ನಿಮಗೇ ಗೊತ್ತಿಲ್ಲದೆ ನೀವು ಮೂತ್ರ ಮಾಡುತ್ತಿದ್ದೀರಾ ?

Update: 2016-12-10 06:23 GMT

ನಮ್ಮ ವೃತ್ತಿ ಹಾಗೂ ವೈಯಕ್ತಿಕ ಒತ್ತಡದಲ್ಲಿ ನಾವು ನಮ್ಮ ದೇಹದಲ್ಲಿನ ಬದಲಾವಣೆಗೆ ಸಂಬಂಧಿಸಿದ ಕೆಲವು ಅಂಶಗಳನ್ನು ಮರೆಯುತ್ತೇವೆ. ಇದು ಮುಜುಗರ ತರಬಹುದು. ನಿಮಗೆ ಅರಿವಿಲ್ಲದಂತೇ ಮೂತ್ರ ಸೋರುವುದು ಇವುಗಳಲ್ಲೊಂದು. ಇದನ್ನು ಒತ್ತಡದ ಮೂತ್ರ ಸೋರಿಕೆ ಎನ್ನುತ್ತೇವೆ. ಇದು ಒಬ್ಬಂಟಿಯಾಗಿರಲು ಹಾಗೂ ಖಿನ್ನತೆಗೆ ಕಾರಣವಾಗಬಹುದು.

1. ಮಲಬದ್ಧತೆ: ಇಂಥ ಮೂತ್ರ ಸೋರಿಕೆಗೆ ಮುಖ್ಯ ಕಾರಣ ಮಲಬದ್ಧತೆ. ಇದು ಹೊಟ್ಟೆಯ ಒತ್ತಡವನ್ನು ಹೆಚ್ಚಿಸುತ್ತದೆ ಹಾಗೂ ನರಗಳನ್ನು ಪ್ರಚೋದಿಸುತ್ತದೆ. ಇದು ನಿಯತವಾಗಿ ಮೂತ್ರ ಸೋರಿಕೆಗೆ ಕಾರಣವಾಗುತ್ತದೆ. ನೀವು ನಗುವಾಗ, ನರಗಳ ಒತ್ತಡ ಹೆಚ್ಚಿ ಮೂತ್ರ ಸೋರಿಕೆಗೆ ಕಾರಣವಾಗುತ್ತದೆ.

2. ಕೆಲ ಆಹಾರ ಹಾಗೂ ಪಾನೀಯವೂ ಇದಕ್ಕೆ ಕಾರಣವಾಗಬಹುದು. ಕೆಫಿನ್, ಮಸಾಲೆಯುಕ್ತ ಆಹಾರ, ಆಲ್ಕೊಹಾಲ್, ಕಾರ್ಬೊಹೈಡ್ರೇಟೆಡ್ ಪಾನೀಯಗಳು ಇಂಥ ಸಮಸ್ಯೆಯನ್ನು ಹೆಚ್ಚಿಸುತ್ತವೆ.

3. ಅಧಿಕ ದ್ರವಪದಾರ್ಥ ಸೇವನೆ: ದ್ರವ ಆಹಾರದ ಅಧಿಕ ಸೇವನೆಯೂ ಕೆಲವೊಮ್ಮೆ ಈ ಸಮಸ್ಯೆ ಹೆಚ್ಚಿಸಬಹುದು. ಆದರೆ ನೀರಿನ ಅಂಶ ಕಡಿಮೆಯಾಗದಂತೆ ಎಚ್ಚರ ವಹಿಸಿ.

4. ಆಹಾರ ಅಸಮತೋಲನ: ಅಧಿಕ ಸಂಸ್ಕರಿತ ಆಹಾರ ಸೇವನೆ, ಅಧಿಕ ಸಕ್ಕರೆ ಅಂಶದ ಆಹಾರ, ಸ್ಯಾಚುರೇಟೆಡ್ ಕೊಬ್ಬು ಕೂಡಾ ಅಪಾಯಕಾರಿ. ಇದು ಅನಿಯಂತ್ರಿತ ಮೂತ್ರ ಸೋರಿಕೆಗೆ ಕಾರಣವಾಗುತ್ತದೆ.

5. ಜಠರದ ಸ್ನಾಯು ದುರ್ಬಲತೆ ಕೂಡಾ ಇದಕ್ಕೆ ಕಾರಣವಾಗಬಹುದು. ಈ ಹಿನ್ನೆಲೆಯಲ್ಲಿ ಇದನ್ನು ಬಲಗೊಳಿಸಲು ನಿಯತವಾಗಿ ವ್ಯಾಯಾಮ ಮಾಡಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News