ಕೆಚಪ್ ಸೇವಿಸುವುದನ್ನು ಇವತ್ತೇ ನಿಲ್ಲಿಸಿ. ಏಕೆಂದರೆ?

Update: 2016-08-12 04:06 GMT

ಇತರ ಕಾಂಡಿಮೆಂಟ್ ಗಳಂತೆ ಕೆಚಪ್ ಅನ್ನು ಜನರು ತಮ್ಮ ಆಹಾರದ ಜೊತೆಗೆ ನಿತ್ಯವೂ ಸೇವಿಸುತ್ತಾರೆ. ಸಾಮಾನ್ಯವಾಗಿ ಒಂದು ಚಮಚಕ್ಕೂ ಹೆಚ್ಚು ಕೆಚಪ್ ಸೇವಿಸುತ್ತಾರೆ. ಇಷ್ಟು ಅಲ್ಪ ಪ್ರಮಾಣದಲ್ಲಿ ಸೇವಿಸುವ ಕಾರಣ ಇದು ಹಾನಿಕರವಲ್ಲ ಎಂದೇ ಪರಿಗಣಿಸಲಾಗಿದೆ. ಆದರೆ ಆ ವಿಶ್ವಾಸ ತಪ್ಪು.

ಕೆಚಪ್ ಅಂತಹ ಕಾಂಡಿಮೆಂಟ್ ಗಳು ಬಹಳಷ್ಟು ಆಹಾರದ ರುಚಿಯನ್ನು ಉತ್ತಮಪಡಿಸಲಿದೆ. ಫ್ರೆಂಚ್ ಫ್ರೈಗಳು, ಬರ್ಗರ್, ಹಾಡ್ ಡಾಗ್ಸ್ ಮೊದಲಾದವು ಜೊತೆಗೆ ಕೆಚಪ್ ಇರಲೇಬೇಕು. ನೀವು ಆರೋಗ್ಯಕರ ಆಹಾರವನ್ನೇ ಸೇವಿಸಿದ್ದರೂ ಕೆಚಪ್ ಅದನ್ನು ಚಯಾಪಚಯವಾಗದಂತೆ ಮಾಡುತ್ತದೆ. ಹಾಗೆ ಮಾಡಲು ಒಂದೇ ಚಮಚ ಕೆಚಪ್ ಸಾಕು.

ಕೆಚಪ್ ಇಷ್ಟೊಂದು ಕೆಟ್ಟದೆನಿಸಲು ಕಾರಣವೇನು?

ಅದರ ಲೇಬಲಿನಲ್ಲಿರುವ ವಸ್ತುಗಳನ್ನು ಒಮ್ಮೆ ಗಮನಿಸಿ.

►ಟೊಮ್ಯಾಟೋ ಅಂಶ

►ವಿನೆಗರ್

►ಅಧಿಕ ಫ್ರಕ್ಟೋಸ್ ಕಾರ್ನ್ ಸಿರಪ್

►ಕಾರ್ನ್ ಸಿರಪ್

►ಆನಿಯನ್ ಪೌಡರ್

►ಮಸಾಲೆ

►ಉಪ್ಪು

ವಿನೆಗರ್ ಮತ್ತು ಈರುಳ್ಳಿ ಪೌಡರ್ ಹೊರತಾಗಿ ಉಳಿದವು ದೇಹಕ್ಕೆ ಉತ್ತಮವಲ್ಲ.

ಅಧಿಕ ಟೊಮ್ಯಾಟೋ ಅಂಶ: ಟೊಮ್ಯಾಟೋ ಆರೋಗ್ಯಕ್ಕೆ ಉತ್ತಮವಾಗಿದ್ದರೂ, ಅಧಿಕ ಬಿಸಿ ಮಾಡಿದಾಗ ಮತ್ತು ಪದೇ ಪದೇ ಸಿಪ್ಪೆ ಮತ್ತು ಬೀಜವಿಲ್ಲದೆ ಬೇಯಿಸಿದಾಗ ಅದರ ವಿಟಮಿನ್ ಮತ್ತು ಲವಣಗಳು ಹೋಗಿರುತ್ತವೆ.

ಅಧಿಕ ಫ್ರಕ್ಟೋಸ್ ಕಾರ್ನ್ ಸಿರಪ್: ಇದೇ ಸಕ್ಕರೆ. ಫ್ರಕ್ಟೋಸ್ ದೇಹಕ್ಕೆ ಕೆಟ್ಟ ಪರಿಣಾಮ ಬೀರುವ ಸಕ್ಕರೆ. ಮುಖ್ಯವಾಗಿ ಕೊಬ್ಬು ಮತ್ತು ಮಧುಮೇಹಕ್ಕೆ ಕಾರಣವಾಗುತ್ತದೆ.

ಕಾರ್ನ್ ಸಿರಪ್: ಇದೂ ಹೈಫ್ರಕ್ಟೋಸ್ ಅಂಶವೇ.

ಉಪ್ಪು: ಅಧಿಕ ಉಪ್ಪು ಆರೋಗ್ಯ ಸಮಸ್ಯೆ, ರಕ್ತದೊತ್ತಡಕ್ಕೆ ಕಾರಣವಾಗಲಿದೆ.

ಮಸಾಲೆಗಳು: ಇವು ಕೆಟ್ಟದೇನೂ ಅಲ್ಲ. ಆದರೆ ಬಹುತೇಕ ಬ್ರಾಂಡ್ ಗಳು ಯಾವ ಮಸಾಲೆ ಬಳಸಿದ್ದೆಂದು ಹೇಳುವುದೇ ಇಲ್ಲ.

ಆದರೆ ನಕಾರಾತ್ಮಕ ಅಂಶಗಳು ಇಲ್ಲಿಗೇ ನಿಲ್ಲುವುದಿಲ್ಲ. ಜೋಳದ ಶೇ. 70- 85ರಷ್ಟು ಕುಲಾಂತರಿ ತಳಿಗಳಾಗಿರುತ್ತವೆ. ಕೀಟನಾಶಕ ಮತ್ತು ಇತರ ರಾಸಾಯನಿಕ ಬಳಸಿ ಬೆಳೆಯಲಾಗಿರುತ್ತದೆ. ಕೆಚಪ್ ಅಲ್ಲಿ ಐದು ಅಂಶಗಳು ಜೋಳದಿಂದಲೇ ಮಾಡಿದೆ. ಹಾಗೆಂದು ಅತಿಯಾಗಿ ಸೇವಿಸದೆ ಮಿತವಾಗಿ ಬಳಸಿದರೆ ಕೆಚಪ್ ಪೂರ್ಣವಾಗಿ ಅನಾರೋಗ್ಯಕರವೇನೂ ಅಲ್ಲ.

ಕೃಪೆ: http://www.stethnews.com/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News