ಹೊಟ್ಟೆಯ ಕೊಬ್ಬು ಕರಗಿಸಲು ನಿಮ್ಮ ಅಡುಗೆ ಮನೆಯಲ್ಲೇ ಇದೆ ಪರಿಹಾರ

Update: 2016-09-29 04:55 GMT

ನಮ್ಮಲ್ಲಿ ಬಹುತೇಕರು ಹೊಟ್ಟೆಯ ಸುತ್ತಲಿರುವ ಹೆಚ್ಚುವರಿ ಕೊಬ್ಬನ್ನು ಕಳೆದುಕೊಳ್ಳಲು ನಿರಂತರ ಪ್ರಯತ್ನಿಸುತ್ತೇವೆ. ಗಂಟೆಗಟ್ಟಲೆ ಮಾಡಿದ ವ್ಯಾಯಾಮವು ಫ್ಲಾಟ್ ಹೊಟ್ಟೆಗಾಗಿಯೇ ಇರುತ್ತದೆ. ಆದರೆ ನಮ್ಮಲ್ಲಿ ಎಷ್ಟು ಮಂದಿ ಯಶಸ್ವಿಯಾಗುತ್ತೇವೆ? ಕುತೂಹಲಕರ ಅಂಶವೆಂದರೆ ಹಲವಾರು ಪೌಷ್ಟಿಕ ತಜ್ಞರ ಪ್ರಕಾರ ಈ ಎಲ್ಲಾ ಪ್ರಯತ್ನಗಳಿಗೆ ಉತ್ತರ ನಮ್ಮದೇ ಅಡುಗೆಮನೆಯಲ್ಲಿರುತ್ತದೆ. ಪ್ರತೀದಿನ ಸೇವಿಸುವ ಆಹಾರದಲ್ಲಿಯೇ ಹೆಚ್ಚುವರಿ ಕಾರ್ಬೋಹೈಡ್ರೇಟ್‌ಗಳನ್ನು ನಿವಾರಿಸುವ ಹಾದಿಯಿದೆ. ಇಲ್ಲಿ ಅಂತಹ ಹತ್ತು ಆಹಾರವಸ್ತುಗಳ ವಿವರವಿದೆ.

ಟೊಮ್ಯಾಟೋಗಳು

ಟೊಮ್ಯಾಟೋವನ್ನು ಹೇಗೆ ಉಚ್ಚರಿಸುತ್ತೀರಿ ಎನ್ನುವುದು ಮುಖ್ಯವಾಗುವುದಿಲ್ಲ. ಆಹಾರದಲ್ಲಿ ಅದು ಇರುವುದು ಮುಖ್ಯ. ಟೊಮ್ಯಾಟೋಗಳಲ್ಲಿ 9-oxo-octadecadienoic ಅಥವಾ 9-oxo-ODA ಎನ್ನುವ ಸಂಯುಕ್ತಗಳಿದ್ದು, ಅವು ದೇಹದಲ್ಲಿ ಲಿಪಿಡ್‌ಗಳ ಪರಿಚಲನೆಗೆ ನೆರವಾಗಿ ಹೊಟ್ಟೆಯ ಕೊಬ್ಬನ್ನು ಇಳಿಸುತ್ತವೆ. ಟೊಮ್ಯಾಟೊ ಹೊಟ್ಟೆಯಲ್ಲಿ ಸೇರಿಕೊಳ್ಳುವ ಕೊಬ್ಬಿನ ಸಂಗ್ರಹವಾದ ಡಿಸ್ಲಿಪಿಡೆಮಿಯನ್ನು ನಿಯಂತ್ರಿಸಲು ನೆರವಾಗುತ್ತದೆ.

