ಎಷ್ಟು ಬೇಕಾದರೂ ನೀರು ಕುಡಿಯಬಹುದು ಎಂಬುದು ಸುಳ್ಳು!

Update: 2016-10-13 05:54 GMT

ಮೆಲ್ಬೋರ್ನ್, ಅ.13:ನೀರು ಸೇವಿಸಿದಷ್ಟು ಆರೋಗ್ಯಕ್ಕೆ ಒಳ್ಳೆಯದು ಎಂಬ ಅಭಿಪ್ರಾಯವಿದೆ. ಆದರೆ ಅತಿಯಾದ ನೀರು ಸೇವನೆ ಕೆಲವೊಮ್ಮೆ ಅಪಾಯಕಾರಿಯೂ ಆಗಬಹುದು ಎನ್ನುವುದಕ್ಕೆ ಇಲ್ಲದೆ ಒಂದು ದೃಷ್ಟಾಂತ. ಆಸ್ಟ್ರೇಲಿಯಾದಗೋಲ್ಡ್ ಕೋಸ್ಟ್ ನಿವಾಸಿ 61 ವರ್ಷದ ಹೆಲೆನ್ ಟ್ರೆನ್ ಗ್ರೋವ್ 14 ದಿನಗಳ ಡಿಟಾಕ್ಸ್ ಮತ್ತು ಕ್ಲೆನ್ಸ್ ಹೆಲ್ತ್‌ಕಾರ್ಯಕ್ಕೆ ಅಕ್ಟೋಬರ್ 2014ರಲ್ಲಿ ಕೈಹಾಕಿದಾಗ ತಾನು ಕೋಮಾ ಸ್ಥಿತಿಗೆ ತಲುಪುವುದಾಗಿ ಅವರು ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ. ಅವರ ಈ ಯೋಜನೆಯನ್ವಯ ಪ್ರತಿ ಎರಡು ಗಂಟೆಗೊಮ್ಮೆ ಅವರು ಒಂದು ಲೀಟರ್ ನೀರು ಕುಡಿಯುತ್ತಿದ್ದರು. ಪ್ರಥಮ ದಿನದಂದೇಐದು ಲೀಟರ್ ನೀರನ್ನು ಸೇವಿಸಿದ್ದರು. ಕೊನೆಗೆ ಅವರಿಗೆ ತಲೆ ಸುತ್ತಿದ ಅನುಭವವಾಗಿತ್ತು. ಮೈಯಲ್ಲಿ ಒಂದು ಥರಾ ಚಳಿಯಾಗಲಾರಂಭಿಸಿತ್ತು ಹಾಗೂ ಆಕೆ ಹಾಸಿಗೆ ಹಿಡಿದು ಬಿಟ್ಟಿದ್ದರು. ಕೊನೆಗೆ ಆಕೆಯ ಪರಿಸ್ಥಿತಿ ಬಿಗಡಾಯಿಸಿ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಯಿತು. ಅಂತಿಮವಾಗಿ ಕೋಮಾ ಸ್ಥಿತಿ ತಲುಪಿದ ಆಕೆಯನ್ನು ತೀವ್ರ ನಿಗಾ ಘಟಕಕ್ಕೆ ಸೇರಿಸಿ ಅಲ್ಲಿ ಮೂರು ದಿನಗಳ ಕಾಲ ಚಿಕಿತ್ಸೆ ನೀಡಲಾಯಿತು.

ಆಕೆಯ ದೇಹದಲ್ಲಿ ಸೋಡಿಯಂ ಪ್ರಮಾಣ ತೀವ್ರ ಕಡಿಮೆಯಾಗುವಂತಹ ಹೈಪೊನಟ್ರೇಮಿಯಾ ಎಂಬ ಕಾಯಿಲೆಯಿರುವುದಾಗಿ ಪತ್ತೆಯಾಗಿತ್ತು. ಇದರರ್ಥ ಒಬ್ಬ ವ್ಯಕ್ತಿ ಟೆನ್ ಗ್ರೋವ್ ಮಾಡಿದ ಹಾಗೆ ಅತಿಯಾಗಿ ನೀರು ಸೇವಿಸಿದಲ್ಲಿ ಅದು ದೇಹದಲ್ಲಿನ ಸೋಡಿಯಂ ಅಂಶವನ್ನು ಕರಗಿಸಿ ಜೀವಕೋಶಗಳು ಹೆಚ್ಚಿನ ನೀರು ಹೀರುವಂತೆ ಮಾಡಿ ಜೀವಕ್ಕೇ ಅಪಾಯವುಂಟಾಗುವ ಪರಿಸ್ಥಿತಿ ನಿರ್ಮಾಣವಾಗಬಹುದು.
ಇದರಿಂದ ಮೆದುಳಿನ ಊತವುಂಟಾಗಿ ಉಸಿರಾಟ ತೊಂದರೆಯೂ ಕಾಣಿಸಿಕೊಂಡು ವ್ಯಕ್ತಿ ಸ್ಮತಿ ತಪ್ಪಿ ಬೀಳಬಹುದಲ್ಲದೆ,ಅದು ಮುಂದೆ ಸಾವಿಗೂ ಕಾರಣವಾಗಬಹುದು.
ಮೆಲ್ಬೋರ್ನ್ ವಿಶ್ವವಿದ್ಯಾಲಯ ಹಾಗೂ ಮೊನಾಶ್ ವಿಶ್ವವಿದ್ಯಾಲಯದ ತಜ್ಞರು ನಡೆಸಿದ ಸಂಶೋಧನೆಯಂತೆದಿನಕ್ಕೆ ಎಂಟು ಗ್ಲಾಸ್ ನೀರು ಕುಡಿದಿದ್ದೇ ಆದಲ್ಲಿ ಅದುಹೈಪೊನೇಟ್ರೇನಿಯಾಗೆ ಕಾರಣವಾಗಬಹುದು.
2014 ರಲ್ಲಿ ಹೈಸ್ಕೂಲ್ ಫುಟ್ಬಾಲ್ ಆಟಗಾರನೊಬ್ಬಅಭ್ಯಾಸದ ವೇಳೆ ಬಹಳಷ್ಟು ನೀರು ಕುಡಿದಿದ್ದು, ಕೆಲವೊಂದು ಮೂಲಗಳ ಪ್ರಕಾರ ಆತ 15 ಲೀಟರ್ ನೀರು ಕುಡಿದಿದ್ದಾನೆ. ಮನೆಗೆ ತಲುಪಿದ ಕೂಡಲೇ ಆತ ಕುಸಿದು ಬಿದ್ದು ನಂತರ ಕೆಲ ದಿನಗಳ ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದನೆಂದು ಕೆಲವೊಂದು ಮಾಧ್ಯಮ ವರದಿಗಳನ್ನಾಧರಿಸಿ ಸ್ಕ್ರೋಲ್.ಇನ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News