ವೈದ್ಯರನ್ನು ದೂರ ಇಡಬೇಕಾದರೆ ಈರುಳ್ಳಿಯನ್ನು ಹತ್ತಿರ ಇಟ್ಟುಕೊಳ್ಳಿ!
ನಾನು ದೆಹಲಿಯಲ್ಲಿ ಹುಟ್ಟಿ ಬಹುತೇಕ ಬಾಲ್ಯವನ್ನು ಅಲ್ಲೇ ಕಳೆದರೂ ಕಾಲೇಜಿಗಾಗಿ ಅಹಮದಾಬಾದಿಗೆ ಹೋದೆ. ನಂತರ ಮುಂಬೈನಲ್ಲಿ ಕೆಲಸಕ್ಕೆ ಸೇರಿದೆ. ಆಹಾರದ ಬಗ್ಗೆ ಬಹಳ ಆಸಕ್ತಿ ಇರುವ ನಾನು ಭಾರತದಲ್ಲಿ ಬಹಳ ವಿಧಧ ಆಹಾರ ಪದ್ಧತಿ ಇರುವುದನ್ನು ತಿಳಿದಿದ್ದೆ. ಜೀವಮಾನವಿಡೀ ಒಂದೊಂದು ತಿನಿಸು ತಿಂದರೂ ಇನ್ನೂ ಕೆಲವು ಬಾಕಿ ಉಳಿದಿರುತ್ತದೆ. ಪ್ರತೀ ರಾಜ್ಯ, ಪ್ರತೀ ಜಿಲ್ಲೆ ವಿಶೇಷ ಆಹಾರ ವಿಧಾನ ಮತ್ತು ಪರಂಪರೆ ಹೊಂದಿದೆ. ಬಳಸುವ ವಸ್ತುಗಳೂ ಭಿನ್ನ. ದೆಹಲಿಯಿಂದ ಪಶ್ಚಿಮ ಭಾರತದ ಕಡೆಗೆ ಹೋದರೆ ಈರುಳ್ಳಿ ಕಡಿಮೆ ತಿನ್ನುವುದು ಕಂಡೆ. ಮಹಾರಾಷ್ಟ್ರ, ಗುಜರಾತ್ ಮತ್ತು ಕರ್ನಾಟಕ ಅಥವಾ ಕೇರಳಗಳಲ್ಲಿ ಈರುಳ್ಳಿ ಕಡಿಮೆ ತಿನ್ನುತ್ತಾರೆ. ಆದರೆ ಉತ್ತರ ಭಾರತ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಊಟಕ್ಕೆ ಈರುಳ್ಳಿ ಬೇಕೇ ಬೇಕು. ಚೋಲೆ ಬಟೋರೆ ಪ್ಲೇಟಿನಲ್ಲಿ ಹಸಿ ಈರುಳ್ಳಿ ಇಲ್ಲದ್ದನ್ನು ಊಹಿಸಲು ಸಾಧ್ಯವೇ? ಕಬಾಬ್ ತಿನ್ನುವಾಗ ಹಸಿರು ಚಟ್ನಿಯಲ್ಲಿ ಅದ್ದಿದ ಈರುಳ್ಳಿ ಇಲ್ಲದಿದ್ದರೆ? ಹಲವು ಪರಂಪರೆಯಂತೆ ಈರುಳ್ಳಿ ಸೇವಿಸಲೂ ವೈಜ್ಞಾನಿಕ ಕಾರಣಗಳಿವೆ. ಈರುಳ್ಳಿಯನ್ನು ಬೇಸಗೆಯಲ್ಲಿ ತಂಪಾಗಿಡಲೂ ಸೇವಿಸುತ್ತಾರೆ. ಇಲ್ಲಿ ಹಸಿ ಈರುಳ್ಳಿಯ ಕೆಲವು ಉತ್ತಮ ಗುಣಗಳನ್ನು ತಿಳಿಸಿದ್ದೇವೆ.