ಆ್ಯಪಲ್ ಸೈಡರ್ ವಿನೆಗರ್

ಆಹಾರಕ್ಕೆ ಸ್ವಲ್ಪ ರುಚಿಕೊಡಲು ಇದು ಅತ್ಯುತ್ತಮ ಅಂಶ. ಆ್ಯಪಲ್ ಸೈಡರ್ ವಿನೆಗರ್ ನಿಮ್ಮ ಹೊಟ್ಟೆಯಲ್ಲಿನ ಹೆಚ್ಚುವರಿ ಕೊಬ್ಬನ್ನು ಹೊರ ಹಾಕುತ್ತದೆ. ಭೋಜನಕ್ಕೆ ಮೊದಲು ಇದನ್ನು ಸೇವಿಸುವುದು ಉತ್ತಮ. ಸೇಬಿನಲ್ಲಿ ಪೆಕ್ಟಿನ್ ಅಂಶ ಹೆಚ್ಚಾಗಿರುತ್ತದೆ. ಅದರಿಂದ ಪೂರ್ಣ ತೃಪ್ತಿಯಾಗಿ ಹೆಚ್ಚುವರಿ ಆಹಾರ ಸೇವನೆ ಕಡಿಮೆಯಾಗುತ್ತದೆ.

ಪುದಿನ

ಪುದಿನ ದುಪ್ಪಟ್ಟು ಪರಿಣಾಮ ಕೊಡುತ್ತದೆ. ಇದು ಹೆಚ್ಚುವರಿ ಕೊಬ್ಬನ್ನು ನಿಮ್ಮ ಪಿತ್ತಕೋಶದಿಂದ ನಿವಾರಿಸುತ್ತದೆ. ಇದು ದೇಹದಲ್ಲಿ ಕೊಬ್ಬು ಉತ್ಪನ್ನವಾಗುವುದು ಮತ್ತು ಸಂಗ್ರಹವಾಗುವುದನ್ನು ತಡೆಯುತ್ತದೆ. ಇದು ಉತ್ತಮ ಆ್ಯಂಟಿ ಆ್ಯಕ್ಸಿಡಂಟ್ ಆಗಿರುವ ಕಾರಣ ಚಯಾಪಚಯ ಕ್ರಿಯೆಗೆ ನೆರವಾಗಿ ಕೊಬ್ಬು ಕಳೆದುಕೊಳ್ಳಲು ನೆರವಾಗುತ್ತದೆ.

ಅಲೋವೇರಾ ಜ್ಯೂಸ್

ಅಲೋವೇರಾದ ಜ್ಯೂಸ್ ಹೊಟ್ಟೆಯ ಕೊಬ್ಬು ಕರಗಿಸಲು ಅತೀ ಪರಿಣಾಮಕಾರಿ. ಇದು ಸ್ವಲ್ಪ ದ್ರವರೂಪದಲ್ಲಿರುವ ಕಾರಣ ಹೆಚ್ಚಾಗಿ ತೂಕ ಕಳೆದುಕೊಳ್ಳಲು ನೆರವಾಗುತ್ತದೆ. ಜ್ಯೂಸ್‌ನ ಫೈಬರ್ ಅಂಶ ಹೆಚ್ಚಿರುವ ಪ್ರಕಾರವನ್ನು ಬಳಸಿ.

ಲಿಂಬೆ ರಸ

ಲಿಂಬೆಗಳು ಭಾರತೀಯ ಅಡುಗೆಯ ಪ್ರಮುಖ ಭಾಗ. ಇವುಗಳು ಬಹುತೇಕ ಅಡುಗೆಮನೆಯಲ್ಲಿ ತಕ್ಷಣ ಲಭ್ಯವಿದೆ. ಈ ರಹಸ್ಯ ವಸ್ತು ಹೊಟ್ಟೆಯ ಕೊಬ್ಬನ್ನು ಇಳಿಸುವಲ್ಲಿ ಉತ್ತಮ ಕೆಲಸ ಮಾಡುತ್ತದೆ. ದಿನವನ್ನು ಲಿಂಬೆ ರಸದ ಜೊತೆಗೆ ಸ್ವಲ್ಪ ಜೇನು ಸೇರಿಸಿ ಆರಂಭಿಸಿದರೆ ಉತ್ತಮ.

ಕಲ್ಲಂಗಡಿಹಣ್ಣು

ಇದರಲ್ಲಿ ಶೇ. 91ರಷ್ಟು ನೀರಿನಂಶವಿದೆ. ಕಲ್ಲಂಗಡಿ ಹಣ್ಣನ್ನು ಭೋಜನಕ್ಕೆ ಮೊದಲು ಸೇವಿಸಿದರೆ ಹೊಟ್ಟೆ ತುಂಬುತ್ತದೆ. ಹೀಗಾಗಿ ಹೆಚ್ಚು ಕ್ಯಾಲರಿ ಹೊಟ್ಟೆಗೆ ಸೇರಿಸುವ ಅಗತ್ಯವಿಲ್ಲ. ಇದು ನೀರಿನ ಕೊರತೆಯನ್ನೂ ನೀಗಿಸುತ್ತದೆ.

