ಒಂದು ತಿಂಗಳಲ್ಲಿ ನಿಮ್ಮ ಹೃದಯದ ಆರೋಗ್ಯ ಸುಧಾರಿಸಲು ಹೀಗೆ ಮಾಡಿ
ನಿಮಗೆ ಹೃದಯ ರೋಗವಿದೆ ಎಂದು ತಿಳಿಯುವುದು ಬಹಳ ಆಘಾತಕಾರಿ ಸುದ್ದಿಯಾಗಿರಬಹುದು. ಆದರೆ ನೀವು ಹತಾಶರಾಗುವ ಮೊದಲು ನಿಮ್ಮ ಸ್ಥಿತಿಯನ್ನು ಸಂಪೂರ್ಣ ತಿರುಗಿಸಲು ಪರಿಣಾಮಕಾರಿ ಹಾದಿಗಳನ್ನು ಕಂಡುಹಿಡಿಯಬೇಕು. ಇಂಟಗ್ರೇಟಿವ್ ಮೆಡಿಸಿನ್‌ನ ಡ್ಯೂಕ್ ಕೇಂದ್ರವು ಆರೋಗ್ಯ ಅಪಾಯಕ್ಕೆ ಸಹಜವಾದ ಪರಿಹಾರಗಳನ್ನು ಕಂಡುಹಿಡಿದಿದ್ದಾರೆ. ಈ ಪರಿಹಾರದಿಂದ ನೀವು ಹೃದಯ ರೋಗದ ಅಪಾಯವನ್ನು ಶೇ. 60ರಷ್ಟು ಕಡಿಮೆ ಮಾಡಬಹುದು. ಇದು ಔಷಧ ಅಥವಾ ಶಸ್ತ್ರಚಿಕಿತ್ಸೆಗಿಂತಲೂ ಉತ್ತಮ ದಾರಿ. ಇಲ್ಲಿದೆ ವಿವರ,
ಆಹಾರದಲ್ಲಿನ ಬದಲಾವಣೆ
► ಗ್ರೀನ್ ಟೀ ಕುಡಿಯುವುದರಿಂದ ಸಿಗುವ ಶಕ್ತಿಯುತ ಆಂಟಿ ಆಕ್ಸಿಡಂಟ್‌ಗಳು ರಕ್ತದೊತ್ತಡ ಮತ್ತು ಕೊಲೆಸ್ಟರಾಲ್ ಕಡಿಮೆ ಮಾಡಬಲ್ಲದು.
► ನೀವು ಸೇವಿಸುವ ಆಹಾರದ ಕ್ಯಾಲರಿಗಳ ಶೇ. 25ರಷ್ಟು ಕಡಿಮೆ ಕೊಬ್ಬನ್ನು ಸೇವಿಸಿ. ಮೋನೋಸ್ಯಾಚುರೇಟೆಡ್ ಕೊಬ್ಬುಗಳ್ನು,
ಒಮೆಗಾ 3ಗಳನ್ನು ಸೇವಿಸಿ. ಆದರೆ ಟ್ರಾನ್ಸ್ ಮತ್ತು ಸ್ಯಾಚುರೇಟೆಡ್ ಕೊಬ್ಬುಗಳನ್ನು ಸೇವಿಸಬೇಡಿ. ಒಮೆಗಾ 6 ಸ್ವಲ್ಪ ಮಟ್ಟಿಗೆ ಸೇವಿಸಿ.
► ಎಕ್ಸ್ಟ್ರಾ ವರ್ಜಿನ್ ಆಲಿವ್ ಎಣ್ಣೆಯನ್ನೇ ಬಳಸಿ. ಸಲಾಡ್‌ಗಳಲ್ಲಿ ಮಾತ್ರವಲ್ಲ, ತುಪ್ಪ ಮತ್ತು ಮಾರ್ಗರಿನ್‌ಗೆ ಬದಲಾಗಿ ಆಲಿವ್ ಎಣ್ಣೆ ಬಳಸಿ. ಬ್ರೆಡ್‌ಗೆ ಬಳಸಲೂ ಬೆಣ್ಣೆ ಬೇಡ.
► ಹೆಚ್ಚು ಫೈಬರ್ ಅಂಶ ಸೇವಿಸಿ. ಇಡೀ ಗೋಧಿ, ಓಟ್ಸ್ ಮತ್ತು ಬೀನ್ಸ್ ಉತ್ತಮ.
► ಮೀನು ತಿನ್ನಿ. ಮೀನಿನಲ್ಲಿರುವ ಒಮೆಗಾ 3 ಫ್ಯಾಟಿ ಆಸಿಡ್ಸ್ ಆರೋಗ್ಯಕ್ಕೆ ಉತ್ತಮ.
