7 ಗಂಟೆಯ ನಂತರ ಡಿನ್ನರ್ ಬೇಡ. ಏಕೆಂದರೆ?

Update: 2016-09-03 18:54 GMT

ರಾತ್ರಿ ತಡವಾಗಿ ತಿನ್ನುವುದು ವ್ಯಕ್ತಿಯ ಚಯಾಪಚಯ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಆದರೆ ಅಧ್ಯಯನಗಳು ಹೇಳಿರುವ ಪ್ರಕಾರ ಅದು ರಕ್ತದೊತ್ತಡದ ಮೇಲೂ ಪರಿಣಾಮ ಬೀರಿ ಹೃದಯಾಘಾತದ ಅಪಾಯ ತರುತ್ತದೆ. ಸುಮಾರು 700 ಮಂದಿಯನ್ನು ಪರಿಶೀಲಿಸಿರುವ ಅಧ್ಯಯನವು ರಾತ್ರಿ ಭೋಜನದ ಸಮಯವನ್ನು 7 ಗಂಟೆಗೆ ಇಟ್ಟಿದ್ದು, ತಡರಾತ್ರಿಯ ಊಟದಿಂದಾಗುವ ಹಲವಾರು ಸಮಸ್ಯೆಗಳ ಬಗ್ಗೆ ಎಚ್ಚರಿಸಿದೆ.

ಬೇಗನೇ ಏಕೆ ತಿನ್ನಬೇಕು?

► ತಡವಾಗಿ ತಿನ್ನುವುದು ಜನರಿಗೆ ಹೃದಯಾಘಾತದ, ಆಘಾತ ಸಮಸ್ಯೆ ತರಬಹುದು.

► ವಯಸ್ಕರು ಸಂಜೆ 7 ಗಂಟೆಯ ನಂತರ ಏನೂ ತಿನ್ನಬಾರದು.

► ಬೇಗನೇ ರಾತ್ರಿಯೂಟ ಮಾಡುವುದರಿಂದ ದೇಹಕ್ಕೆ ಅದನ್ನು ಜೀರ್ಣಿಸಿಕೊಂಡು ವಿಶ್ರಾಂತಿ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

► ನಿದ್ದೆಗೆ ಜಾರುವ 2 ಗಂಟೆಗಳ ಒಳಗೆ ರಾತ್ರಿಯೂಟ ಮಾಡುವುದರಿಂದ ದೇಹವು ಅತೀ ಎಚ್ಚರದ ಸ್ಥಿತಿಯಲ್ಲಿರುತ್ತದೆ ಮತ್ತು ರಕ್ತದೊತ್ತಡವು ರಾತ್ರಿಯಿಡೀ ಸರಿಯಾಗಿ ಕೆಳಗಿಳಿಯುವುದಿಲ್ಲ.

► ಆರೋಗ್ಯಕರ ವ್ಯಕ್ತಿಯಲ್ಲಿ ನಿದ್ದೆಗೆ ಜಾರುವಾಗ ರಕ್ತದೊತ್ತಡ ಕನಿಷ್ಠ ಶೇ. 10ರಷ್ಟು ಕೆಳಗಿಳಿಯುತ್ತದೆ.

► ಆಹಾರದಲ್ಲಿ ಉಪ್ಪು ಅಧಿಕವಿರುವುದರಿಂದ ಹೃದಯಕ್ಕೆ ಆಗುವ ಹಾನಿಗಿಂತ ಹೆಚ್ಚು ಹಾನಿ ತಡವಾಗಿ ಊಟ ಮಾಡುವುದರಿಂದ ಆಗಲಿದೆ.

ಅಧ್ಯಯನ ಏನು ಹೇಳುತ್ತದೆ?

