ತೆಳ್ಳಗಿರುವ ಮಕ್ಕಳ ತೂಕ ಹೆಚ್ಚಾಗಲು ಸಲಹೆಗಳು

Update: 2016-08-08 06:58 GMT

ತಮ್ಮ ಮಕ್ಕಳು ಸರಿಯಾಗಿ ತಿನ್ನುತ್ತಿಲ್ಲ ಆದ್ದರಿಂದ ಸಣ್ಣಗಿದ್ದಾರೆ ಅನ್ನುವುದು ತುಂಬಾ ತಾಯಿಂದಿರ ಚಿಂತೆಯಾಗಿದೆ. ಮಕ್ಕಳು ವಯಸ್ಸಿಗೆ ತಕ್ಕ ಕನಿಷ್ಠ ತೂಕ ವನ್ನು ಹೊಂದಿಲ್ಲವೆಂದರೆ ಅನಾರೋಗ್ಯ ಸಮಸ್ಯೆ ಕಾಣುವುದು. ಮಕ್ಕಳ ದೇಹ ತೂಕವನ್ನು ಹೆಚ್ಚಿಸಲು ಈ ಕೆಳಗಿನ ಸಲಹೆಗಳನ್ನು ಪಾಲಿಸಬಹುದು. 

1. ವೈದ್ಯರನ್ನು ಸಂಪರ್ಕಿಸಬೇಕು: ಕೆಲವು ಮಕ್ಕಳಿಗೆ ಹಾಲು ಕುಡಿದರೆ ಅಲರ್ಜಿ ಉಂಟಾಗುತ್ತದೆ. ಅಂತಹ ಮಕ್ಕಳಿಗೆ ಪ್ರೊಟೀನ್ ಮತ್ತು ಕ್ಯಾಲ್ಸಿಯಂ ಪೂರೈಕೆಯಾಗುವುದಿಲ್ಲ. ಆದ್ದರಿಂದ ಮಕ್ಕಳ ದೇಹ ತೂಕ ಕಡಿಮೆಯಾಗುವುದು. ಆದ್ದರಿಂದ ಮಕ್ಕಳನ್ನು ವೈದ್ಯರಿಗೆ ತೋರಿಸಿದರೆ ಅವರು ಹಾಲಿಗೆ ಪರ್ಯಾಯವಾಗಿ ಸೇವಿಸಲು ವಿಟಮಿನ್ ಪುಡಿಗಳನ್ನು ನೀಡುವರು. ವಿಟಮಿನ್ ಪುಡಿಗಳು ದೇಹ ತೂಕವನ್ನು ಹೆಚ್ಚಿಸಲು ಸಹಕಾರಿಯಾಗಿದೆ.

2.ಸೊಪ್ಪು, ತರಕಾರಿಗಳನ್ನು ಅಧಿಕವಾಗಿ ಕೊಡಬೇಕು: ಹಸಿ ಸೊಪ್ಪಿನಲ್ಲಿ ಆರೋಗ್ಯಕರ ಪ್ರೊಟೀನ್ ಗಳು ಮತ್ತು ವಿಟಮಿನ್‌ಗಳಿರುತ್ತವೆ. ಅಲ್ಲದೆ ವಿಟಮಿನ್ ಇರುವ ತರಕಾರಿಗಳನ್ನು ಆಹಾರಕ್ರಮದಲ್ಲಿ ಸೇರಿಸಿದರೆ ಮಕ್ಕಳ ತೂಕ ಹೆಚ್ಚಾಗುವುದು.

3. ಸತುವಿನಂಶ ಅಧಿಕವಿರುವ ಆಹಾರ: ಕೆಲವು ಮಕ್ಕಳಿಗೆ ಹೊಟ್ಟೆ ಹಸಿವು ಕಡಿಮೆ ಇರುತ್ತದೆ,. ಆದ್ದರಿಂದ ಸರಿಯಾಗಿ ತಿನ್ನದೆ ದೇಹದ ತೂಕ ಕಡಿಮೆಯಾಗುತ್ತದೆ. ಹೀಗೆ ಹೊಟ್ಟೆ ಹಸಿವು ಕಡಿಮೆಯಾಗಲು ಸತುವಿನಂಶ ಕಡಿಮೆಯಾಗಿರುವುದು ಕಾರಣವಾಗಿದೆ. ಆದ್ದರಿಂದ ಸತುವಿನಂಶ ಅಧಿಕವಿರುವ ಆಹಾರಗಳನ್ನು ಕೊಡಬೇಕು. ಬಟಾಣಿ, ಬೀನ್ಸ್, ಕಲ್ಲಂಗಡಿ, ಹಾಲನ್ನು ಕೊಡುವುದು ಆರೋಗ್ಯಕ್ಕೆ ಒಳ್ಳೆಯದು.

4. ಹಣ್ಣುಗಳು ಮತ್ತು ನಟ್ಸ್: ಮಕ್ಕಳ ಆಹಾರಕ್ರಮದಲ್ಲಿ ಹಣ್ಣುಗಳನ್ನು ತಪ್ಪದೆ ಸೇರಿಸಬೇಕು. ಬಾದಾಮಿ, ಗೋಡಂಬಿ, ಒಣದ್ರಾಕ್ಷಿ ಮುಂತಾದವುಗಳಿಂದ ಮಕ್ಕಳಿಗೆ ಹೆಚ್ಚು ಶಕ್ತಿ ಬರುತ್ತದೆ. ಕೃತಕ ಸಿಹಿ ಇರುವ ಆಹಾರ, ಕುರುಕಲು ತಿಂಡಿಗಳನ್ನು ಕಡಿಮೆ ಕೊಡುವುದು ಒಳ್ಳೆಯದು.

-ಮಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News