ಗಿಡಮೂಲಿಕೆಗಳ ಔಷಧಿ ಸಂಪೂರ್ಣ ಸುರಕ್ಷಿತವೆ?
ತಮ್ಮ ಸ್ನಾಯು ಸೆಳೆತ ಮತ್ತು ನೋವುಗಳಿಗೆ ಸಾಂಪ್ರದಾಯಿಕ ಗಿಡಮೂಲಿಕೆಗಳ ಪರಿಹಾರಕ್ಕೆ ಜೋತು ಬಿದ್ದ ಬಹಳಷ್ಟು ಮಂದಿ ಚಿಕಿತ್ಸೆ ಫಲಕಾರಿಯಾಗದೆ ಇದ್ದರೂ ಅಡ್ಡ ರಿಣಾಮಗಳಿಲ್ಲ ಎಂದುಕೊಳ್ಳುತ್ತಾರೆ.ಆದರೆ ಅದು ಯಾವಾಗಲೂ ನಿಜವಾಗುತ್ತದೆ ಎಂದೇನಿಲ್ಲ. ಇತ್ತೀಚೆಗೆ ಪೆನಿಸಿಲ್ವಾನಿಯ ಪೀರ್ಲಮನ್ ಸ್ಕೂಲ್ ಆಫ್ ಮೆಡಿಸಿನ್‌ನ ಅಮೆಲಿಯ ಬ್ರೇಯರ್ ಮತ್ತು ಡಾ ಜ್ಯೂಡಿತ್ ಗ್ರೀನ್- ಮೆಕ್ ಕೆನ್ಜಿ ಅ್ಯಯನ ಈ ಬಗ್ಗೆ ಬೆಳಕು ಚೆಲ್ಲಿದೆ.ವಿಶ್ವವಿದ್ಯಾಲಯದ 26 ವರ್ಷದ ಪದವೀದರ ಕೆಳ ಬೆನ್ನು ನೋವಿಗಾಗಿ ಭಾರತದಲ್ಲಿದ್ದಾಗ ಆಯುರ್ವೇದಿಕ್ ಹರ್ಬಲ್ ವೈದ್ಯವನ್ನು ಪ್ರಯತ್ನಿಸಿದ ಬಳಿಕ ಗಂಭೀರವಾದ ಸತುವಿನ ವಿಷದ ಸಮಸ್ಯೆಗೆ ತುತ್ತಾಗಿದ್ದರು.ಪೆನಿಸಿಲ್ವಾನಿಯಕ್ಕೆ ಹಿಂತುರಿಗಿದ ಮೇಲೂ ಅವರು ಔಷಧಿ ಮುಂದುವರಿಸಿದ್ದರು. ಮೂರು ತಿಂಗಳಲ್ಲಿ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಕೊಠಡಿಯಲ್ಲಿ ಗಂಭೀರ ಮೇಲಿನ ಹೊಟ್ಟೆ ನೋವಿನಿಂದ ದಾಖಲಾಗಿದ್ದರು. ಪರೀಕ್ಷಿಸಿದ ವೈದ್ಯರಿಗೆ ಕುಸಿದ ಹೊಟ್ಟೆ, ತೂಕ ಇಳಿದಿರುವುದು ಮತ್ತು ಕಡು ಬಣ್ಣದ ಸ್ಟೂಲ್‌ಗಳು ಇರುವುದು ಕಂಡಿದೆ. ದಾಖಲಾಗುವ ಮುನ್ನ ರೋಗಿ ರಕ್ತವಾಂತಿಯನ್ನೂ ಮಾಡಿದ್ದರು.
ಅಮೆರಿಕದಲ್ಲಿ ಆರೋಗ್ಯವಂತ ದೇಹದಲ್ಲಿ ರಕ್ತದಲ್ಲಿ ಸತುವಿನ ಪ್ರಮಾಣ 10 ug/dL ರಷ್ಟಿರಬೇಕು ಮತ್ತು 80 ug/dL ರ ಮೇಲಿದ್ದರೆ ಅಪಾಯಕಾರಿ ಸ್ಥಿತಿ ಎಂದು ತಿಳಿಯಲಾಗುತ್ತದೆ. ವಿದ್ಯಾರ್ಥಿಯ ರಕ್ತದಲ್ಲಿ ಸತುವಿನ ಪ್ರಮಾಣ 94.8 ug/dL ರಷ್ಟಿತ್ತು. ವಿದ್ಯಾರ್ಥಿಗೆ ಔಷಧಿ ಕೊಟ್ಟು ಸತುವಿನ ಪ್ರಮಾಣವನ್ನು ರಕ್ತದಿಂದ ನಿವಾರಿಸಿ ಆಯುರ್ವೇದ ಔಷಧಿ ತ್ಯಜಿಸುವಂತೆ ಹೇಳಲಾಗಿದೆ. ಮೂರೇ ತಿಂಗಳಲ್ಲಿ ಅವರು ಗುಣವಾದರು. ಮೂರು ವರ್ಷಗಳಿಂದ ಅವರ ರಕ್ತದಲ್ಲಿ ಸತುವಿನ ಪ್ರಮಾಣ 20 ug/dL ಕ್ಕಿಂತ ಕೆಳಗಿದೆ.