► ದಿನಕ್ಕೆ ಎರಡು ಬಾರಿ ಹಣ್ಣಿನ ರಸ ಸೇವಿಸಿ. ಕಿತ್ತಳೆ ಹಣ್ಣಿನಲ್ಲಿ ಫಾಲಿಕ್ ಆಸಿಡ್ ಇದ್ದು, ಹೋಮೋಸಿಸ್ಟೀನ್ ಕಡಿಮೆ ಮಾಡುತ್ತದೆ. ದ್ರಾಕ್ಷಿ ಹಣ್ಣಿನಲ್ಲಿರುವ ಆಂಟಿ ಆಕ್ಸಿಡಂಟ್‌ಗಳು ಆರೋಗ್ಯಕರ ಹೃದಯವನ್ನು ಪೋಷಿಸುತ್ತದೆ.
► ತಾಜಾ ತರಕಾರಿಗಳನ್ನು ಸೇವಿಸುವುದರಿಂದ ಹೃದಯದ ಆರೋಗ್ಯಕ್ಕೆ ಅಗತ್ಯವಿರುವ ಫೀಟೋಕೆಮಿಕಲ್ಸ್ ಸಿಗುತ್ತದೆ.
► ಪ್ರತೀ ವಾರ ಔದು ಔನ್ಸ್‌ನಷ್ಟು ಕಡಲೆಕಾಳುಗಳನ್ನು ಸೇವಿಸಬೇಕು. ಫ್ಲಾಕ್ಸ್‌ಸೀಡ್ ಉತ್ತಮ.
► ಸೋಯಾ ಪ್ರೊಟೀನ್ ದೇಹದಲ್ಲಿ ಕೊಲೆಸ್ಟರಾಲ್ ಮಟ್ಟವನ್ನು ಕರಗಿಸುತ್ತದೆ.
ಇತರ ಜೀವನ ಕ್ರಮ ಬದಲಾವಣೆ
ಈ ಆಹಾರಗಳನ್ನು ನಿಮ್ಮ ನಿತ್ಯದ ಜೀವನದಲ್ಲಿ ಸೇವಿಸುವ ಜೊತೆಗೆ ಕೆಲವು ಅಭ್ಯಾಸಗಳನ್ನೂ ನೀವು ಬದಲಿಸಿಕೊಳ್ಳಬೇಕು.
► ವ್ಯಾಯಾಮ ಮಾಡಿ. 15 ನಿಮಿಷಗಳ ಕಾಲ ದಿನಕ್ಕೆ 2-3 ಬಾರಿ ನಡೆದರೂ ಸಾಕಾಗುತ್ತದೆ.
► ಒತ್ತಡ ಬೇಡ. ಒತ್ತಡದಿಂದಲೇ ಹೆಚ್ಚಾಗಿ ಹೃದಯರೋಗ ಬರುತ್ತದೆ.
► ಧ್ಯಾನ ಮಾಡಿ. ನಿತ್ಯವೂ ಕಣ್ಣನ್ನು ಮುಚ್ಚಿ ಕನಿಷ್ಠ ಐದು ನಿಮಿಷಗಳ ಕಾಲ ಉಸಿರಾಟದ ಮೇಲೆ ಗಮನ ನೀಡಿ.
► ಸಾಮಾಜಿಕವಾಗಿ ಸಕ್ರಿಯವಾಗಿರಿ. ಸ್ನೇಹಿತರು ಮತ್ತು ಕುಟುಂಬದ ಜೊತೆಗೆ ಇರುವುದು ಒತ್ತಡ ಮತ್ತು ಖಿನ್ನತೆಯನ್ನು ಕಡಿಮೆಗೊಳಿಸುತ್ತದೆ.
► ಪೌಷ್ಠಿಕಾಂಶಗಳಿರುವ ವಸ್ತುಗಳನ್ನು ಸೇವಿಸಿ. ಫಾಲಿಕ್ ಆಸಿಡ್, ವಿಟಮಿನ್ ಸಿ, ವಿಟಮಿನ್ ಬಿ6 ಇರುವ ಔಷಧಿ ಸೇವಿಸಬಹುದು. ಸೆಲೆನಿಯಂ ಕೂಡ ಸೇವಿಸಬೇಕು. ಈ ಆಂಟಿ ಆಕ್ಸಿಡಂಟ್ ಕೆಟ್ಟ ಕೊಲೆಸ್ಟರಾಲ್‌ಗಳನ್ನು ನಿವಾರಿಸುತ್ತದೆ ಮತ್ತು ಹೆಪ್ಪುಗಟ್ಟಿದ ರಕ್ತವನ್ನು ಸರಿಪಡಿಸುತ್ತದೆ.
ಹೃದಯ ರೋಗಕ್ಕೆ ಇರುವ ಸಹಜವಾದ ಪರಿಹಾರಗಳ ಲಾಭವನ್ನು ಪಡೆಯಲು ಮರೆಯಬೇಡಿ. ಬೆಳ್ಳುಳ್ಳಿ ಮತ್ತು ಲವಂಗವೂ ಹೃದಯ ಸಮಸ್ಯೆಯನ್ನು ಕಡಿಮೆ ಮಾಡುವ ಶಕ್ತಿ ಹೊಂದಿವೆ.
ಕೃಪೆ:www.stethnews.com