಸ್ ಸೇವಿಸಬಹುದು.

►ಸೋಂಪು 

ಸಿಹಿ ಜೀರಿಗೆ ಅಥವಾ ಸೋಂಪನ್ನು ನಿಮ್ಮ ಡ್ರಾಯರಲ್ಲಿ ಸದಾ ಇಡಿ. ಆರೋಗ್ಯಕರ ಪೌಷ್ಠಿಕಾಂಶಗಳು ಇದ್ದರೂ ಇದನ್ನು ಸೇವಿಸಿದರೆ ಜೀರ್ಣಕ್ರಿಯೆಯಾಗುತ್ತದೆ ಮತ್ತು ತಾಜಾತನ ಸಿಗುತ್ತದೆ.

►ಮಸಾಲಾ ಜೋಳ

ಜೋಳಕ್ಕೆ ಖಾರ ಸೇರಿಸಿ ಸೇವಿಸುವುದು ಆರೋಗ್ಯಕರ.

►ಮೊಳಕೆ ಕಾಳುಗಳು

ಮೊಳಕೆ ಕಾಳುಗಳನ್ನು ಬೇಯಿಸಿ ತಿಂದಲ್ಲಿ ಉತ್ತಮ.

►ಮೊಟ್ಟೆ ಸ್ಯಾಂಡ್ ವಿಚ್

ಮೊಟ್ಟೆ ಇಷ್ಟವಾದಲ್ಲಿ ಅವುಗಳನ್ನು ಇಡೀ ಗೋಧಿ ಬ್ರೆಡ್ ಒಳಗೆ ಇಟ್ಟು ಪ್ರೊಟೀನ್ ಯುಕ್ತ ಸ್ನಾಕ್ ಮಾಡಬಹುದು. ಅದಕ್ಕೆ ಬೇಕಾದರೆ ಸಾಸ್ ಸೇರಿಸಬಹುದು.

►ಮನೆಯಲ್ಲಿ ಮಾಡಿದ ಪಾಪ್ ಕಾರ್ನ್

ಮಳಿಗೆಯಿಂದ ಪಾಪ್ ಕಾರ್ನ್ ಖರೀದಿಸುವ ಬದಲಾಗಿ ಮನೆಯಲ್ಲಿಯೇ ತುಪ್ಪ ಮತ್ತು ಉಪ್ಪು ಹಾಕಿ ಪಾಪ್ ಕಾರ್ನ್ ಮಾಡಿ.

►ಹಣ್ಣುಗಳು ಮತ್ತು ತರಕಾರಿಗಳು

ನಿಮ್ಮ ಪ್ರಿಯ ಹಣ್ಣುಗಳು ಮತ್ತು ತರಕಾರಿಗಳನ್ನು ಕಚೇರಿಗೆ ಹೋಗುವಾಗ ತೆಗೆದುಕೊಂಡು ಹೋಗಿ. ಆಗಾಗ್ಗೆ ತಿನ್ನಲು ಇವು ಉತ್ತಮ ಸ್ನಾಕ್ಸ್.

►ಸಾಸಿವೆ ಮತ್ತು ಬೆಲ್ಲದ ಲಡ್ಡುಗಳು

ವಿಟಮಿನ್, ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶವನ್ನು ಕೊಡುತ್ತದೆ. ಇದನ್ನು ತಿನ್ನುವುದು ಆರೋಗ್ಯಕಾರಿ.

►ಸೂಪ್

ನಿಮ್ಮದೇ ಸೂಪ್ ತಯಾರಿಸಿ ತಿನ್ನಿ.

►ಓಟ್ಸ್

ಓಟ್ಸನ್ನು ಬೇಯಿಸಿ ಅದಕ್ಕೆ ಸ್ವಲ್ಪ ಹಾಲು ಬೆರೆಸಿ ಸೇವಿಸಬಹುದು. ಇದು ಹೆಚ್ಚು ಪೌಷ್ಠಿಕ ಮತ್ತು ರುಚಿಕರ.

►ಇಡೀ ಗೋಧಿ ಬಿಸ್ಕತ್ತುಗಳು 

ಆರೋಗ್ಯಕರ.

ಕೃಪೆ: http://www.indiatimes.com/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News