ಹಸಿ ಈರುಳ್ಳಿಯಲ್ಲಿರುವ ಪೌಷ್ಠಿಕಾಂಶ ಒಂದು ಕಪ್ ಕತ್ತರಿಸಿದ ಈರುಳ್ಳಿಯಲ್ಲಿ ಇವುಗಳು ಇವೆ:
► 64 ಕ್ಯಾಲರಿಗಳು
► 15 ಗ್ರಾಂ ಕಾರ್ಬೋಹೈಡ್ರೇಟ್
► 0 ಗ್ರಾಂ ಕೊಬ್ಬು
► 3 ಗ್ರಾಂ ಫೈಬರ್
► 2 ಗ್ರಾಂ ಪ್ರೊಟೀನ್
► 0 ಗ್ರಾಂ ಕೊಲೆಸ್ಟರಾಲ್
► ಶೇ. 10 ಅಥವಾ ಹೆಚ್ಚು ವಿಟಮಿನ್ ಸಿ, ವಿಟಮಿನ್ ಬಿ-6 ಮತ್ತು ಮ್ಯಾಂಗನೀಸ್ ಮೊದಲಾದವು.
►ಅವುಗಳಲ್ಲಿ ಸಣ್ಣ ಪ್ರಮಾಣದ ಕ್ಯಾಲ್ಸಿಯಂ, ಕಬ್ಬಿಣ, ಫೊಲೇಟ್, ಮೆಗ್ನೇಶಿಯಂ, ಪಾಸ್ಫರಸ್ ಮತ್ತು ಪೊಟಾಶಿಯಂ ಇದೆ. ಅಲ್ಲದೆ ಆಂಟಿ ಆಕ್ಸಿಡೆಂಟ್‌ಗಳಾದ ಕ್ಯುರಾಸಿಟಿನ್ ಮತ್ತು ಸಲ್ಫರ್ ಕೂಡ ಇದೆ.
ಹಸಿ ಈರುಳ್ಳಿಗಳ 10 ಮಾಂತ್ರಿಕ ಲಾಭಗಳು
► ಹಸಿ ಈರುಳ್ಳಿ ಎಲ್‌ಡಿಎಲ್ ಕೊಲೆಸ್ಟರಾಲ್ ಕಡಿಮೆ ಮಾಡುತ್ತದೆ ಮತ್ತು ಹೃದಯದ ಆರೋಗ್ಯ ಕಾಯುತ್ತದೆ.
► ವಿಟಮಿನ್ ಸಿ ಈರುಳ್ಳಿಯಲ್ಲಿರುವ ಫೀಟೋಕೆಮಿಕಲ್ಸ್ ಜೊತೆಗೂಡಿಸಿಕೊಂಡು ನಿರೋಧಕ ಶಕ್ತಿ ಬೆಳೆಯಲು ನೆರವಾಗುತ್ತದೆ.
► ಕ್ವೆರಾಸಿಟಿನ್ ಈರುಳ್ಳಿಯಲ್ಲಿರುವ ಪ್ರಭಾವಿ ಸಂಯುಕ್ತವಾಗಿದ್ದು ಕ್ಯಾನ್ಸರ್ ರಕ್ಷಣೆಗೆ ನೆರವಾಗುತ್ತದೆ. ಮುಖ್ಯವಾಗಿ ಹೊಟ್ಟೆ ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್ ನಿವಾರಕ.
► ಕ್ರೋಮಿಯಂ ಈ ತರಕಾರಿಯ ಬೇರಿನಲ್ಲಿದೆ. ಅದು ರಕ್ತದ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ನೆರವಾಗುತ್ತದೆ.