ಇತರ ಪ್ರಕರಣಗಳು
ಇದೊಂದೇ ಪ್ರಕರಣವಲ್ಲ. ಬ್ರೆಯೇರ್ ಮತ್ತು ಗ್ರೀನ್ ಮೆಕ್‌ಕೆಂಜಿ ಪರ್ಯಾಯ ಔಷಧಿಗಳ ಬಗ್ಗೆ ಹಾಗೂ ಮುಖ್ಯವಾಗಿ ಆಯುರ್ವೇದಿಕ್ ಗಿಡಮೂಲಿಕೆಗಳ ಕುರಿತ ತಮ್ಮ ಅಧ್ಯಯನದಲ್ಲಿ ಜಾಗತಿಕವಾಗಿ ಸತುವಿನ ವಿಷ ದೇಹಕ್ಕೆ ಸೇರುವ ಬಗ್ಗೆ ಬರೆದಿದ್ದಾರೆ. 2015ರಲ್ಲಿ ಸಂಶೋಧಕರು ಅಮೆರಿಕದಲ್ಲಿ 115 ಆಯುರ್ವೇದ ಗಿಡಮೂಲಿಕೆ ಔಷಧ ಪಡೆಯುತ್ತಿರುವವರನ್ನು ಪರೀಕ್ಷಿಸಿದಾಗ ಅವರಲ್ಲಿ 49ರಷ್ಟು ಮಂದಿ ಎಂದರೆ ಶೇ. 40ರಷ್ಟು ಸತು ವಿಷ ಹೊಂದಿರುವುದು ತಿಳಿದಿದೆ.
2000 ವರ್ಷಗಳಿಂದ ಭಾರತದಲ್ಲಿ ಬಳಸಲಾಗುತ್ತಿರುವ ಆಯುರ್ವೇದ ಔಷಧಗಳಲ್ಲಿ ಸತುವಿನ ಅಂಶವಿರಲು ಕಾರಣವೇನು? ಬ್ರೆಯೇರ್ ಮತ್ತು ಗ್ರೀನ್ ಮೆಕ್‌ಕೆಂಜಿ ವಿವರಿಸುವ ಪ್ರಕಾರ,
ಆಯುರ್ವೇದದಲ್ಲಿ ರಸಶಾಸ್ತ್ರವು ಲೋಹ ಮತ್ತು ಲವಣಗಳ ಬಗ್ಗೆ ಹೇಳುತ್ತದೆ. ಪಾದರಸ, ಸತು ಮತ್ತು ಅರ್ಸೆನಿಕ್‌ಗಳನ್ನು ಪ್ರಾಥಮಿಕ ಹರ್ಬಲ್ ತೆರಪಿಯಾಗಿ ಬಹಳಷ್ಟು ಮಾರಕ ರೋಗಗಳಿಗೆ ಬಳಸಬಹುದು. ಅದರಲ್ಲಿ ರುಮಟಾಯ್ಡಾ ಆರ್ಥರೈಟಿಸ್, ಮೂರ್ಛೆರೋಗ, ನಿದ್ರಾರಾಹಿತ್ಯ ಮತ್ತು ಅಸ್ತಮಾ ಕೂಡ ಸೇರಿದೆ.ಮಧುಮೇಹ ಮತ್ತು ಹುಳಗಳಿಗೂ ಸತುವನ್ನು ಆಯುರ್ವೇದದಲ್ಲಿ ಬಳಸಾಗುತ್ತದೆ. ಪುರಾತನ ಆಯುರ್ವೇದ ಪಠ್ಯದಲ್ಲಿ ಕೊಟ್ಟಂತೆ ಲೋಹಗಳ ಪ್ರಮಾಣ ನಿಗದಿಯಾಗಿದೆ. 2004ರಲ್ಲಿ ಅಮೆರಿಕದ ಅಧ್ಯಯನವೊಂದು ಹೇಳಿರುವ ಪ್ರಕಾರ ದಕ್ಷಿಣ ಭಾರತದಲ್ಲಿ ತಯಾರಾಗಿ ಬೋಸ್ಟನ್‌ನಲ್ಲಿ ಮಾರಾಟವಾಗುವ ಶೇ. 20ರಷ್ಟು ಆಯುರ್ವೇದ ಔಷಧಿಗಳಲ್ಲಿ ಲೋಹದ ಪ್ರಮಾಣಗಳಿವೆ.
