ನಿಮ್ಮ ಹಲ್ಲನ್ನು ಎಷ್ಟು ಬಾರಿ, ಹೇಗೆ ಬ್ರಷ್ ಮಾಡಬೇಕು?

Update: 2016-10-02 05:32 GMT

ಈ ಭೂಮಿಯಲ್ಲೇ ಅತೀ ಬೋರ್ ಹೊಡೆಸುವ ಕೆಲಸ ಇದಾಗಿದ್ದರೂ ಪ್ರತಿಯೊಬ್ಬರೂ ದಿನಕ್ಕೆ ಒಂದು ಬಾರಿಯಾದರೂ ಇದನ್ನು ಮಾಡುತ್ತಾರೆ. ಆದರೆ ಎಷ್ಟರಮಟ್ಟಿಗೆ ಮತ್ತು ಎಷ್ಟು ಧೀರ್ಘ ಕಾಲ ನಾವು ನಮ್ಮ ಹಲ್ಲನ್ನು ಬ್ರಷ್ ಮಾಡಬೇಕು? ಇದಕ್ಕೆ ಅತೀ ಸಂಕ್ಷಿಪ್ತ ಉತ್ತರವೆಂದರೆ ಜೀವಿತಾವಧಿಯಲ್ಲಿ 1896 ಸಲ ಎನ್ನುವುದು! ಆದರೆ ಜನರು ಇದಕ್ಕಿಂತ ಅರ್ಧದಷ್ಟು ಮಾತ್ರ ಬ್ರಷ್ ಮಾಡುತ್ತಾರೆ. ಹೇಗೆ ಹಲ್ಲುಜ್ಜಿದರೆ ಉತ್ತಮ ಎನ್ನುವ ಬಗೆಗಿನ ಸಲಹೆಯೂ ಗೊಂದಲಪೂರ್ಣ ಮತ್ತು ಒಂದೇ ರೀತಿಯಾಗಿಲ್ಲ. ಹೀಗಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಬ್ರಷ್ ಮಾಡುವ ಅಭ್ಯಾಸ ಭಿನ್ನವಾಗಿರುತ್ತದೆ.

ಸ್ಮೈಲ್ ಇಂಪ್ರೆಶನ್ಸ್ ಎನ್ನುವ ಸಂಸ್ಥೆಯ ದಂತತಜ್ಞರಾದ ಡಾ ಪಾಯಲ್ ಶರ್ಮಾ ಬಿರ್ಚ್ ಅವರ ಸಲಹೆಗಳು ಹೀಗಿವೆ.

► ಎರಡು ನಿಮಿಷ ಕನಿಷ್ಠ ಬ್ರಷ್ ಮಾಡಬೇಕು. ಬಾಯಿಯ ಪ್ರತೀ ಭಾಗದಲ್ಲೂ 30 ಸೆಕೆಂಡುಗಳ ಕಾಲ ಬ್ರಷ್ ಮಾಡಬೇಕು. ಕನಿಷ್ಠ ದಿನಕ್ಕೆರಡು ಸಲ ಬ್ರಷ್ ಮಾಡಿ.

► ಮಲಗಿದ ಸಮಯದಲ್ಲಿ ನಮ್ಮ ದೇಹದಲ್ಲಿ ಸಲೈವಾ ಹರಿವು ಕಡಿಮೆಯಾಗಿರುವ ಕಾರಣ ಮಲಗುವ ಮೊದಲು ಬ್ರಷ್ ಮಾಡಲೇಬೇಕು. ಸಲೈವಾ ಇದ್ದಲ್ಲಿ ಬಾಯಿಯಲ್ಲಿರುವ ಆಮ್ಲವನ್ನು ಸಹಜವಾಗಿ ಬಫರ್ ಮಾಡುತ್ತದೆ.

► ನಿಮ್ಮ ಗಮ್‌ಗಳು ಹೇಗಿವೆ ಎನ್ನುವುದನ್ನು ಅನುಸರಿಸಿ ಬ್ರಷ್ ಮಾಡುವ ರೀತಿಯನ್ನು ದಂತ ತಜ್ಞರು ಸಲಹೆ ನೀಡುತ್ತಾರೆ.

► ಬಳಸುವ ಟೂತ್‌ಪೇಸ್ಟ್‌ನಲ್ಲಿ ಫ್ಲೂರೈಡ್ ಇದ್ದರೆ, ಹಲ್ಲು ಹುಳ ಬೀಳುವುದರಿಂದ ರಕ್ಷಿಸುತ್ತದೆ.

► ಹಲ್ಲುಗಳ ನಡುವೆ ಇರುವ ಜಾಗವನ್ನು ಸ್ವಚ್ಛ ಮಾಡಲು ಸಣ್ಣ ಬ್ರಷ್‌ಗಳು ಉಪಯುಕ್ತ. ಹೀಗಾಗಿ ಫ್ಲಾಸ್ ಬಳಕೆ ಸಮಯ ವ್ಯರ್ಥವೇನೂ ಅಲ್ಲ.

► ಆದರೆ ಫ್ಲಾಸ್ ಬಳಸಿ ಹಲ್ಲುಗಳ ನಡುವಿನ ಜಾಗವನ್ನು ಪೂರ್ತಿಯಾಗಿ ಉಜ್ಜದೆ ಇದ್ದರೆ, ಅಥವಾ ಹಲ್ಲುಗಳು ಬಿಗಿಯಾಗಿದ್ದು ಬ್ರಷ್‌ಗಳು ಒಳಗೆ ಹೋಗದೆ ಇದ್ದರೆ ಉಪಯೋಗವಿಲ್ಲ.

► ಹಲ್ಲುಜ್ಜದೆ ಇರುವುದರಿಂದ ಆಗುವ ಅಪಾಯ ಭಯಾನಕ. ಬಣ್ಣ ಮಾಸುವುದರಿಂದ ಆರಂಭಿಸಿ, ಕೆಟ್ಟವಾಸನೆ, ಹಲ್ಲು ಹುಳ ಬೀಳುವುದು ಮತ್ತು ಮೂಳೆಗಳು ಕೊಳೆಯುವುದೂ ಆಗಬಹುದು.

ಕೃಪೆ: www.independent.co.uk

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News