ಕೇವಲ 15 ನಿಮಿಷಗಳ ಈ ವ್ಯಾಯಾಮಗಳಿಂದ ಪರಿಪೂರ್ಣ, ಆಕರ್ಷಕ ದೇಹ

Update: 2016-11-03 18:52 GMT

ಶಿಸ್ತಿನ ದೇಹ ಎಂದೂ ಔಟ್ ಆಫ್ ಫ್ಯಾಷನ್ ಆಗುವುದೇ ಇಲ್ಲ. ಈಗಲೂ ನಮ್ಮ ಜೀವನದಲ್ಲಿ ಬಿಡುವಿಲ್ಲದ ಕೆಲಸಗಳ ನಡುವೆ ಸಾಧ್ಯವಾದಷ್ಟು ವ್ಯಾಯಾಮ ಮಾಡಿ ಫಿಟ್ ಆಗಲು ಪ್ರಯತ್ನಿಸುತ್ತೇವೆ. ಪೌಷ್ಠಿಕಾಂಶಗಳಿರುವ ಆಹಾರ ಸೇವಿಸುತ್ತೇವೆ. 15 ನಿಮಿಷದ ವಿಶೇಷ ವ್ಯಾಯಾಮವು ನಿಮಗೆ ಹೇಗೆ ನೆರವಾಗಬಲ್ಲದು ಎಂದು ದೆಹಲಿ ಮೂಲದ ಫಿಟ್ನೆಸ್ ತರಬೇತುದಾರ ಕಿರಣ್ ಕೃಷ್ಣಕುಮಾರ್ ಇಲ್ಲಿ ತಿಳಿಸಿದ್ದಾರೆ.

ಡಾಲ್ಫಿನ್ ಪ್ಲಾಂಕ್

ಡಾಲ್ಫಿನ್ ಪ್ಲಾಂಕ್ ಪೋಸ್ ಡಾಲ್ಫಿನ್ ಪೋಸ್ ಮತ್ತು ಪ್ಲಾಂಕ್ ಪೋಸ್‌ನ ಮಿಶ್ರಣ. ನೆಲದ ಮೇಲೆ ಎರಡೂ ಕೈಗಳನ್ನು ಒತ್ತಿ ಹಿಡಿದು ಮತ್ತು ಕಾಲಿನ ಬೆರಳುಗಳ ತುದಿಯ ಮೇಲಿನ ಭಾರದಲ್ಲಿ ದೇಹಕ್ಕೆ ಸಮತೋಲನ ನೀಡಿ. ನಿಮ್ಮ ಅಂಗೈ ನೆಲಕ್ಕೆ ತಾಗಿರಬೇಕು. ನಿಮ್ಮ ನಿತಂಬವನ್ನು ಮೆಲ್ಲಗೆ ಮೇಲೆತ್ತಿ. ತೋಳುಗಳು ಪರಸ್ಪರ ಸಮಾಂತರವಾಗಿ ನೆಲಕ್ಕೆ ತಾಗಿರಲಿ. ಅಂಗೈ ನೆಲದ ಮೇಲೆ ಸಮತಟ್ಟಾಗಿರಲಿ. ನಿಧಾನವಾಗಿ ಉಸಿರಾಡಿ. ನಿಧಾನವಾಗಿ ನಿಮ್ಮ ಬೆನ್ನನ್ನು ಮೇಲಕ್ಕೆತ್ತಿ ಸ್ವಲ್ಪ ಹೊತ್ತು ಮುಂಗೈ ಪ್ಲಾಂಕ್ ಭಂಗಿಯಲ್ಲಿರಿ.

ಪುಷಪ್‌ಗಳು

ತೂಕವನ್ನು ಕೆಳಗೆ ಮಾಡಿ ಕೈಗಳು ಮತ್ತು ಪಾದಗಳ ಮೇಲೆ ಹಂಚಿ. ಕೈಗಳು ಸಾಮಾನ್ಯವಾಗಿ ತೋಳುಗಳ ಉದ್ದಕ್ಕೆ ಸಮವಾಗಿರಬೇಕು. ದೇಹವನ್ನು ಕೆಳಗೆ ಮಾಡಿ ಹೃದಯ ನೆಲಕ್ಕೆ ತಾಕುವಂತೆ ಮಾಡಿ, ನಂತರ ಮತ್ತೆ ಆರಂಭಿಕ ಭಂಗಿಗೆ ಮರಳಿ. ನೆಲದ ಕಡೆಗೆ ಹೋಗುವಾಗ ಉಸಿರಾಡಿ. ಮೇಲೆ ಬರುವಾಗ ಉಸಿರು ಬಿಡಿ. ಇದನ್ನು ಹಲವು ಸಲ ಮಾಡಿ.

