ನೀವು ಸಕ್ಕರೆ ಬಿಟ್ಟ ಕೂಡಲೇ ನಿಮ್ಮ ದೇಹದಲ್ಲಾಗುವ ಬದಲಾವಣೆಗಳೇನು?

Update: 2016-07-30 11:12 GMT

ಸಕ್ಕರೆ ಸೇವನೆಯನ್ನು ಬಿಟ್ಟ ಒಂಭತ್ತು ದಿನಗಳಲ್ಲಿ ಜನರು ಆರೋಗ್ಯವಂತರಾಗುತ್ತಾರೆ ಎಂದು ಅಧ್ಯಯನವೊಂದು ಹೇಳಿದೆ. ಬೊಜ್ಜು ಸಂಬಂಧಿತ ಅಧ್ಯಯನದಲ್ಲಿ 43 ಬೊಜ್ಜು ಇರುವ ಮಕ್ಕಳನ್ನು ಅಧ್ಯಯನ ಮಾಡಲಾಗಿದೆ. ಈ ಅಧ್ಯಯನದಲ್ಲಿ ಸಕ್ಕರೆಯಲ್ಲಿರುವ ಕ್ಯಾಲರಿಯಿಂದ ಮಾತ್ರ ಅದು ಅಪಾಯಕಾರಿಯಾಗಿಲ್ಲ, ಬದಲಾಗಿ ದೇಹದ ಚಯಾಪಚಯ ಕ್ರಿಯೆಯಲ್ಲೂ ಪ್ರಮುಖ ಪಾತ್ರವನ್ನು ಕ್ಕರೆ ವಹಿಸುವುದು ತಿಳಿದುಬಂದಿದೆ.

ಸ್ಯಾನ್ ಫ್ರಾನ್ಸಿಸ್ಕೋ ಮಕ್ಕಳ ಆಸ್ಪತ್ರೆಯ ಮಕ್ಕಳ ತಜ್ಞ ರಾಬರ್ಟ್ ಲ್ಯೂಸ್ಟಿಕ್ ನೇತೃತ್ವದ ಸಂಶೋಧನೆಯಲ್ಲಿ ಮಕ್ಕಳಲ್ಲಿ ಕಒಲೆಸ್ಟರಾಲ್ ಸುಧಾರಿಸುವುದು ಮತ್ತು ಇನ್ಸುಲಿನ್ ಪ್ರಮಾಣ ಇಳಿದಿರುವುದು ಕಂಡುಬಂದಿದೆ. ಸಕ್ಕರೆ ಬಿಟ್ಟ ಕೂಡಲೇ ಎಲ್ಲವೂ ಸರಿಯಾಯಿತು. ಹೀಗಾಗಿ ಮಕ್ಕಳಿಗೆ ಹೆಚ್ಚು ಸಕ್ಕರೆ ಅಂಶವನ್ನು ಸೇವಿಸಲು ಕೊಡುವುದು ಅಪಾಯಕಾರಿ ಎಂದು ಹೆತ್ತವರು ತಿಳಿದುಕೊಳ್ಳಬೇಕು. ಇದರಿಂದ ಬಹಳಷ್ಟು ಆರೋಗ್ಯ ಸಮಸ್ಯೆಗಳು ಬರಬಹುದು ಎಂದು ರಾಬರ್ಟ್ ಹೇಳಿದ್ದಾರೆ.

ಬಹುರಾಷ್ಟ್ರೀಯ ಸಂಸ್ಥೆಗಳು ಹೇಳುವಂತೆ ಬೊಜ್ಜು ಸಕ್ಕರೆಯಿಂದ ಬರುವುದಿಲ್ಲ ಎನ್ನುವುದನ್ನು ರಾಬರ್ಟ್ ಪ್ರಶ್ನಿಸಿದ್ದಾರೆ. ಅಧ್ಯಯನದಲ್ಲಿ ಭಾಗವಹಿಸಿದ ಮಕ್ಕಳ ತೂಕ ಸಮವಾಗಿರುವಂತೆ ನೋಡಿಕೊಳ್ಳಲಾಗಿದೆ. ಈ ಮಕ್ಕಳು ಎಂಟರಿಂದ 18ರ ವಯಸ್ಸಿನವರಾಗಿದ್ದರು. ಸಕ್ಕರೆಯ ಕ್ಯಾಲರಿಗಳು ದೇಹಕ್ಕೆ ಅತಿ ಅಪಾಯಕಾರಿ. ಅವುಗಳು ಲಿವರಲ್ಲಿ ಕೊಬ್ಬು ತುಂಬುತ್ತವೆ. ಇನ್ಸುಲಿನ್ ನಿರೋಧಕ ಹೆಚ್ಚಿಸುತ್ತವೆ ಮತ್ತು ಮಧುಮೇಹ, ಹೃದಯ ಮತ್ತು ಲಿವರ್ ರೋಗಕ್ಕೆ ಕಾರಣವಾಗಲಿದೆ. ಒಂಭತ್ತೇ ದಿನಗಳ ಕಾಲ ಫ್ರಕ್ಟೋಸ್ ತಡೆಹಿಡಿದ ಕಾರಣ ಸಾಕಷ್ಟು ಆರೋಗ್ಯ ಸುಧಾರಣೆ ಕಂಡುಬಂದಿದೆ. ಆಹಾರ ಉದ್ಯಮ ಮತ್ತು ದೇಹದ ಆರೋಗ್ಯದ ನಡುವೆ ಸಂಬಂಧವಿದೆ ಎಂದು ಅಧ್ಯಯನಕಾರರು ಹೇಳಿದ್ದಾರೆ.

ಸುಮಾರು ಶೇ. 5.4ರಷ್ಟು ಬ್ರಿಟನ್ ಪ್ರಜೆಗಳಲ್ಲಿ ಮಧುಮೇಹವಿದೆ. ರೋಗ ಮತ್ತು ಅದರ ಪರಿಣಾಮಗಳು ದೇಶದ ದೊಡ್ಡ ಆರೋಗ್ಯ ಸಮಸ್ಯೆಯಾಗಿವೆ. ಆದರೆ ಸಕ್ಕರೆಯೇ ಚಯಾಪಚಯ ರೋಗಕ್ಕೆ ಪ್ರಮುಖ ಕಾರಣ ಎನ್ನುವುದು ಇನ್ನೂ ಪತ್ತೆಯಾಗಿಲ್ಲ. ಆದರೆ ಅದರಿಂದ ಪರಿಣಾಮವಾಗಿರುವುದು ಪತ್ತೆಯಾಗಿದೆ.

ಕೃಪೆ: timesofindia.indiatimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News