► ಟರ್ಕಿಯ ವಿಶ್ವವಿದ್ಯಾಲಯದ ಹೃದಯ ತಜ್ಞರು ಅಧಿಕ ರಕ್ತದೊತ್ತಡವಿರುವ 700 ಸ್ತ್ರೀ-ಪುರುಷರನ್ನು ಅಧ್ಯಯನ ಮಾಡಿದ್ದಾರೆ. ಅವರ ತಿನ್ನುವ ಸಮಯ ಮತ್ತು ಆರೋಗ್ಯದ ಮೇಲೆ ಆಹಾರದ ಪರಿಣಾಮವನ್ನು ಈ ಸಂದರ್ಭ ಪರಿಶೀಲಿಸಿದ್ದಾರೆ.

► ಸಂಜೆ 7 ಗಂಟೆಯ ನಂತರ ಊಟ ಮಾಡುವುದು ರಕ್ತದೊತ್ತಡದ ಮೇಲೆ ಅತಿಯಾದ ಪರಿಣಾಮ ಬೀರುವುದು ಕಂಡುಬಂದಿದೆ.

►ತಡವಾಗಿ ಊಟ ಮಾಡುವವರ ರಕ್ತದೊತ್ತಡ ರಾತ್ರಿ ಸರಿಯಾಗಿ ನಿಯಂತ್ರಣಕ್ಕೆ ಬರುವುದಿಲ್ಲ.

►ನಿದ್ದೆಗೆ ಎರಡು ಗಂಟೆಗಳ ಮುನ್ನ ಆಹಾರ ಸೇವಿಸುವವರಲ್ಲಿ ಶೇ. 25ರಷ್ಟು ಮಂದಿಯಲ್ಲಿ ಸಾಕಷ್ಟು ರಕ್ತದೊತ್ತಡ ಕೆಳಗೆ ಇಳಿದದ್ದು ಕಂಡು ಬರಲಿಲ್ಲ.

► ಸಂಜೆ 7 ಗಂಟೆಗೆ ಮೊದಲು ಊಟ ಮಾಡಿದವರಲ್ಲಿ ಶೇ. 14ರಷ್ಟು ಮಂದಿಯಲ್ಲಿ ರಕ್ತದೊತ್ತಡ ಸಹಜವಾಗಿ ಇಳಿದಿದೆ.

► ಸಂಜೆ 7 ಗಂಟೆಯ ನಂತರ ಊಟ ಮಾಡುವುದರಿಂದ ಒತ್ತಡ ಹಾರ್ಮೋನ್‌ಗಳಾದ ಎಡ್ರಿನಲೈನ್ ಹೆಚ್ಚಾಗಲಿದೆ.

► ಬೆಳಗಿನ ಉಪಾಹಾರವನ್ನು ಸೇವಿಸದ ವ್ಯಕ್ತಿಗಳಲ್ಲೂ ರಕ್ತದೊತ್ತಡ ಕೆಳಗಿಳಿಯದೆ ಇರುವ ಸಮಸ್ಯೆ ಇರಲಿದೆ.

ಹಿಂದಿನ ಅಧ್ಯಯನ ಏನು ಹೇಳುತ್ತದೆ?

ತಜ್ಞರು ಈ ಹಿಂದೆ ರಾತ್ರಿ ಭೋಜನಕ್ಕೆ ಸರಿಯಾದ ಸಮಯವೆಂದು ರಾತ್ರಿ 8 ಗಂಟೆಯನ್ನು ಸೂಚಿಸಿದ್ದರು. ಅದರ ನಂತರ ಆಹಾರ ಸೇವನೆಯಿಂದ ಚಯಾಪಚಯ ಸರಿಯಾಗಿ ಆಗದೆ ಬೊಜ್ಜು ತರಿಸಬಹುದು ಮತ್ತು ಹೃದಯಾಘಾತಕ್ಕೆ ಕಾರಣವಾಗಬಹುದು ಎಂದು ಹೇಳಿದ್ದರು.

ಕೃಪೆ: timesofindia.indiatimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News