ಬ್ಯಾಕ್ಟೀರಿಯಾ ಕಾಯಿಲೆಗಳನ್ನು ತಡೆಯುವ ಆಹಾರಗಳು

Update: 2016-11-03 04:51 GMT

ರೋಗಾಣುಹಾರಿಯಾಗಿರುವ ಆಹಾರಗಳು ಬಹಳಷ್ಟಿವೆ. ಶುದ್ಧರೂಪದಲ್ಲಿ ಸೇವಿಸಿದರೆ ಮತ್ತು ಸರಿಯಾದ ಕ್ರಮದಲ್ಲಿ ತಿಂದರೆ ಅವುಗಳಲ್ಲಿ ಬ್ಯಾಕ್ಟೀರಿಯಾ ಮೂಲದ ರೋಗಗಳನ್ನು ನಿವಾರಿಸುವ ಶಕ್ತಿ ಇರುತ್ತದೆ.

ಮಾವಿನ ಹಣ್ಣುಗಳು

ಮಾವಿನ ಹಣ್ಣು ಸಕ್ಕರೆ ಅಂಶ ಅತಿಯಾಗಿರುವ ಹಣ್ಣು ಎಂದು ಬದಿಯಲ್ಲಿಡುವವರು ಮತ್ತೊಮ್ಮೆ ಯೋಚಿಸಿ. ಮಾವಿನಹಣ್ಣು ಹೃದಯ ರೋಗವನ್ನು ರಕ್ಷಿಸಲು ಉತ್ತಮ. ಹಲವಾರು ಸೋಂಕುಗಳನ್ನು ಇವು ನಿವಾರಿಸುತ್ತವೆ. ಆರೋಗ್ಯಕರ ಎಪಿತೆಲಿಯಂ ನೀಡಿ ಶೀತ, ರೈನಿಟಿಸ್ ಮತ್ತು ಸೈನುಸೈಟಿಸ್ ಸೋಂಕುಗಳಿಂದ ರಕ್ಷಿಸುತ್ತದೆ. ವಿಟಮಿನ್ ಎ ಇರುವ ಮಾವಿನಹಣ್ಣುಗಳು ಗಂಟಲು ನೋವಿಗೆ ಮತ್ತು ಡಿಪ್ತೀರಿಯಕ್ಕೆ ಉತ್ತಮ ಔಷಧಿ.

ಕ್ಯಾಬೇಜ್

ಸಾಮಾನ್ಯವಾಗಿ ಅತೀ ಕಡಿಮೆ ಬಳಸುವ ತರಕಾರಿ ಕ್ಯಾಬೇಜ್. ಇದರಲ್ಲಿ ಹುಳಗಳಿರುತ್ತವೆ ಎನ್ನುವ ಭಯ. ಕ್ಯಾಬೇಜ್‌ನಲ್ಲಿ ವಿಟಮಿನ್, ಲವಣಗಳು ಮತ್ತು ಆಲ್ಕಲೈನ್ ಲವಣಗಳು ಹೆಚ್ಚಿರುತ್ತವೆ. ಇವು ಹೊಟ್ಟೆಯ ಅಲ್ಸರಿಗೆ ಕಾರಣವಾಗುವ ಎಚ್ ಪೈಲೋರಿಯಂತಹ ಬ್ಯಾಕ್ಟೀರಿಯ ವಿರುದ್ಧ ಕೆಲಸ ಮಾಡುತ್ತದೆ. ಜಾಂಡೀಸ್ ಮತ್ತು ಬ್ಲೇಡರ್ ರೋಗಕ್ಕೆ ಇದು ಉತ್ತಮ.

ಕ್ಯಾರೆಟ್

ಬೀಟಾ ಕೆರೋಟಿನ್ ಅತಿಯಾಗಿ ಇರುವ ಕ್ಯಾರೆಟ್ ಉತ್ತಮ ಆಂಟಿ ಆಕ್ಸಿಡಂಟ್ ಮತ್ತು ಕ್ಲೀನ್ಸರ್. ವಿಟಮಿನ್ ಎ ಹೊಂದಿರುವ ಇದು ಕ್ಯಾನ್ಸರ್ ನಿರೋಧಕ ಶಕ್ತಿ ಹೊಂದಿದೆ. ಆ್ಯಸಿಡ್ ಆಲ್ಕಲೈನ್ ಸಮತೋಲನವನ್ನು ದೇಹಕ್ಕೆ ಕೊಡುತ್ತದೆ. ಕ್ಯಾರೆಟ್ ಜ್ಯೂಸ್ ಗಂಟಲು ನೋವು, ಕಣ್ಣು ಮತ್ತು ಸೈನಸ್ ಸೋಂಕುಗಳಿಗೆ ಉತ್ತಮ ಆಹಾರ. ಇದು ಹೊಟ್ಟೆಯ ಹುಳಗಳನ್ನೂ ಕೊಲ್ಲುತ್ತದೆ.

ನುಗ್ಗೆ ಕಾಯಿ

ನುಗ್ಗೆ ಕಾಯಿ ಎಲ್ಲಾ ಋತುಗಳಲ್ಲೂ ಉತ್ತಮ ಸೋಂಕು ನಿವಾರಕ ಆಹಾರ. ಸಿಡುಬು ರೋಗ ಇದ್ದವರಿಗೆ ಆರಂಭದಲ್ಲಿ ನುಗ್ಗೇಕಾಯಿ ತಿನ್ನುವುದು ಉತ್ತಮ. ನುಗ್ಗೆ ಕೋಡು ಮತ್ತು ಅದರ ಹೂವುಗಳನ್ನು ವಿವಿಧ ರೋಗಗಳಿಗೆ ಔಷಧಿಯಾಗಿ ಸೇವಿಸಬಹುದು.