ಅಪಾಯಕಾರಿ ನಂಬಿಕೆ
ಗಿಡಮೂಲಿಕೆಗಳ ಔಷಧಿ ಪಾರಂಪರಿಕವಾಗಿ ಸುರಕ್ಷಿತ ಎಂದು ನಂಬಬೇಡಿ. 2000 ವರ್ಷಗಳಲ್ಲಿ ಮಾನವ ದೇಹದ ಬಗ್ಗೆ ಸಾಕಷ್ಟು ಅಧ್ಯಯನಗಳಾಗಿವೆ. ಸಹಜವಾಗಿ ಸಿಗುವ ಸತು ಕೂಡ ದೇಹಕ್ಕೆ ಹಾನಿಕರ ಎಂದು ನಂಬಲಾಗಿದೆ. ಅಲ್ಲದೆ ಅಮೆರಿಕದಲ್ಲಿ ಮಾರಾಟವಾಗುವ ಬಹಳಷ್ಟು ಆಯುರ್ವೇದ ಔಷಧಿಗಳಲ್ಲಿ ಬಳಸಿದ ಎಲ್ಲಾ ಅಂಶಗಳನ್ನೂ ಔಷಧಿ ಮೇಲೆ ಬರೆದಿರಲಾಗುವುದಿಲ್ಲ ಎಂದೂ 2013ರ ಅಧ್ಯಯನ ಹೇಳಿದೆ. ಸುರಕ್ಷಿತ ವೈದ್ಯಕ್ಕಾಗಿ ಈ ಕೆಳಗಿನ ಶಿಫಾರಸುಗಳನ್ನು ಅಮೆರಿಕದ ಮಿನೆಸೊಟಾ ಆರೋಗ್ಯ ಇಲಾಖೆ ಮಾಡಿದೆ.
► ಆಯುರ್ವೇದ ಔಷಧಿಯಲ್ಲಿ ಬಳಸಲಾದ ಅಂಶಗಳ ವಿವರ ತಿಳಿದುಕೊಂಡ ಮೇಲೆ ಬಳಸುವುದು.
► ಯಾವುದೇ ಔಷಧಿಯನ್ನಾದರೂ ನಿಮ್ಮ ಕುಟುಂಬದ ವೈದ್ಯರಿಗೆ ತೋರಿಸಿ, ಅದರ ಅಂಶಗಳನ್ನು ತಿಳಿಸಿ ಬಳಸಿ.
► ಪ್ರತೀ ಗಿಡಮೂಲಿಕೆ ಔಷಧಿ ನಿಮಗೆ ಒಳಿತು ಮಾಡುತ್ತಿದೆಯೇ ಎಂದು ಜಾಗರೂಕವಾಗಿ ಪರಿಶೀಲಿಸಿ ಬಳಸಿ.
► ಗಿಡಮೂಲಿಕೆಗಳ ಔಷಧಿಗಳ ಅಂಶಗಳನ್ನು ತಿಳಿದುಕೊಂಡು ಉತ್ಪನ್ನದಲ್ಲಿ ಸತು, ಅರ್ಸೆನಿಕ್ ಮತ್ತು ಪಾದರಸವಿಲ್ಲದೆ ಇರುವುದನ್ನು ಖಚಿತಪಡಿಸಿ.
► ಯುವ ಮಕ್ಕಳು ಮತ್ತು ಗರ್ಭಿಣಿ ಮಹಿಳೆಗೆ ಕೊಡುವ ಯಾವುದೇ ಔಷಧಿಗಳ ಬಗ್ಗೆ ಜಾಗರೂಕರಾಗಿರಿ.
ಕೃಪೆ: www.minnpost.com