ಬಡೇಸೊಪ್ಪು : ಪ್ರತಿದಿನ ಸೇವಿಸಿದರೆ ಬಡಾ ಫಾಯಿದ !

Update: 2016-07-31 15:48 GMT

ನೀವು ಪ್ರತೀದಿನ ಊಟವಾದ ಮೇಲೆ ಸೋಂಪು ಬೀಜಗಳನ್ನು ಸೇವಿಸುತ್ತೀರಾದರೇ ನಿಮಗೇ ಅರಿವಿಲ್ಲದೆ ದೇಹಕ್ಕೆ ಒಳಿತನ್ನುಂಟು ಮಾಡುತ್ತಿದ್ದೀರಿ. ತಾಮ್ರ, ಕಬ್ಬಿಣ, ಕ್ಯಾಲ್ಸಿಯಂ, ಸತು ಮತ್ತು ಮೆಗ್ನೇಶಿಯಂ ಇದರಲ್ಲಿದೆ. ಇವು ದೇಹಕ್ಕೆ ಅಗತ್ಯವಿರುವ ಅತ್ಯುತ್ತಮ ಲವಣಗಳು. ಸೋಂಪುವಿನ ಉತ್ತಮ ಗುಣಗಳು ಇಲ್ಲಿಗೆ ನಿಲ್ಲುವುದಿಲ್ಲ. ಇಲ್ಲಿ ಸೋಂಪುವಿನ ಕೆಲ ಆರೋಗ್ಯ ಲಾಭಗಳನ್ನು ವಿವರಿಸಿದ್ದೇವೆ.

ಕೆಟ್ಟ ವಾಸನೆ ತಡೆಯುತ್ತದೆ

ಸೋಂಪುವಿನಲ್ಲಿ ವಾಸನೆಯ ತೈಲ ಇರುವ ಕಾರಣ ಕೆಟ್ಟ ವಾಸನೆ ಹೋಗುವಂತೆ ಮಾಡುತ್ತದೆ. ಅಲ್ಲದೆ ಬಾಯಿಯಲ್ಲಿ ಸಲೈವವನ್ನು ಹೆಚ್ಚಾಗಿಸುತ್ತದೆ. ಹೀಗಾಗಿ ಜೀರ್ಣಕ್ರಿಯೆ ಬೇಗನೆ ಆಗುತ್ತದೆ. ಹೆಚ್ಚುವರಿಯಾಗಿ ಅದರಲ್ಲಿ ಉರಿಯೂತ ವಿರೋಧಿ ಮತ್ತು ಬ್ಯಾಕ್ಟೀರಿಯ ವಿರೋಧಿ ತತ್ವಗಳೂ ಇವೆ. ಸೋಂಪನ್ನು ನೀರಿನಲ್ಲಿ ಕುದಿಸಿ ಬಾಯಿ ಮುಕುಳಿಸುವ ಮೂಲಕ ಬಾಯಿಯ ವಾಸನೆ ನಿವಾರಿಸಬಹುದು.

ಜೀರ್ಣಕ್ರಿಯೆಗೆ ಸಹಕಾರಿ

ನೀವು ಹೆಚ್ಚು ತಿಂದಿದ್ದರೆ ಅಥವಾ ಹೊಟ್ಟೆ ಉಬ್ಬರಿಸಿದ್ದನ್ನು ನಿವಾರಿಸುವುದು ಹೇಗೆನ್ನುವ ಯೋಚನೆಯಿದ್ದಲ್ಲಿ ಸೋಂಪು ಬೀಜಗಳು ನೆರವಾಗಲಿವೆ. ಅವುಗಳನ್ನು ಬಾಯಿಯಲ್ಲಿ ಕಚ್ಚಲು ತೊಡಗಿದ ಕೂಡಲೇ ಜೀರ್ಣಕ್ರಿಯೆಯಲ್ಲಿ ಭಾಗವಹಿಸುತ್ತವೆ. ಇವುಗಳು ಜೀರ್ಣವಾಗದ ಆಹಾರ ಸಂಗ್ರಹವಾಗಿ ಗ್ಯಾಸ್ಟ್ರಿಕ್ ಸಮಸ್ಯೆಯಾಗುವುದನ್ನು ತಡೆಯುತ್ತವೆ.

ಋತುಸ್ರಾವದ ನೋವು

ಸೋಂಪು ಬೀಜಗಳು ಪೆಲ್ವಿಕ್ ಮತ್ತು ಯುಟಿರೈನ್‌ಗಳಲ್ಲಿ ರಕ್ತದ ಹರಿವನ್ನು ನಿಯಂತ್ರಿಸುತ್ತದೆ ಎನ್ನುವುದು ಬಹಳಷ್ಟು ಮಂದಿಗೆ ಗೊತ್ತಿಲ್ಲ. ಹೀಗಾಗಿ ಋತುಸ್ರಾವದ ನೋವಿಗೆ ಇದು ಪರಿಹಾರ.

