ಮಕ್ಕಳಿಗೆ ಕಾಡುವ ಶ್ವಾಸಕೋಶ ಸಮಸ್ಯೆಗೆ ಕಾರಣ
ಮಕ್ಕಳಲ್ಲಿ ಬೆಳವಣಿಗೆಯ ತೊಂದರೆಗಳು ಕಂಡುಬರುವುದು ತೀರಾ ಸಾಮಾನ್ಯ. ಆದರೆ ಅವು ಬೆಳಕಿಗೆ ಬಾರದೆ ಹೋಗುವುದೇ ಹೆಚ್ಚು. ಹೌದು, ಮಕ್ಕಳು ಅತಿ ಸೂಕ್ಷ್ಮ ದೇಹವನ್ನು ಹೊಂದಿರುವುದರಿಂದ, ಕೆಲವೊಮ್ಮ ಸಣ್ಣ ಪುಟ್ಟ ಕಾಯಿಲೆಗಳೇ ಅವರಿಗೆ ಮಾರಕವಾಗಿ ಬಿಡುತ್ತದೆ. ಅವರ ಶ್ವಾಸಕೋಶಗಳನ್ನು ಈ ವಿಚಾರದಲ್ಲಿ ಪರಿಗಣನೆಗೆ ತೆಗೆದುಕೊಂಡರೆ, ಅವುಗಳು ಇನ್ನೂ ಸೂಕ್ಷ್ಮವಾದ ಅಂಗಗಳಾಗಿರುತ್ತವೆ. ಇವುಗಳನ್ನು ಜಾಗರೂಕತೆಯಿಂದ ಕಾಪಾಡುವಲ್ಲಿ ಪೋಷಕರ ಪಾತ್ರವು ಸಹ ಮುಖ್ಯವಾಗಿರುತ್ತದೆ. ಏಕೆಂದರೆ ಶ್ವಾಸಕೋಶಕ್ಕೆ ಹಾನಿಯುಂಟು ಮಾಡುವ ಅಂಶಗಳು ಈ ಕೆಳಕಂಡ ಅಂಶಗಳನ್ನು ಒಳಗೊಂಡಿರುತ್ತವೆ. ಒಂದು ವೇಳೆ ಮಗು ಹೊಟ್ಟೆಯಲ್ಲಿರುವಾಗ ತಾಯಿ ಧೂಮಪಾನ ಮಾಡುತ್ತಿದ್ದಲ್ಲಿ, ಮಗುವಿಗೆ ಶ್ವಾಸಕೋಶಗಳ ಸೋಂಕು ಇದ್ದಲ್ಲಿ ಮತ್ತು ಜನನದ ಸಂದರ್ಭದಲ್ಲಿ ಹವಾಮಾನದ ಏರು ಪೇರುಗಳು ಇದ್ದಲ್ಲಿ, ಮಗುವಿನ ಶ್ವಾಸಕೋಶಕ್ಕೆ ಇದರಿಂದ ಹಾನಿಯುಂಟಾಗುತ್ತದೆ ಎಂದು ಒಂದು ಹೊಸ ಅಧ್ಯಯನವೊಂದು ತಿಳಿಸಿದೆ. ಇದಲ್ಲದೆ ಮಗುವು ಚಿಕ್ಕ ವಯಸ್ಸಿನಲ್ಲಿ ಯಾವುದಾದರು ಶ್ವಾಸಕೋಶಗಳ ಸೋಂಕಿನಿಂದ ಭಾದೆ ಪಟ್ಟಲ್ಲಿ, ಅದರಿಂದ ಸಹ ಮಗು ಬಳಲುತ್ತದೆ ಎಂದು ಸಾಬೀತು ಮಾಡಿದೆ. ಮಗುವಿನ ಜನನದ ಸಂದರ್ಭದಲ್ಲಿ ಇರುವ ಹವಾಮಾನದ ಪರಿಣಾಮವು ಸಹ ಮಗುವಿನ ಶ್ವಾಸಕೋಶದ ಮೇಲೆ ಪ್ರಭಾವ ಬೀರುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಜನಿಸುವ ಮಕ್ಕಳಿಗೆ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಶ್ವಾಸಕೋಶದ ಸಮಸ್ಯೆಗಳು ಸಾಮಾನ್ಯವಾಗಿ ವಯಸ್ಸಾದಂತೆ ಕಡಿಮೆಯಾಗುತ್ತದೆ ಮತ್ತು ಈ ಮೇಲಿನ ಅಂಶಗಳು ನಿಮಗೆ ಅನ್ವಯವಾಗದೆ ಇದ್ದಲ್ಲಿ, ವಯಸ್ಸಿನ ಪ್ರಕ್ರಿಯೆಯು ನಿಮ್ಮ ಮಗುವಿನ ಶ್ವಾಸಕೋಶದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಅಧ್ಯಯನಕಾರರು ಇಂತಹ ವ್ಯಕ್ತಿಗಳಿಗೆ ಧೂಮಪಾನ ಮಾಡದೆ ಇರುವಂತೆ ಸಲಹೆ ನೀಡುತ್ತಾರೆ. ಜೊತೆಗೆ ಮಕ್ಕಳು ಯಾವ ವಾತಾವರಣದಲ್ಲಿ ಬೆಳೆಯುತ್ತಾರೆ ಎಂಬುದು ಸಹ ಇಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಏಕೆಂದರೆ ಈ ವಾತಾವರಣವು ಮಗುವಿನ ದೈಹಿಕ ಕ್ರಿಯೆಯನ್ನು ಮತ್ತು ನ್ಯೂನತೆಗಳನ್ನು ಸರಿಪಡಿಸುತ್ತದೆ ಎಂದು ತಿಳಿದುಬಂದಿದೆ. ಹಾಗಾಗಿ ಈ ಅಧ್ಯಯನವು ಮಗುವಿನ ತಾಯಿಗೆ ಮತ್ತು ಗರ್ಭಿಣಿಯರಿಗೆ ಧೂಮಪಾನ ಮಾಡಬೇಡಿ ಎಂದು ತಿಳಿಸುತ್ತದೆ.