ಬೇವಿನ ಎಲೆಗಳು

ಬೇವಿನ ಎಲೆಗಳು ರಕ್ತ ಶುದ್ಧೀಕರಣಕ್ಕೆ ಅತ್ಯುತ್ತಮ. ಹಲವು ಚರ್ಮ ರೋಗಗಳನ್ನು ದೂರವಿಡುತ್ತದೆ. ಹೀಗಾಗಿ ನಿತ್ಯದ ಆಹಾರದ ಭಾಗವಾಗಿದ್ದರೆ ಚೆನ್ನ.

ಅರಿಶಿಣ

ಕ್ಯಾಲ್ಸಿಯಂ ಕಾರ್ಬೋನೇಟ್ ಜೊತೆಗೆ ಮಿಶ್ರ ಮಾಡಿದ ಅರಿಶಿಣ ಹಚ್ಚಿದರೆ ಮೂಳೆ ಮುರಿತಗಳಿಗೆ ಔಷಧಿಯಾಗಲಿದೆ. ಹಾಲಿನಲ್ಲಿ ಬೆರೆಸಿ ಸೇವಿಸಿದರೆ ಗಂಟಲುರಿಗೆ ಉತ್ತಮ. ರೋಗ ನಿವಾರಕ ಶಕ್ತಿ ಇದರಲ್ಲಿ ಅತಿಯಾಗಿದೆ. ರೈನಿಟಿಸ್, ಶೀತ, ತುರಿಗಜ್ಜಿ, ಲಾಡಿಹುಳ ಮತ್ತು ಅಲ್ಸರ್‌ಗಳಿಗೂ ಉತ್ತಮ.

ಶುಂಠಿ

ಮಹಾ ಔಷಧಿ ಅಥವಾ ಅತ್ಯುತ್ತಮ ವೈದ್ಯ ಎಂದು ಕರೆಯಲಾಗುವ ಶುಂಠಿ ಕಫ, ಅತಿಸಾರ ಮತ್ತು ಹೃದಯದ ಸೋಂಕುಗಳಿಗೆ ಉತ್ತಮ. ತಾಜಾ ಶುಂಠಿ ರಸವನ್ನು ಮೆಂತ್ಯೆ ಪೌಡರ್ ಮತ್ತು ಜೇನು ಜೊತೆಗೆ ಸೇವಿಸಿದರೆ ಉತ್ತಮ.

ಜೇನು

ಆಯುರ್ವೇದಲ್ಲಿ ಜೇನಿಗೆ ರೋಗಾಣುಹಾರಿ ಎಂದು ಬಹಳ ಪ್ರಮುಖ ಸ್ಥಾನವಿದೆ. ಗಂಟಲು ಸೋಂಕು ಮತ್ತು ಇತರ ಕಾರಣಗಳಿಗೂ ಜೇನು ಸೇವಿಸಬಹುದು. ಬಾಯಿಯ ಅಲ್ಸರ್ ಆದಾಗ ಬೋರಾಕ್ಸ್ ಮತ್ತು ಗ್ಲಿಸರಿನ್ ಜೊತೆಗೆ ಜೇನು ಬೆರೆಸಿ ಸೇವಿಸಬಹುದು. ಕಿವಿ ಸೋಂಕು ಮತ್ತು ಗಾಯಗಳಿಗೂ ಜೇನು ಉತ್ತಮ ಔಷಧಿ.

ಲಿಂಬೆ

ಪಾರಂಪರಿಕವಾಗಿ ಕಾಲರಾ ರೋಗಕ್ಕೆ ಲಿಂಬೆ ಉತ್ತಮ ಔಷಧ. ಸಕ್ಕರೆ ಮತ್ತು ಉಪ್ಪು ಬೆರೆಸಿದ ಲಿಂಬೆ ಅತಿಸಾರಕ್ಕೆ ಔಷಧ. ಗಂಟಲು ಸೋಂಕು ಇದ್ದವರು ಜೇನು ಬೆರೆಸಿ ಲಿಂಬೆ ಸೇವಿಸಬೇಕು. ನಿರೋಧಕ ಶಕ್ತಿ ಹೆಚ್ಚಿಸಲು ವೈದ್ಯರು ಲಿಂಬೆ ಪಾನೀಯವನ್ನು ಖಾಲಿ ಹೊಟ್ಟೆಗೆ ಸೇವಿಸುವಂತೆ ಹೇಳುತ್ತಾರೆ.

ಮೊಸರು

ಪ್ರೊಬಯಾಟಿಕ್ ಆಗಿರುವ ಮೊಸರು ಹೊಟ್ಟೆಯ ಆರೋಗ್ಯವನ್ನು ಚೆನ್ನಾಗಿಡುತ್ತದೆ. ಹೊಟ್ಟೆಗೆ ಸೋಂಕುಗಳ ವಿರುದ್ಧ ಹೋರಾಡಲು ಶಕ್ತಿ ಕೊಡುತ್ತದೆ. ಲ್ಯಾಕ್ಟಿಕ್ ಆ್ಯಸಿಡ್ ಮೊಸರು ಮತ್ತು ಮಜ್ಜಿಗೆಯಲ್ಲಿದ್ದು ಕೀಟಾಣುಗಳ ವಿರುದ್ಧ ಹೋರಾಡುತ್ತದೆ. ಅತಿಸಾರ ಮತ್ತು ಭೇದಿಗೆ ಉತ್ತಮ ಔಷಧ.

ಕೃಪೆ: timesofindia.indiatimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News