► ಈರುಳ್ಳಿ ರಸ ಮತ್ತು ಜೇನು ಸೇವಿಸಿದರೆ ಜ್ವರ, ಸಾಮಾನ್ಯ ಶೀತ ಮತ್ತು ಅಲರ್ಜಿಗಳು ಕಡಿಮೆಯಾಗುತ್ತವೆ. - ಸಣ್ಣ ಈರುಳ್ಳಿಯನ್ನು ಮೂಗಿನ ಬಳಿ ಇಟ್ಟು ಹೀರಿಕೊಂಡರೆ ಮೂಗಿನಿಂದ ಸಿಂಬಳ ಒಸರುವುದು ನಿಲ್ಲುತ್ತದೆ.
► ಈರುಳ್ಳಿಯಲ್ಲಿರುವ ಫೊಲೇಟ್ ಖಿನ್ನತೆ ಮತ್ತು ನಿದ್ರಾರಾಹಿತ್ಯದಿಂದ ರಕ್ಷಿಸುತ್ತದೆ.
► ವಿಟಮಿನ್ ಸಿ ಚರ್ಮ ಮತ್ತು ಕೂದಲ ಆರೋಗ್ಯಕ್ಕೆ ಕಾರಣವಾಗಿರುವ ಕೊಲಾಜನ್ ರೂಪುಗೊಳ್ಳುವುದರಿಂದ ರಕ್ಷಿಸುತ್ತದೆ.
► ಬ್ಯಾಕ್ಟೀರಿಯ ವಿರೋಧಿ ಮತ್ತು ಉರಿಯೂತ ವಿರೋಧಿ ತತ್ವಗಳು ಈರುಳ್ಳಿಯಲ್ಲಿವೆ. - ಹಸಿ ಈರುಳ್ಳಿ ಕಚ್ಚುವುದರಿಂದ ಬಾಯಿಯ ಆರೋಗ್ಯವೂ ಸುಧಾರಿಸುತ್ತದೆ. ಅವು ಹಲ್ಲು ಹುಳ ಬೀಳುವ ಬ್ಯಾಕ್ಟೀರಿಯಗಳನ್ನು ನಿವಾರಿಸುತ್ತವೆ.
ನಿಮಗಿದು ಗೊತ್ತೆ?
ಈರುಳ್ಳಿಯಲ್ಲಿರುವ ಫ್ಲೇವನಾಯ್ಡುಗಳು ಹಲವು ಆರೋಗ್ಯ ಲಾಭ ಕೊಡುತ್ತವೆ. ಇವು ಸಾಮಾನ್ಯವಾಗಿ ಈರುಳ್ಳಿಯ ಹೊರ ಭಾಗದಲ್ಲಿವೆ. ಗರಿಷ್ಠ ಲಾಭ ಪಡೆದುಕೊಳ್ಳಲು ಈರುಳ್ಳಿಯ ಹೊರ ಚರ್ಮವನ್ನು ಸ್ವಲ್ಪ ಮಾತ್ರವೇ ತೆಗೆದು ಬಳಸಿ. ಹೆಚ್ಚು ಭಾಗ ತೆಗೆದರೆ ಕೆಂಪು ಈರುಳ್ಳಿಯಿಂದ ಶೇ. 20 ಕ್ವೆರ್ಸಟಿನ್ ಮತ್ತು ಶೇ. 75 ಆಂತೊಸಿನನಿನ್ ಹೋಗುತ್ತದೆ.
5000 ವರ್ಷಗಳಿಂದ ಸುಮಾರು 105 ಬಿಲಿಯನ್ ಪೌಂಡುಗಳಷ್ಟು ಈರುಳ್ಳಿಗಳನ್ನು ಜಾಗತಿಕವಾಗಿ ಬೆಳೆಯಲಾಗುತ್ತಿದೆ. ಅವುಗಳು ಭಾರತ, ಚೀನಾ ಮತ್ತು ಮೆಕ್ಸಿಕನ್ ಅಡುಗೆಯಲ್ಲಿ ಅಗತ್ಯ.
ಕೃಪೆ : http://food.ndtv.com/