ಹಸಿವಾಗದಿರುವುದು ಒಂದು ರೋಗ: ಮನೆಮದ್ದು ಮಾಡಿ

Update: 2016-07-09 07:12 GMT

ಈದಿನಗಳಲ್ಲಿ ಹೆಚ್ಚಿನವರು ನನಗೆ ಹಸಿವಾಗುವುದಿಲ್ಲ. ತಿನ್ನಲು ಮನಸಾಗುವುದಿಲ್ಲ ಎಂದು ಹೇಳುತ್ತಾರೆ. ನಿಮಗೆ ಗೊತ್ತೆ. ಇದು ಒಂದು ರೋಗವೂ ಆಗಿರಬಹುದು. ಅದರಿಂದಾಗಿ ಶರೀರಕ್ಕೆ ಕೆಟ್ಟ ಪ್ರಭಾವ ಬೀಳಬಹುದು. ತೂಕ ಕಡಿಮೆ ಆಗುವುದು. ನಿಶ್ಶಕ್ತಿ ಆಗುವುದು. ಹೀಗೆ ಬಹಳಷ್ಟು ಕಾರಣಗಳಿವೆ.

ಹಸಿವು ಆಗದಿರುವುದಕ್ಕೆ ಕಾರಣಗಳು

►ಒಂದೇ ಸ್ಥಳದಲ್ಲಿ ಕೂತಿರುವುದು.

►ಹೆಚ್ಚು ಚಾ ಮತ್ತು ಕಾಫಿ ಕುಡಿಯುವುದು.

►ತಡರಾತ್ರೆಯವರೆಗೆ ನಿದ್ದೆ ಕೆಟ್ಟು ಇರುವುದು.

► ತಣ್ಣನೆಯ ಊಟ ಸೇವಿಸುವುದು.

►ಸಿಹಿ ಹೆಚ್ಚು ತಿನ್ನುವುದು.

ಇವು ಮಾತ್ರವಲ್ಲ ಮತ್ತು ಹಲವು ಕಾರಣಗಳು ಹಸಿವಾಗದಿರುವುದಕ್ಕಿವೆ. ಕೆಲವು ಮನೆಮದ್ದಿನಿಂದ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕಾಗಿದೆ.

ಪರಿಹಾರ

1.30ಮಿ.ಲಿ ನೀರಿನಲ್ಲಿ ಕೊತ್ತಂಬರಿ ಸೊಪ್ಪಿನ ರಸವನ್ನು ಹಾಕಿ ದಿನಾಲೂ ಕುಡಿಯುವುದರಿಂದ ಹಸಿವಾಗುತ್ತದೆ.

2.ಲಸ್ಸಿಯಲ್ಲಿ ಕಲ್ಲುಪ್ಪು, ಹುರಿದ ಜೀರಿಗೆ ಮತ್ತು ಕಾಳುಮೆಣಸು ಹಾಕಿ ಕುಡಿಯುವುದರಿಂದ ಪ್ರಯೋಜನವಿದೆ.

3. ಊಟವಾದಮೇಲೆ ನೀರಿನ ಜೊತೆ ಪಾರ್ಸ್ಲಿ ಸಸ್ಯವನ್ನು ಸೇವಿಸುವುದರಿಂದ ಆಹಾರ ಜೀರ್ಣ ಆಗುತ್ತದೆ. ಹಸಿವು ಆಗುತ್ತದೆ.

4. ಒಂದು ಗ್ಲಾಸು ಬಿಸಿನೀರಿಗೆ ಅರ್ಧಚಮಚ ಅಡುಗೆ ಸೋಡಾ ಹಾಕಿ ಕುಡಿಯುವುದರಿಂದ ಹಸಿವು ಆಗುತ್ತದೆ.ಆದರೆ ಹಸಿವಾದ ಮೇಲೆ ಇದನ್ನು ಕುಡಿಯಬಾರದು.

5. ಊಟದಲ್ಲಿ ಕೊತ್ತಂಬರಿ,ನಿಂಬೆ ಮತ್ತು ಶುಂಠಿ ಇರಬೇಕು.

6. ಅರೆದ ಕಾಳುಮೆಣಸನ್ನು ಮೂಲಂಗಿಗೆ ಹಚ್ಚಿ ತಿಂದರೆ ಪ್ರಯೋಜನ ಇದೆ.

7. ಫಾರ್ಸ್ಲಿ ಸಸ್ಯವನ್ನು ಕಾವಲಿಯಲ್ಲಿ ಬಿಸಿ ಮಾಡಿ ಅದರ ಚೂರ್ಣ ಮಾಡಿ. ಇದಕ್ಕೆ ಸ್ವಲ್ಪ ಉಪ್ಪು ಸೇರಿಸಿ ಊಟವಾದ ಮೇಲೆ ಬಾಯಿಯಲ್ಲಿಡಿ. ಇದು ಹಸಿವು ಹೆಚ್ಚಿಸಲು ಪ್ರಭಾವಿ ಉಪಾಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News