ಪೀನಟ್ ಬಟರ್: ರುಚಿಗೆ ಮಾರು ಹೋಗಬೇಡಿ !
ನಿಮಗೆ ಪೀನಟ್ ಬಟರ್ ಅಲರ್ಜಿ ಇದ್ದಲ್ಲಿ ಅದನ್ನು ಸೇವಿಸುವುದು ಸರಿಯಲ್ಲ. ಆದರೆ ಅಲರ್ಜಿ ಇಲ್ಲದಿದ್ದರೆ ಅದು ನಿಮಗೆ ಆರೋಗ್ಯಕಾರಿಯೆ? ಆರೋಗ್ಯಕರ ಎಂದು ಪರಿಗಣಿಸಲಾಗಿರುವ ಒಂದು ಜನಪ್ರಿಯ ವಸ್ತು ಇದು. ಆದರೆ ಇದು ನಿಮ್ಮ ಚಯಾಪಚಯ ಕ್ರಿಯೆಯ ಗುರಿಯನ್ನು ಬದಲಿಸುತ್ತದೆ.
ಇದರ ಪರಿಣಾಮವಾಗಿ ಈ ಕೆಳಗಿನ ಫಲಿತಾಂಶ ಕಾಣುವಿರಿ:
► ತೂಕ ಏರುವುದು
►ಸುಸ್ತು
►ಥೈರಾಯ್ಡ ಸಮಸ್ಯೆ
► ಹಾರ್ಮೋನ್ ಅಸಮತೋಲನ
ಈ ಮೇಲಿನ ಸಮಸ್ಯೆ ಇರುವಾಗ ಪೀನಟ್ ಬಟರ್ ಉತ್ತವಾಗಿರಲು ಹೇಗೆ ಸಾಧ್ಯ? ಆರೋಗ್ಯದ ಬಗ್ಗೆ ಕಾಳಜಿ ಇರುವವರೂ ಇದನ್ನು ಬದಿಗೆ ಇಡದಿರಲು ಕೆಲವು ಕಾರಣಗಳು ಇಲ್ಲಿವೆ:
ಶಕ್ತಿಯ ಮೂಲ
ಪೀನಟ್ ಬಟರ್‌ನಲ್ಲಿ ಕಾರ್ಬೋಹೈಡ್ರೇಟ್ ಗಳು, ಪ್ರೊಟಿನ್ ಮತ್ತು ಕೊಬ್ಬು ಉತ್ತಮ ಸಮತೋಲನದಲ್ಲಿದೆ. ಇದು ನಿಮ್ಮ ಶಕ್ತಿ ಅತ್ಯುತ್ತಮವಾಗಿ ಹರಡಲು ನೆರವಾಗುತ್ತದೆ.
2. ವಿಟಮಿನ್‌ಗಳು ಮತ್ತು ಲವಣಗಳು
ಪೀನಟ್ ಬಟರ್ ಪ್ರಿಯವಾಗಲು ಮತ್ತೊಂದು ಕಾರಣ ಇದರಲ್ಲಿರುವ ಹಲವು ಲವಣಗಳು ಮತ್ತು ವಿಟಮಿನ್‌ಗಳು. ವಿಟಮಿನ್ ಇ, ಬಿ3 ಮತ್ತು ಬಿ6 ಕೂಡ ಇದರಲ್ಲಿದೆ. ಫೋಲೇಟ್, ಕಾಪರ್, ಮ್ಯಾಂಗನೀಸ್, ಮೆಗ್ನೇಷಿಯಂ ಮತ್ತು ಕಬ್ಬಿಣ ಅಂಶಗಳೂ ಇವೆ.
3.ಆಂಟಿ ಆಕ್ಸಿಡಂಟ್‌ಗಳು
ಪೀನಟ್ ಬಟರ್ ಅಧಿಕ ಆಂಟಿ ಆಕ್ಸಿಡಂಟ್‌ಗಳಿರುವ ಕಡಲೆಗಳಿಂದ ಬರುವ ಕಾರಣ ಅವುಗಳಲ್ಲಿ ಪಿ ಕೌಮಾರಿಕ್ ಆಸಿಡ್ ಇರುತ್ತದೆ. ಆಂಟಿ ಆಕ್ಸಿಡಂಟ್ ಹೊಟ್ಟೆ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲಿವೆ.