ತೋಳಿನ ಪ್ಲಾಂಕಿಂಗ್

ಎತ್ತರದ ಪ್ಲಾಂಕ್ ಪೊಸಿಷನ್‌ನಿಂದ ಆರಂಭಿಸಿ. ನಿಮ್ಮ ಮಣಿಕಟ್ಟು ನಿಮ್ಮ ತೋಳಿನ ಅಡಿಯಲ್ಲಿರಲಿ ಮತ್ತು ನಿಮ್ಮ ಪಾದದ ಮೇಲೆ ನಿಲ್ಲಿ. ಪ್ರತೀ ತೋಳನ್ನು ಮತ್ತೊಂದು ಕೈನಿಂದ ಸ್ಪರ್ಶಿಸಿ. ಇದೇ ವ್ಯಾಯಾಮವನ್ನು ಒಂದು ನಿಮಿಷ ಮಾಡಿ.

ಮುಂದೋಳು ಸೈಡ್ ಪ್ಲಾಂಕ್

ಎಡಬದಿಗೆ ಕಾಲು ವಿಸ್ತಾರವಾಗಿರುವಂತೆ ಮಲಗಿ ನಿಮ್ಮ ಎಡ ಮೊಣಕೈ ನೇರವಾಗಿ ನಿಮ್ಮ ತೋಳಿನ ಅಡಿಯಲ್ಲಿರಲಿ. ನಿಮ್ಮ ಬಲ ಕೈ ಕೆಳಗಿರಲಿ. ನಿಮ್ಮ ಬಲ ತೋಳನ್ನು ಮೇಲೆತ್ತಿ ನಿಮ್ಮ ತಲೆಯ ಹಿಂದಕ್ಕೆ ಇಡಿ. ನಿಮ್ಮ ಎದೆಭಾಗವನ್ನು ತಿರುಗಿಸುವ ಮೂಲಕ ಮೊಣಕೈ ಎಡಗೈ ಬಳಿ ಬರುವಂತೆ ಮಾಡಿ. ನಿಮ್ಮ ನಿತಂಬ ನೆಲಕ್ಕೆ ತಾಗದಂತೆ ಗಮನಹರಿಸಿ.

ಬೈಸಿಕಲ್ ಭಂಗಿ

ನೆಲದ ಮೇಲೆ ಮಲಗಿ ಮತ್ತು ನಿಮ್ಮ ಕೈಗಳನ್ನು ತಲೆಯ ಹಿಂದೆ ಇಡಿ ಮತ್ತು ಕಾಲುಗಳನ್ನು ಮೇಲೆತ್ತಿ. ನಿಮ್ಮ ಬಲ ಮೊಣಕೈನಿಂದ ಎಡ ಮೊಣಕಾಲಿಗೆ ಸ್ಪರ್ಶಿಸಿ. ಈಗ ನಿಮ್ಮ ಎಡಮೊಣಕೈಯನ್ನು ಬಲ ಮೊಣಕಾಲಿಗೆ ಸ್ಪರ್ಶಿಸಇ. ವಿರುದ್ಧ ಮೊಣಕಾಲು ಮತ್ತು ತೋಳು ಸ್ಪರ್ಶಿಸುವಂತೆ ನೋಡಿ. ಕನಿಷ್ಠ ಸಮೀಪಕ್ಕೆ ಬರಲಿ.

ದೋಣಿ ಭಂಗಿ

ನಿಮ್ಮ ಬೆನ್ನಿನ ಹಿಂದಕ್ಕೆ ಮಲಗಿ ಪಾದಗಳನ್ನು ಜೊತೆಯಾಗಿಡಿ ಮತ್ತು ತೋಳುಗಳು ನಿಮ್ಮ ದೇಹದ ಪಕ್ಕವಿರಲಿ. ಎದೆಯನ್ನು ಸ್ವಲ್ಪವೇ ಮೇಲೆತ್ತಿ ಮತ್ತು ಪಾದವನ್ನೂ ನೆಲದಿಂದ ಮೇಲೆತ್ತಿ. ನಿಮ್ಮ ತೋಳುಗಳನ್ನು ಪಾದದ ಕಡೆಗೆ ಕೊಂಡೊಯ್ಯಿರಿ. ಆಳವಾಗಿ ಉಸಿರುಬಿಡುತ್ತಾ ಸುಲಭವಾಗಿ ಈ ಭಂಗಿಯಲ್ಲಿರಿ. ಸುಸ್ತಾದಾಗ ನಿಧಾನವಾಗಿ ನೆಲದ ಕಡೆಗೆ ಬಂದು ರಿಲ್ಯಾಕ್ಸ್ ಆಗಿ.

ಕೃಪೆ: timesofindia.indiatimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News