ಆಲ್ಕೊಹಾಲ್ ಏಳು ರೀತಿಯ ಕ್ಯಾನ್ಸರ್‌ಗಳ ಜನಕ!: ಅಧ್ಯಯನ ವರದಿ

Update: 2016-07-24 05:53 GMT

ಲಂಡನ್,ಜುಲೈ 24: ಆಲ್ಕೋಹಾಲ್ ಬಳಕೆಯಿಂದಾಗಿ ಏಳುರೀತಿಯ ಕ್ಯಾನ್ಸರ್‌ ರೋಗಳು ಕಾಣಿಸಿಕೊಳ್ಳುತ್ತವೆ ಎಂದು ವಿಜ್ಞಾನಿಗಳ ಸಂಶೋಧನೆಯಲ್ಲಿ ಬಹಿರಂಗವಾಗಿದೆ ಎಂದು ವರದಿಯಾಗಿದೆ. ಸ್ವಲ್ಪ ಪ್ರಮಾಣದ ಮದ್ಯಪಾನವೂ ಕ್ಯಾನ್ಸರ್ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನ ವರದಿ ತಿಳಿಸುತ್ತಿದೆ.ನ್ಯೂಝಿಲೆಂಡ್‌ನ ಒಟ್ಟಾಗೊ ವಿಶ್ವವಿದ್ಯಾನಿಲಯದ ಜೆನ್ನಿ ಕಾನರ್‌ರ ನೇತೃತ್ವದಲ್ಲಿ ನಡೆದ ಸಂಶೋಧನೆಯಲ್ಲಿ ಆಲ್ಕೊಹಾಲ್ ಬಳಕೆಯು ಕ್ಯಾನ್ಸರ್‌ಗೆ ಪ್ರತ್ಯಕ್ಷ ಕಾರಣವೆಂದು ದೃಢಗೊಂಡಿದೆ ಎಂದು ವರದಿ ವಿವರಿಸಿದೆ.

 ಅಧ್ಯಯನ ವರದಿ ಅಡಿಕ್ಷನ್ ಎಂಬ ವೈಜ್ಞಾನಿಕ ಮಾಸಿಕವೊಂದರಲ್ಲಿ ಪ್ರಕಟವಾಗಿದ್ದು ಕರುಳು, ದೊಡ್ಡ ಕರುಳು, ಸ್ತನ, ಪ್ಯಾಂಕ್ರಿಯಾಸ್,ಪುರುಷ ಗ್ರಂಥಿ, ಮುಂತಾದ ಅವಯವಯಗಳಲ್ಲಿ ಆಲ್ಕೋಹಾಲ್ ಸೇವನೆಯಿಂದ ಕ್ಯಾನ್ಸರ್ ಕಾಣಿಸಿಕೊಳ್ಳಬಹುದಾಗಿದೆ.ಚರ್ಮದ ಕ್ಯಾನ್ಸರ್ ಸಹಿತ ಇತರ ಕ್ಯಾನ್ಸರ್‌ಗಳಿಗೂ ಇದು ಕಾರಣವಾಗಬಹುದುಎಂದು ಸಂಶೋಧಕರು ತಿಳಿಸಿದ್ದಾರೆ.

ವಿಶ್ವ ಕ್ಯಾನ್ಸರ್ ರಿಸರ್ಚ್ ಫಂಡ್, ವಿಶ್ವ ಆರೋಗ್ಯ ಸಂಘಟನೆಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯ ಲೆಕ್ಕಗಳು ಹಾಗೂ ತಾವೇ ಸಂಶೋಧನೆಯ ಮೂಲಕ ನಡೆಸಿದ ಸಮೀಕ್ಷೆಗಳನ್ನು ಆಧಾರವಾಗಿಟ್ಟು ಜೆನ್ನಿ ಕಾನರ್ ನೇತೃತ್ವದ ಸಂಶೋಧಕರ ತಂಡ ಕ್ಯಾನ್ಸರ್ ಸಾಧ್ಯತೆಗಳನ್ನು ಬಹಿರಂಗಪಡಿಸಿದ್ದಾರೆ.

ವರದಿಯ ಆಧಾರದಲ್ಲಿ ಮದ್ಯಪಾನದ ವಿರುದ್ಧ ವಿದ್ಯಾಲಯಗಳಲ್ಲಿ ವ್ಯಾಪಕ ಜಾಗೃತಿ ಮೂಡಿಸಬೇಕೆಂದು ಬ್ರಿಟಿಷ್ ಸಂಶೋಧಕರು ಸಂಬಂಧಿಸಿದ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News