ಕೇವಲ ವಾಕಿಂಗ್ ಮೂಲಕವೇ ತೂಕ ಕಳೆದುಕೊಳ್ಳಲು ಹೀಗೆ ಮಾಡಿ
ತೂಕ ಕಳೆದುಕೊಳ್ಳುವ ವಿಷಯಕ್ಕೆ ಬಂದಾಗ ತೀವ್ರವಾದ ವ್ಯಾಯಾಮದ ಬಗ್ಗೆಯೇ ನಾವು ಯೋಚಿಸುತ್ತೇವೆ. ಆದರೆ ನಮ್ಮ ಪೂರ್ವಜರು ಹುಟ್ಟಿನಿಂದ ಮಾಡುತ್ತಿದ್ದ ಚಟುವಟಿಕೆಗಳ ಮೂಲಕವೇ ತೂಕ ಕಳೆದುಕೊಳ್ಳಲು ಸಾಧ್ಯವಾಗುತ್ತಿದ್ದರೆ ಎಷ್ಟು ಚೆನ್ನಾಗಿತ್ತು. ಹಾಗಿದ್ದರೆ ಏಕೆ ತಡ? ನಿಮ್ಮ ಜೀವನಶೈಲಿಯನ್ನು ಬದಲಾಯಿಸಲು ಇಲ್ಲಿವೆ ಕೆಲವು ಸಲಹೆಗಳು.
ಪ್ರತೀ ದಿನ 15,000 ಹೆಜ್ಜೆ
ಮ್ಯಾಪ್‌ಮೈವಾಕ್ ಅಥವಾ ಫಿಟ್ನೆಸ್ ಬ್ರಾಂಡ್ ಮೂಲಕ ನೀವು ದಿನಕ್ಕೆ ಎಷ್ಟು ಹೆಜ್ಜೆ ನಡೆಯುತ್ತೀರಿ ಎಂದು ಲೆಕ್ಕ ಇಡಿ. 15,000 ಹೆಜ್ಜೆಯನ್ನು ನಿತ್ಯವೂ ನಡೆಯುವುದು ಮೊದಲಿಗೆ ಕಷ್ಟವೆನಿಸಬಹುದು. ಆದರೆ ನಡೆಯಲು ಆರಂಭಿಸಿದರೆ ಇದು ಸಾಧ್ಯ ಎನಿಸುತ್ತದೆ. ನಡೆಯುವುದು ನಿಮ್ಮ ಕಾಲುಗಳಿಗೆ ಹೆಚ್ಚು ಶಕ್ತಿ ಕೊಡುತ್ತದೆ.
ದಿನಕ್ಕೆ ಮೂರು ಬಾರಿ 20 ನಿಮಿಷ ನಡೆಯಿರಿ.
ದಿನಕ್ಕೆ ಊಟ ಮಾಡುವಂತೆ ಮೂರು ಬಾರಿ 20 ನಿಮಿಷ ನಡೆಯಬೇಕು. ಉದ್ದನೆಯ ವಾಕ್ ಬದಲಾಗಿ 15-20 ನಿಮಿಷ ಪ್ರತೀ ಊಟದ ಮೇಲೆ ನಡೆಯುವುದು ಉತ್ತಮ. ನಿಮ್ಮ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಇದು ನೆರವಾಗುತ್ತದೆ. ದಿನಕ್ಕೊಮ್ಮೆ ಧೀರ್ಘ 45 ನಿಮಿಷ ನಡೆಯುವುದಕ್ಕಿಂತ ಇದು ಉತ್ತಮ.
