ಡಾರ್ಕ್ ಸರ್ಕಲ್ಸ್ ಕಾರಣಗಳೇನು? ಪರಿಹಾರಗಳೇನು?

Update: 2016-08-05 14:52 GMT

ಡಾರ್ಕ್ ಸರ್ಕಲ್ಸ್ ಅಥವಾ ಕಣ್ಣಿನ ಸುತ್ತ ಬರುವ ಕಪ್ಪು ಛಾಯೆಗಳು ಎಲ್ಲರಿಗೂ ಸಾಮಾನ್ಯ ಸಮಸ್ಯೆಯಾಗಿರುತ್ತದೆ. ಕನ್ಸೀಲರ್, ಐಕ್ರೀಮ್, ಇಂಜೆಕ್ಟೇಬಲ್ ಫಿಲ್ಲರ್ ಗಳನ್ನು ಬಳಸಿದರೂ ಏನೂ ಪ್ರಯೋಜನವಾಗುವುದಿಲ್ಲ. ಇದರ ಹೊರತಾಗಿ ಈ ಕಣ್ಣಿನ ಸುತ್ತಲ ಕಲೆಗಳು ನಿದ್ದೆಯ ಕೊರತೆಯಿಂದಲೇ ಬರುತ್ತವೆ. ಯುಸಿಎಲ್‌ಎ ಚರ್ಮ ತಜ್ಞೆ ಹೇಲೇ ಗೋಲ್ಡ್ ಬಾಷ್ ಪ್ರಕಾರ ವಯಸ್ಸಾಗುತ್ತಿದ್ದಂತೆ ಕಣ್ಣಿನ ಸುತ್ತ ಇರುವ ಕೊಬ್ಬು ಕಳೆದುಕೊಳ್ಳುವುದೂ ಒಂದು ಕಾರಣ. ನಮ್ಮ ಕಣ್ಣಿನ ಸುತ್ತ ಇರುವ ಚರ್ಮ ಬಹಳ ಸೂಕ್ಷ್ಮವಾಗಿರುತ್ತದೆ. ಬಹುತೇಕ ಪಾರದರ್ಶಕವಾಗಿರುತ್ತದೆ. ಹೀಗಾಗಿ ಅದರ ಅಡಿಯ ರಕ್ತನಾಳಗಳು ಚೆನ್ನಾಗಿ ಕಾಣಲಾರಂಭಿಸುವಾಗ ಚರ್ಮ ಹೆಚ್ಚು ಕಪ್ಪಾಗಿ ಕಾಣುತ್ತದೆ. ಈ ಡಾರ್ಕ್ ಸರ್ಕಲ್ ಗಳಿಗೆ ಬಣ್ಣವೂ ಇದೆ. ಈ ಬಣ್ಣವನ್ನೂ ರಕ್ತನಾಳಗಳೇ ಕೊಟ್ಟಿವೆ. ಅವು ಕಂದು ಬಣ್ಣಕ್ಕೆ ತಿರುಗಿದಲ್ಲಿ ಚರ್ಮದಲ್ಲಿ ಹೆಚ್ಚು ಮೆಲನಿನ್ ಇರುತ್ತದೆ. ಕೆಲವೊಮ್ಮೆ ಅತಿನೇರಳೆ ಕಿರಣಗಳಿಗೆ ಒಡ್ಡಿಕೊಳ್ಳುವುದು, ಒತ್ತಡ, ಆಲ್ಕೋಹಾಲ್, ಧೂಮಪಾನವೂ ಡಾರ್ಕ್ ಸರ್ಕಲ್ ಗೆ ಕಾರಣವಾಗುತ್ತವೆ. ಸಂಶೋಧಕಿ ಮತ್ತು ಚರ್ಮ ತಜ್ಞೆ ರಶ್ಮಿ ಸರ್ಕಾರ್ ಡಾರ್ಕ್ ಸರ್ಕಲ್ ಕಳೆಯಲು ಕೆಲವು ಸಲಹೆ ನೀಡಿದ್ದಾರೆ.

ಆದರೆ ಐ ಕ್ರೀಂಗಳಿಂದ ಈ ಸಮಸ್ಯೆ ಪರಿಹಾರವಾಗದು. ಕೆಲವು ಸರಳ ಹಾದಿಗಳನ್ನು ಹುಡುಕಿಕೊಳ್ಳಿ.

► ಧೂಮಪಾನ ಬಿಡಿ

►ಸಾಕಷ್ಟು ನಿದ್ದೆ ಮಾಡಿ

►ಬ್ಲಾಕ್ ಟೀ ಬ್ಯಾಗ್ ಅಥವಾ ಸೌತೆಕಾಯಿ ಹೋಳುಗಳನ್ನು ಪ್ರತೀ ಬೆಳಗ್ಗೆ 10 ನಿಮಿಷ ಇಡುವುದು

►ಕಣ್ಣಿನ ಆ ಭಾಗವನ್ನು ಉಜ್ಜದೆ ಇರುವುದು.

►ಕಠಿಣ ರಾಸಾಯನಿಕಗಳಿರುವ ಕ್ರೀಮ್ ಗಳನ್ನು ಬಳಸಬೇಡಿ.

►ಬ್ಲಾಕ್ ಆದ ಮೂಗಿಗೆ ನಾಸಲ್ ಕಂಜೆಶನ್ ಜೋಡಿಸುವುದರಿಂದಲೂ ಡಾರ್ಕ್ ಸರ್ಕಲ್ ಬರಬಹುದು.

►ಆರೋಗ್ಯಕರ, ಸಮತೋಲಿತ ಆಹಾರ, ಹಣ್ಣುಗಳು ಮತ್ತು ತರಕಾರಿ ತಿನ್ನಬೇಕು.

►ಸಾಕಷ್ಟು ನೀರು ಕುಡಿಯಿರಿ.

ಕೃಪೆ: http://zeenews.india.com/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News