ಸೌತೆಕಾಯಿ

ಸಲಾಡ್‌ಗಳಿಷ್ಟವಾದಲ್ಲಿ ಸೌತೆಕಾಯಿ ಸೇವಿಸಿ. ಕಲ್ಲಂಗಡಿಯಂತೆ ಸೌತೆಕಾಯಿಯೂ ಅಧಿಕ ನೀರಿನಂಶ ಹೊಂದಿದೆ. ತಾಜಾತನ ಮತ್ತು ಸ್ನಾಕ್ ತರಹ ಸೇವಿಸಲೂ ಉತ್ತಮ. ಹೀಗಾಗಿ ಸೌತೆಕಾಯಿ ಸೇವಿಸಲು ಆರಂಭಿಸಿದ ಕೆಲವೇ ದಿನಗಳಲ್ಲಿ ಹೊಟ್ಟೆಯ ಕೊಬ್ಬೂ ನಿವಾರಣೆಯಾಗಲಿದೆ.

ಶುಂಠಿ ಚಹಾ

ಚಹಾಗೆ ಶುಂಠಿ ಬೆರೆಸುವುದು ಹೊಟ್ಟೆಯ ಕೊಬ್ಬಿಗೆ ಉತ್ತಮ ಔಷಧಿ. ಶುಂಠಿ ದೇಹದ ತಾಪವನ್ನು ಹೆಚ್ಚಿಸಿ ಕೊಬ್ಬನ್ನು ಕಡಿಮೆಗೊಳಿಸುತ್ತದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ ಥರ್ಮೋಜೆನಿಕ್ ಆಹಾರ. ಶುಂಠಿಯಂತೆ ಇದೂ ತೂಕ ಕಳೆದುಕೊಳ್ಳಲು ಉತ್ತಮ ಅಂಶ. ಮುಖ್ಯವಾಗಿ ಗಟ್ಟಿಯಾಗಿ ಕುಳಿತ ಕೊಬ್ಬನ್ನು ಇಳಿಸುತ್ತದೆ. ಬೆಳ್ಳುಳ್ಳಿಯು ದೇಹದಲ್ಲಿ ಸಂಗ್ರಹವಾಗಿ ಕೂತ ಕೊಬ್ಬನ್ನು ನಿವಾರಿಸುತ್ತದೆ ಎನ್ನುವುದನ್ನು ಅಧ್ಯಯನಗಳೇ ಹೇಳಿವೆ.

ಬೀನ್ಸ್

ರುಚಿಯಿಲ್ಲ ಎಂದು ಅನಿಸುವ ಬೀನ್ಸ್‌ಗಳು ದೇಹದ ಕೊಬ್ಬನ್ನು ಇಳಿಸುವಲ್ಲಿ ಬಹಳಷ್ಟು ನೆರವಾಗುತ್ತದೆ ಎನ್ನುವುದು ನಿಮಗೆ ಗೊತ್ತೇ? ಅವುಗಳು ಸ್ನಾಯುಗಳನ್ನು ಬೆಳೆಸಲು ಉತ್ತಮ. ಫೈಬರ್‌ನ ಅತ್ಯುತ್ತಮ ಮೂಲವಿದೆ. ಜೀರ್ಣಕ್ರಿಯೆಗೆ ನೆರವಾಗುತ್ತದೆ. ಸೇಬಿನಂತೆ ಬೀನ್ಸ್‌ಗಳಲ್ಲೂ ಅಧಿಕ ಪ್ರಮಾಣದ ಪೆಕ್ಟಿನ್ ಇದ್ದು, ದೀರ್ಘ ಕಾಲ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಇದರಿಂದ ಬೋರಿಂಗ್ ಅನಿಸುವುದಿಲ್ಲ ಅಲ್ಲವೇ ?

ಕೃಪೆ: http://indianexpress.com/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News