ಮೇಲೇರುವುದು
ಸ್ವಲ್ಪ ಏರುಮುಖವಾಗಿ ಇರುವ ದಾರಿಯಲ್ಲಿ ನಡೆದಾಗ ನಿಮಗೆ ಹೆಚ್ಚು ಸುಸ್ತಾಗಿರುವುದನ್ನು ಗಮನಿಸಿರಬಹುದು. ಅಲ್ಲದೆ ನಿಮ್ಮ ಹೃದಯದ ಗತಿಯೂ ಹೆಚ್ಚಾಗುತ್ತದೆ. ಏಕೆಂದರೆ ಏರುಹಾದಿಯಲ್ಲಿ ನಡೆದಾಗ ಮೂಳೆಗಳು ಹೆಚ್ಚು ಸಾಮರ್ಥ್ಯ ಪಡೆದುಕೊಳ್ಳುತ್ತವೆ. ಇವು ನಿಮ್ಮ ಚಯಾಪಚಯ ದರವನ್ನು ಹೆಚ್ಚಿಸಲು ನೆರವಾಗುತ್ತದೆ. ನೀವು ಸ್ವಲ್ಪ ಮಟ್ಟಿಗೆ ಕೆಳಗೆ ಬಾಗಿ ನಿಮ್ಮ ಗತಿಯನ್ನು ಬದಲಿಸಬೇಕು. ಇದರಿಂದ ಕಾಲುಗಳಿಗೆ ಹೆಚ್ಚು ಒತ್ತಡ ಬೀಳುವುದಿಲ್ಲ. ನಿಧಾನವಾಗಿ ಮತ್ತು ನಿರಂತರವಾಗಿ ನಡೆಯುವುದರಿಂದ ಹೆಚ್ಚು ಲಾಭವಿದೆ.
ಗ್ರೀನ್ ಟೀ ಕುಡಿಯಿರಿ
ಚಯಾಪಚಯ ಚೆನ್ನಾಗಿ ಆದಲ್ಲಿ ಹೆಚ್ಚುವರಿ ಕಿಲೋಗಳನ್ನು ಹಾಕಿಕೊಳ್ಳಬಹುದು. ಗ್ರೀನ್‌ಟೀ ಅದನ್ನೇ ಮಾಡುತ್ತದೆ. ಕೆಫೈನ್ ಮತ್ತು ಕ್ಯಾಟ್ಚಿನ್‌ಗಳನ್ನು ಜೊತೆಯಾಗಿ ಸೇರಿಸಿ ಕೊಬ್ಬು ಇಳಿಸಲು ನೆರವಾಗುತ್ತದೆ. ವಿಶ್ರಾಂತಿ ತೆಗೆದುಕೊಳ್ಳುತ್ತಾ ಗತಿ ಬದಲಿಸಿ ನಡೆಯಿರಿ
ಏಕಮುಖವಾಗಿ ನಡೆಯಬೇಡಿ. ನಿರಂತರವಾಗಿರದೆ ಸಣ್ಣ ವಿಶ್ರಾಂತಿ ತೆಗೆದುಕೊಂಡು ಮುಂದೆ ಸಾಗಿ. ಹೀಗೆ ನಿತ್ಯದ ಅಭ್ಯಾಸವನ್ನು ಬದಲಿಸುವುದರಿಂದ ಶೇ. 20ರಷ್ಟು ಕೊಬ್ಬು ಇಳಿಸಬಹುದು. ನಿಮ್ಮ ನಿತ್ಯದ ನಡೆಯಲ್ಲಿ ಒಂದು ನಿಮಿಷದ ವಿಶ್ರಾಂತಿ ಉತ್ತಮ. ಇದು ಹೆಚ್ಚು ಕ್ಯಾಲರಿ ಕಡಿಮೆ ಮಾಡಲು ನೆರವಾಗುತ್ತದೆ.
ದೇಹತೂಕದ ವ್ಯಾಯಾಮ
ನಡೆಯುವುದು ದೇಹಕ್ಕೆ ವಿಶಿಷ್ಟ ವ್ಯಾಯಾಮ ಎನ್ನುವುದು ಸುಳ್ಳಲ್ಲ. ನಡೆಯುವುದು ಮತ್ತು ದೇಹದ ವ್ಯಾಯಾಮ ಎರಡೂ ಮಾಡಿದಲ್ಲಿ ಅತ್ಯುತ್ತಮ ಫಲಿತಾಂಶ ಸಿಗಲಿದೆ. 15-20 ಸ್ಕ್ವಾಟ್‌ಗಳಲ್ಲಿ ಮಾಡಿ. ಪುಷಪ್ ಮತ್ತು ಡಿಪ್ಸ್ ಕೂಡ ಇರಲಿ. ಈ ವ್ಯಾಯಾಮಗಳು ಹೃದಯದ ಗತಿಯನ್ನು ಏರಿಸುತ್ತಾ ಉತ್ತಮ ವ್ಯಾಯಾಮವಾಗಿರುತ್ತದೆ.
