ದೇಹ ಶುದ್ಧ ಮಾಡಿ, ಕೊಬ್ಬು ಕರಗಿಸುವ 10 ಪಾನೀಯಗಳು

Update: 2016-11-05 09:35 GMT

ನೀರು ಡಿಟಾಕ್ಸ್ ಮಾಡಿ ಕುಡಿಯಲು ನಿಮ್ಮ ನೀರಿಗೆ ಸ್ಟ್ರಾಬೆರಿ ಮತ್ತು ಲಿಂಬೆ ಹಾಕಿ ರುಚಿಕರವಾಗಿಸಿ. ಲಿಂಬೆ ಜೀರ್ಣಕ್ರಿಯೆಗೆ ಆರೋಗ್ಯಕರ ವಿಟಮಿನ್ ಸಿ ಕೊಡುತ್ತದೆ. ಸ್ಟ್ರಾಬೆರಿಯಲ್ಲಿ ಆಂಟಿ ಆಕ್ಸಿಡಂಟ್ ಹೆಚ್ಚಾಗಿದ್ದು ಪಾನೀಯಕ್ಕೆ ಸಿಹಿಯಾದ ರುಚಿ ಬೆರೆಸುತ್ತದೆ.

ಕಿತ್ತಳೆ ಡಿಟಾಕ್ಸ್ ನೀರು ಜೀರ್ಣಕ್ರಿಯೆಗೆ ಬಹಳ ಉತ್ತಮವಾಗಿದ್ದು, ದೇಹದಲ್ಲಿ ರಕ್ತದ ಪ್ರಸರಣ ಸುಧಾರಿಸಿ ಕೆಟ್ಟ ಶ್ವಾಸವನ್ನು ನಿವಾರಿಸಲು ನೆರವಾಗುತ್ತದೆ. ನೀವು ಕಿತ್ತಳೆಯನ್ನು ಕೇವಲ ತುಂಡು ಮಾಡಿ ಸೇವಿಸಬಾರದು. ಶುಂಠಿ ಬೆರೆಸಿದರೆ ಅದರಲ್ಲಿನ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಸೌತೆಕಾಯಿ ನೀರು ಮಿಶ್ರಣ ತಯಾರಿಸಲು, ಸೌತೆಕಾಯಿ ತುಂಡುಗಳು, ಲಿಂಬೆ, ಪುದೀನ ಎಲೆ ಮತ್ತು ಗ್ರೇಪ್‌ಫ್ರುಟ್‌ಗಳನ್ನು ಜೊತೆಯಾಗಿ ಬೆರೆಸಿ. ಸೌತೆಕಾಯಿ ದೇಹದಲ್ಲಿ ಟಾಕ್ಸಿನ್‌ಗಳನ್ನು ನಿವಾರಿಸಿದರೆ, ಲಿಂಬೆ ವಿಟಮಿನ್ ಸಿ ಬೆರೆಸುತ್ತದೆ. ಎಲೆಗಳು ತಾಜಾ ರುಚಿ ಕೊಡುತ್ತವೆ. ಗ್ರೇಪ್‌ಫ್ರುಟ್ ಕೊಬ್ಬು ಕರಗಿಸುತ್ತದೆ.

ಸೇಬಿನ ಡಿಟಾಕ್ಸ್ ನೀರು ಟಾಕ್ಸಿನ್ ನಿವಾರಿಸಲು ಸಹಕಾರಿ. ಕೋಶಗಳಿಗೆ ಪೋಷಣೆ ನೀಡಿ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಚೆರ್ರಿಗಳ ಡಿಟಾಕ್ಸ್ ಒಂದು ಸೀಸನ್‌ನಲ್ಲಿ ಮಾತ್ರ ಸಿಗುವುದಾದರೂ, ಕ್ಯಾನ್ಸರ್ ಮತ್ತು ಸಂಧಿವಾತದಂತಹ ರೋಗದ ರೋಗಾಣುಗಳ ವಿರುದ್ಧ ಹೋರಾಡಲು ಸಹಕಾರಿ.

ರಾಸ್ಬೆರಿ ಡಿಟಾಕ್ಸ್ ನೀರನ್ನು ಲಿಂಬೆ ಜೊತೆಗೆ ಸೇವಿಸಬಹುದು. ಅದಕ್ಕೆ ಖರ್ಜೂರ ಬೆರೆಸಿದರೆ ಸಿಹಿಯಾಗುತ್ತದೆ. ಆಂಟಿ ಆಕ್ಸಿಡಂಟ್ ಮತ್ತು ತೆಳುಕಾಯಕ್ಕಾಗಿ ಕುಡಿಯುವ ಪಾನೀಯವಿದು.

ಮಾರ್ನಿಂಗ್ ಡಿಟಾಕ್ಸ್ ಎಂದರೆ ಬೆಳಗ್ಗೆ ಎದ್ದ ಕೂಡಲೇ ದೇಹಕ್ಕೆ ಕೊಡಬೇಕಾದ ಪಾನೀಯ. ಲಿಂಬೆ ನೀರು ಉತ್ತಮ. ಲಿಂಬೆಯನ್ನು ಬೆಳಗಿನ ಜಾವ ಕುಡಿಯವುದರಿಂದ ದೇಹ ಹೈಡ್ರೇಟ್ ಆಗುವುದು ಮತ್ತು ಜೀರ್ಣಕ್ರಿಯೆ ಸುವ್ಯವಸ್ಥಿತವಾಗಿ ನಡೆಯುವಂತೆ ಮಾಡಬಹುದು. ಲಿಂಬೆ ನೀರಿಗೆ ಜೇನುತುಪ್ಪ ಬೆರೆಸಬಹುದು.

ಗ್ರೀನ್ ಟೀಗೆ ಹಣ್ಣು ಬೆರೆಸುವುದು ಆರೋಗ್ಯಕರವಾಗಿರುತ್ತದೆ. ಇದು ಬಹಳ ಸರಳ ಪಾನೀಯವೂ ಹೌದು.

ಡಿಟಾಕ್ಸ್ ನೀರು ಬೇಸಗೆಯ ಬಿಸಿಗೆ ಅತ್ಯುತ್ತಮ. ಕಲ್ಲಂಗಡಿ ಹಣ್ಣಿನ ಡಿಟಾಕ್ಸ್ ನೀರನ್ನು ಬೆರ್ರಿಗಳು ಮತ್ತು ಲಿಂಬೆ ಜೊತೆಗೆ ಸೇವಿಸಬಹುದು.

ಕೃಪೆ: food.ndtv.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News