4. ರಿಸರ್ವರಟ್ರಾಲ್
ಕೆಂಪು ವೈನ್, ಪೀನಟ್ ಬಟರ್‌ಗಳಲ್ಲಿ ರಿಸರ್ವರಟ್ರಾಲ್ ಇದ್ದು, ಹೃದಯ ರೋಗದ ಅಪಾಯ ಕಡಿಮೆ ಮಾಡುತ್ತದೆ.
ಪೀನಟ್ ಬಟರ್ ಏಕೆ ಬೇಡ?
ಪೀನಟ್ ಬಟರ್ ಎಷ್ಟು ಪ್ರಮಾಣದಲ್ಲಿ ನೀವು ಸೇವಿಸುತ್ತೀರಿ ಎನ್ನುವುದರಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಇದೇ ಕಾರಣದಿಂದ ಪೀನಟ್ ಬಟರ್ ಸೇವಿಸಬಾರದು ಎನ್ನಲಾಗುತ್ತದೆ.
1. ಒಮೆಗಾ 6
ಇದೇನು ಕೆಟ್ಟ ಅಂಶವಲ್ಲ. ಆದರೆ ಪೀನಟ್ ಬಟರ್‌ನಲ್ಲಿ ಒಮೆಗಾ 6 ಮತ್ತು ಒಮೆಗಾ 3 ಫ್ಯಾಟಿ ಆಸಿಡ್ಸ್ ಅನುಪಾತ 20:1ರಲ್ಲಿ ಅಸಮತೋಲನದಲ್ಲಿದೆ. ಆರೋಗ್ಯಕರ ಅನುಪಾತ 2:1 ಆಗಿರುತ್ತದೆ. ಒಮೆಗಾ 6 ಉರಿಯೂತ ಸಮಸ್ಯೆ, ಆಸ್ತಮಾ, ಬೊಜ್ಜು, ಚಯಾಪಚಯ ಸಿಂಡ್ರೋಮ್ ಮತ್ತು ಮಧುಮೇಹ ತರುತ್ತದೆ.
ಮೋಲ್ಡ್
ಪೀನಟ್‌ಗಳಲ್ಲಿ ಮೋಲ್ಡ್ ಅಥವಾ ಮೈಕೊಟಾಕ್ಸಿನ್‌ಗಳಿರಬಹುದು. ಮೋಲ್ಡ್ ಟಾಕ್ಸಿಕ್ ಮತ್ತು ಖಿನ್ನತೆಗೆ ಕಾರಣವಾಗುತ್ತದೆ. ಇತರ ಅಲರ್ಜಿ ಸಮಸ್ಯೆಯೂ ಉಂಟಾಗಬಹುದು.
ಅಫ್ಲಾಟಾಕ್ಸಿನ್
ಕೆಲವು ಮೋಲ್ಡ್‌ಗಳು ಅಫ್ಲಾಟಾಕ್ಸಿನ್‌ಗಳನ್ನು ಉತ್ಪಾದಿಸುತ್ತವೆ. ಅವು ಪೀನಟ್ ಬಟರಲ್ಲಿರಬಹುದು. ಅಫ್ಲಾಟಾಕ್ಸಿನ್‌ಗಳು ಕಡಿಮೆ ಪ್ರಮಾಣದಲ್ಲಿದ್ದರೂ ಮಾನವ ದೇಹದ ಮೇಲೆ ವಿಪರೀತ ಪರಿಣಾಮ ಬೀರುತ್ತವೆ. ಕೆಲವು ಅಧ್ಯಯನಗಳು ಲಿವರ್ ಕ್ಯಾನ್ಸರ್, ಮಾನಸಿಕ ಖಿನ್ನತೆ ಮತ್ತು ಬೆಳವಣಿಗೆ ಕುಂಟಿತವಾಗಿರುವ ಬಗ್ಗೆಯೂ ಹೇಳಿವೆ.
ಪೀನಟ್ ಬಟರ್ ಸೇವನೆಯಿಂದ ಕೆಲವು ಸಮಸ್ಯೆಗಳಿದ್ದರೂ ನಿಮಗೆ ಸೂಕ್ತವೆನಿಸಿದಲ್ಲಿ ಅದನ್ನು ಆರಿಸುವುದು ಉತ್ತಮ.
ಕೃಪೆ: www.stethnews.com