ಸಕ್ಕರೆ ಅಂಶದ ಪಾನೀಯಗಳು ಬೇಡ
ಸಕ್ಕರೆ ಅಂಶ ಹೆಚ್ಚಿರುವ ಪಾನೀಯಗಳನ್ನು ನಿತ್ಯವೂ ಸೇವಿಸುತ್ತೀರಾ? ಈ ಪಾನೀಯಗಳು ಅತಿಯಾದ ವ್ಯಾಯಾಮದ ನಂತರ ಸೇವಿಸಲು ಸೂಕ್ತವಲ್ಲ. ನಿಮಗೆ ಅಗತ್ಯಕ್ಕಿಂತ ಹೆಚ್ಚು ಕ್ಯಾಲರಿಗಳನ್ನು ಇವು ಕೊಡುತ್ತವೆ.
ಸ್ಮಾರ್ಟ್ ವಾಕ್
ಅವಕಾಶ ಸಿಕ್ಕಾಗೆಲ್ಲ ಸಣ್ಣ ದೂರಕ್ಕೆ ನಡೆಯುವುದು ಉತ್ತಮ. ನಿಮ್ಮ ಕಾರನ್ನು ಸ್ವಲ್ಪ ದೂರದಲ್ಲೇ ಪಾರ್ಕ್ ಮಾಡುವುದು, ಮೆಟ್ಟಿಲು ಹತ್ತುವುದು, ಎಸ್ಕಲೇಟರ್ ಬಿಡುವುದು, ಕಾರ್ ತೆಗೆದುಕೊಂಡು ಹೋಗುವ ಬದಲಾಗಿ ನಡೆದೇ ಅಕ್ಕ ಪಕ್ಕ ತಿರುಗಾಡುವುದು ಇತ್ಯಾದಿ ಉತ್ತಮ.
ನೀರು ಕುಡಿಯುವುದು
ಅಧ್ಯಯನದ ಪ್ರಕಾರ ತೂಕ ಕಡಿಮೆ ಮಾಡಲು ಹೆಚ್ಚು ನೀರು ಕುಡಿಯಬೇಕು. 1.5 ಲೀಟರ್ ನೀರನ್ನು ದಿನಕ್ಕೆ ಕುಡಿದಲ್ಲಿ 17,400 ಕ್ಯಾಲರಿಗಳನ್ನು ವರ್ಷಕ್ಕೆ ನಿವಾರಿಸಿಕೊಳ್ಳಬಹುದು.
ಉತ್ತಮ ಪ್ಲೇಲಿಸ್ಟ್
ಸಂಗೀತ ನಿಮ್ಮ ಮನಸ್ಸನ್ನು ಉಲ್ಲಸಿತಗೊಳಿಸುತ್ತದೆ. ನಿಮ್ಮ ಮನಸ್ಸಿಗೆ ಸಂಗೀತ ಬಹಳ ಹಿತ ಕೊಡುತ್ತದೆ. ಏನೇ ಗಂಭೀರ ಸಂದರ್ಭವಿದ್ದರೂ ಮುಂದಿನ ಬಾರಿ ನಡೆಯಲು ಹೆಜ್ಜೆ ಇಟ್ಟಾಗ ಸಂಗೀತದ ಜೊತೆಗೆ ಆನಂದಿಸಿ. ಸಂಗೀತವನ್ನು ನಿಮ್ಮ ಗೆಳೆಯನಾಗಿಸಿ. ಉತ್ಸಾಹ ತರುವ ಹಾಡುಗಳ ಪಟ್ಟಿಯನ್ನು ಅಣಿಗೊಳಿಸಿದಲ್ಲಿ ನಿಮ್ಮ ಶಕ್ತಿ ಜೀವಂತವಾಗಿರುತ್ತದೆ. ಕಿವಿಗಳಲ್ಲಿ ಇಯರ್‌ಫೋನ್ ಇಟ್ಟಾಗ ಸ್ವಲ್ಪ ಹೆಚ್ಚೇ ದೂರ ನಡೆಯಲು ಸಾಧ್ಯವಾಗಲಿದೆ ಎನ್ನುವುದನ್ನು ಕಂಡುಕೊಳ್ಳುವಿರಿ.
ಕೃಪೆ: timesofindia.indiatimes.com