ಸೊಳ್ಳೆ ಕಡಿತದ ಸಂಕಟದಿಂದ ಮುಕ್ತಿ ಹೇಗೆ?
ಮಳೆಗಾಲ ಎಲ್ಲರಿಗೂ ಖುಷಿ ನೀಡಬಹುದು. ಬೇಸಗೆಯ ಧಗೆಯಿಂದ ಆರಾಮವೂ ನೀಡಬಹುದು. ಆದರೆ ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ಬಹಳ ಇರುತ್ತದೆ. ಈ ಸೊಳ್ಳೆಗಳು ಕಚ್ಚುವುದರಿಂದ ತಕ್ಷಣದಲ್ಲಿ ಚರ್ಮದಲ್ಲಿ ಊದುವಿಕೆ, ಕೆಂಪಾಗುವುದು ಮತ್ತು ಉರಿಯೂತ ಕಂಡುಬರುತ್ತದೆ. ತಪ್ಪಿಸಿಕೊಳ್ಳಲೇ ಆಗದ ಸಂಕಟವೆಂದರೆ ಸೊಳ್ಳೆಕಡಿತ. ಬಹಳ ಸಮಯದವರೆಗೆ ಸೊಳ್ಳೆ ಕಡಿತದ ಉರಿ ಮತ್ತು ಗುರುತು ಉಳಿಯಬಹುದು. ಆದರೆ ಕಡಿತದಿಂದ ತಪ್ಪಿಸಿಕೊಳ್ಳಲು ಸಾಕಷ್ಟು ದಾರಿ ಇವೆ. ಅಲ್ಲದೆ ಕಡಿತವಾದಾಗ ತುರಿಕೆ ಕಡಿಮೆ ಮಾಡಲು ಮನೆಯಲ್ಲಿರುವ ವಸ್ತುಗಳನ್ನೇ ಬಳಸಿಕೊಳ್ಳಬಹುದು.
- ಶೀತಲವಾದ, ರೆಫ್ರಿಜರೇಟರಿನಲ್ಲಿಟ್ಟ, ಬಳಸಿದ ಗ್ರೀನ್ ಟೀ ಬ್ಯಾಗನ್ನು ಸೊಳ್ಳೆ ಕಡಿದಲ್ಲಿ ಇಡಿ. ಕೆಲ ನಿಮಿಷ ಹಾಗೇ ಬಿಡಿ. ತಂಪಾದ ಟೀ ಬ್ಯಾಗ್ ಉರಿ ಕಡಿಮೆ ಮಾಡುತ್ತದೆ. ಚಹಾದ ಸಂಯುಕ್ತಗಳು ಉರಿಯನ್ನು ಕಡಿಮೆ ಮಾಡಲು ನೆರವಾಗುತ್ತವೆ.
- ಮತ್ತೊಂದು ಆಯ್ಕೆ ಎಂದರೆ ಓಟ್‌ಮೀಲ್ ಪೇಸ್ಟ್ ಮಾಡುವುದು ಮತ್ತು ನೇರವಾಗಿ ಸೊಳ್ಳೆ ಕಡಿದಲ್ಲಿ ಇಟ್ಟು ಆ ಜಾಗ ನಿಧಾನವಾಗಿ ಒಣಗಲು ಬಿಡುವುದು.
- ಜೇನುತುಪ್ಪ ಮತ್ತೊಂದು ಅತ್ಯುತ್ತಮ ದಾರಿ. ಆ್ಯಂಟಿ ಬ್ಯಾಕ್ಟೀರಿಯ ಮತ್ತು ಆ್ಯಂಟಿ ಉರಿಯೂತ ಅಂಶಗಳು ಜೇನುತುಪ್ಪದಲ್ಲಿವೆ. ಸಣ್ಣ ಬಿಂದನ್ನು ಸೊಳ್ಳೆ ಕಡಿದಲ್ಲಿ ಹಾಕಿ ಉರಿ ಕಡಿಮೆಯಾಗುತ್ತದೆ.
- ಅಲೋವೇರದಲ್ಲೂ ಉರಿಯೂತ ನಿರೋಧ ಅಂಶಗಳಿವೆ. ಇದು ಕಡಿತದ ನೋವು ಕಡಿಮೆ ಮಾಡುತ್ತದೆ ಮತ್ತು ಗಾಯವನ್ನು ನಿವಾರಿಸುತ್ತದೆ. ಸಸ್ಯದ ಎಲೆಯ ದ್ರವವನ್ನು ಕಡಿದಲ್ಲಿ ಹಚ್ಚಿದರೆ ಸಾಕು.
- ಐಸ್ ಕ್ಯೂಬ್ ಅಥವಾ ಕೋಲ್ಡ್ ಪ್ಯಾಕ್ ಕೂಡ ಇಡಬಹುದು. ಸೊಳ್ಳೆ ಕಡಿದಾಗ ಇದು ಅತ್ಯುತ್ತಮ. ಮಂಜುಗಡ್ಡೆ ಚೂರುಗಳನ್ನು ಸೊಳ್ಳೆ ಕಡಿದಲ್ಲಿ ಮೆಲ್ಲಗೆ ಇಟ್ಟರಾಯಿತು.:
ಕೃಪೆ : http://zeenews.india.com/