ತೂಕ ಇಳಿಸುವುದು

ಸೋಂಪು ಬೀಜಗಳಲ್ಲಿ ಡೈಯುರಾಟಿಕ್ ತತ್ವಗಳಿರುವ ಕಾರಣ ಜೀರ್ಣಕ್ರಿಯೆಗೆ ನೆರವಾಗುತ್ತವೆ. ಇತ್ತೀಚೆಗಿನ ಅಧ್ಯಯನ ತೋರಿಸಿದ ಪ್ರಕಾರ ಇವುಗಳನ್ನು ಸಿಹಿ ಜೀರಿಗೆ ಮತ್ತು ಕರಿ ಜೀರಿಗೆಗಳ ಜೊತೆಗೆ ಬೆರೆಸಿ ಸೇವಿಸಿದರೆ ಇನ್ಸುಲಿನ್ ಸಂವೇದನೆ ಏರಿಸಲು ಮತ್ತು ತೂಕ ಇಳಿಸಲು ನೆರವಾಗುತ್ತದೆ. ಕರಿದ ಸೋಂಪು ಬೀಜಗಳನ್ನು ಬಿಸಿನೀರಿಗೆ ಬೆರೆಸಿ ಖಾಲಿ ಹೊಟ್ಟೆಗೆ ಸೇವಿಸಬಹುದು.

ಮೊಡವೆ ತಡೆ

ಇದರಲ್ಲಿರುವ ಆಂಟಿ ಬ್ಯಾಕ್ಟಿರಿಯ ಮತ್ತು ಆಂಟಿ ಆಕ್ಸಿಡಂಟ್ ತತ್ವಗಳಿಂದಾಗಿ ಚರ್ಮಕ್ಕೆ ಹಚ್ಚಿದರೆ ಲಾಭ ಸಿಗುತ್ತದೆ. ಈ ಬೀಜಗಳನ್ನು ಬಳಸಿ ರಸ ತಯಾರಿಸಿ ಮುಪ್ಪಿನ ಗೆರೆಗಳಿಗೆ ಹಚ್ಚಬಹುದು. ಟೋನರ್ ಆಗಿಯೂ ಬಳಸಬಹುದು.


ಸೋಂಪು ಬೀಜಗಳನ್ನು ಬಳಸುವ 5 ವಿಧಗಳು
20 ಗ್ರಾಂಗಳಷ್ಟು ಸೋಂಪನ್ನು 20 ಗ್ರಾಂಗಳಷ್ಟು ಜೀರಿಗೆ ಮತ್ತು 20 ಗ್ರಾಂಗಳಷ್ಟು ಮೆಂತ್ಯದ ಜೊತೆಗೆ ಕರಿಯಿರಿ. ಅದರ ಹುಡಿಯನ್ನು ಗಾಳಿ ಹೋಗದ ಬಾಟಲಿಯಲ್ಲಿಡಿ. ರಾತ್ರಿ ಒಂದು ಚಮಚ ಹುಡಿಯನ್ನು ಬಿಸಿ ನೀರಿಗೆ ಬೆರೆಸಿ ಸೇವಿಸಿದರೆ ಜೀರ್ಣಕ್ರಿಯೆ ಉತ್ತಮವಾಗುತ್ತದೆ.

ಸೋಂಪು ಬೀಜಗಳ ಹುಡಿಯನ್ನು ಬಾಟಲಿಯಲ್ಲಿ ಹಾಕಿಡಿ. ತರಕಾರಿಗಳ ಮೇಲೆ ಹಾಕಿ. ಆಹಾರದ ರುಚಿ ಏರುವ ಜೊತೆಗೆ ಆರೋಗ್ಯಕ್ಕೂ ಉತ್ತಮ. ಸೋಂಪು ಬೀಜಗಳನ್ನು ಸಮಾನ ಗುಣಮಟ್ಟದಲ್ಲಿ ಮೆಂತ್ಯ ಬೆರೆಸಿ ಕರಿದು ಬಾಟಲಿಯಲ್ಲಿಡಿ. ಅದನ್ನು ಬಾಯಿ ವಾಸನೆ ತಡೆಯಲು ಆಗಾಗ ಬಳಸಬಹುದು.
ಸೋಂಪು ಬೀಜಗಳು ಪ್ಯಾನ್ ಕೇಕ್ ಮತ್ತು ಮಾಲ್ಪುರಿಗಳ ರುಚಿ ಏರಿಸುತ್ತದೆ. ಹಿಟ್ಟಿಗೆ ಸ್ವಲ್ಪ ಇದನ್ನು ಸುರಿದರೆ ಸಾಕು.
ಕೃಪೆ: timesofindia.indiatimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News