ಎಳ್ಳು - ಜೇನು ಕೊಂಬೋದ ಪ್ರಯೋಜನಗಳು ಒಂದೇ ? ಎರಡೇ ?

Update: 2016-11-01 10:36 GMT

ಉತ್ತಮ ಆರೋಗ್ಯಕ್ಕಾಗಿ ಎಳ್ಳು ಮತ್ತು ಜೇನನ್ನು ಜೊತೆಯಾಗಿ ಬಳಸಬೇಕು ಎನ್ನುವುದು ಹಲವರಿಗೆ ಗೊತ್ತಿಲ್ಲ. ಶತಮಾನಗಳಿಂದ ಪಾರಂಪರಿಕ ಔಷಧಿಗಳಲ್ಲಿ ಈ ಹೀಲಿಂಗ್ ಶಕ್ತಿಯನ್ನು ಬಳಸಿಕೊಳ್ಳಲಾಗುತ್ತಿದೆ. ಜೇನು ಮತ್ತು ಎಳ್ಳು ಉತ್ತಮ ರುಚಿಯನ್ನೂ ಹೊಂದಿದೆ. ಹೀಗಾಗಿ ಜನರ ಪ್ರಿಯ ಆಹಾರ. ಆದರೆ ರುಚಿಯ ಜೊತೆಗೆ ಇದರ ಪೌಷ್ಠಿಕಾಂಶಗಳೂ ಅಷ್ಟೇ ಪ್ರಸಿದ್ಧ. ಇಲ್ಲಿದೆ ಕೆಲವು ವಿವರಗಳು,

1. ದುರ್ಬಲ ನಿರೋಧಕ ಶಕ್ತಿ ಇದ್ದವರಿಗೆ ಉತ್ತಮ

2. ಅತಿಯಾದ ಸಿಹಿ ತಿನಿಸು ಇಷ್ಟಪಡುವವರಿಗೆ

3. ಹೊಟ್ಟೆ ನೋವಿಗೆ

4. ಜಠರದ ಸಮಸ್ಯೆ, ಕಾಲಿಟಿಸ್, ಅಲ್ಸರ್ ಮತ್ತು ಗ್ಯಾಸ್ಟ್ರಿಕ್ಸ್‌ಗಳಿಗೆ ಉತ್ತಮ

5. ದುರ್ಬಲ ಮೂಳೆ ಇದ್ದರೆ

6. ಕಡಿಮೆ ಶಕ್ತಿ ಮತ್ತು ಸಹನೆ ಇದ್ದರೆ

7. ದುರ್ಬಲ ಮಾನಸಿಕ ಚಟುವಟಿಕೆ, ಗುಮನ ಮತ್ತು ಉತ್ತೇಜನ ಕಡಿಮೆ ಇದ್ದವರಿಗೆ

8. ಕೂದಲು ಉದುರುವುದು ಮತ್ತು ಕೂದಲಿನ ಸಮಸ್ಯೆಗಳಿಗೆ

9. ಬೊಜ್ಜು ಕರಗಿಸಲು

ಎಳ್ಳು ಮತ್ತು ಜೇನು ಯಾಕೆ ಬೇಕು?

ಎಳ್ಳು ಮತ್ತು ಜೇನು ಮಿಶ್ರಣ ಉತ್ತಮ ಪೌಷ್ಠಿಕಾಂಶವನ್ನು ಹೊಂದಿದೆ. ಶೀತ ಮತ್ತು ಜ್ವರ ನಿವಾರಣೆಗೆ ಜೇನು ಉತ್ತಮ. ಶ್ವಾಸಕೋಶದ ಆರೋಗ್ಯಕ್ಕೆ ಎಳ್ಳು ಉತ್ತಮ. ಸಂಧಿವಾತ ಇದ್ದವರಿಗೂ ಎಳ್ಳು ಉತ್ತಮ. ಎಳ್ಳಿನ ಎಣ್ಣೆಯನ್ನೂ ಬಳಸಬಹುದು.

ಜೊತೆಯಾಗಿ ಬಳಸಿದಲ್ಲಿ ಎಳ್ಳು ಮತ್ತು ಜೇನು ಇನ್ನೂ ಉತ್ತಮ ಪೌಷ್ಠಿಕ ಆಹಾರ. ಹಲವು ವಿಟಮಿನ್‌ಗಳು ಮತ್ತ ಲವಣಗಳನ್ನು ದೇಹಕ್ಕೆ ಈ ಮಿಶ್ರಣ ಕೊಡುತ್ತದೆ. ಅವುಗಳ ವಿವರ ಹೀಗಿದೆ:

► ವಿಟಮಿನ್ ಎ

► ವಿಟಮಿನ್ ಬಿ ಕಾಂಪ್ಲೆಕ್ಸ್

► ವಿಟಮಿನ್ ಇ

► ಒಮೆಗಾ 3 ಫ್ಯಾಟಿ ಆಸಿಡ್‌ಗಳು

► ಒಮೆಗಾ 6 ಫ್ಯಾಟಿ ಆಸಿಡ್‌ಗಳು

ಹಿಂದಿನ ಕಾಲದಲ್ಲಿ ಈ ಮಿಶ್ರಣವನ್ನು ಮಹಿಳೆಯ ಸಂತಾನೋತ್ಪತ್ತಿ ವಿಷಯದಲ್ಲಿ ಅತ್ಯುತ್ತಮ ಎಂದು ಪರಿಗಣಿಸಲಾಗಿತ್ತು. ಈ ಮಿಶ್ರಣವನ್ನು ಸುಸ್ತು ಮತ್ತು ಮನೋಸ್ಥಿತಿಯಲ್ಲಿ ಆಗುವ ಬದಲಾವಣೆಗಳನ್ನು ತಪ್ಪಿಸಲೂ ಉತ್ತಮ ಎಂದು ಪರಿಗಣಿಸಲಾಗಿದೆ.ಆಹಾರದಲ್ಲಿ ಈ ಮಿಶ್ರಣವನ್ನು ಬಳಸುವ ಹಲವು ವಿಧಗಳಿವೆ.

ಜೇನು ಮತ್ತು ಎಳ್ಳನ್ನು ಜೊತೆಯಾಗಿ ಮಿಶ್ರ ಮಾಡಿ. ಚೆನ್ನಾಗಿ ಕಲಡಿ. ದಿನಕ್ಕೆ ಒಮ್ಮೆ ಬೆಳಗಿನ ಉಪಾಹಾರ ಸೇವಿಸುವ ಮೊದಲು ಇದನ್ನು ಕುಡಿಯಿರಿ. ಹೀಗೆ ವಾರವಿಡೀ ಮಾಡಿದರೆ ಉತ್ತಮ.

ಕೃಪೆ:www.stethnews.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News