ಪ್ರತಿ ಮುಂಜಾನೆ ವ್ಯಾಯಾಮ ಉತ್ತಮ

Update: 2016-12-10 07:43 GMT

ಪ್ರತಿ ದಿನ ಮುಂಜಾನೆ ವ್ಯಾಯಾಮ ಉತ್ತಮ. ಆದರೆ ಇದಕ್ಕೆ ಪೂರಕವಾಗಿ ಅದಕ್ಕಿಂತಲೂ ಮಾಡಬೇಕಾದ ಕೆಲವು ಕ್ರಮಗಳಿವೆ. ಯಾವುದು ನೋಡಿ.

ನೀರು ಸೇವನೆ:

ನೀವು ವ್ಯಾಯಾಮ ಮಾಡುವ ಮುನ್ನ ಸಾಕಷ್ಟು ನೀರು ಸೇವಿಸಿ. ನಿಮ್ಮ ವಯಸ್ಸು, ಲಿಂಗ, ತೂಕ, ಎತ್ತರಕ್ಕೆ ಅನುಗುಣವಾಗಿ ಈ ಪ್ರಮಾಣ ಬದಲಾಗಬಹುದು. ಜಿಮ್‌ಗೆ ಹೋಗುವ ಅರ್ಧ ಗಂಟೆ ಮುಂಚೆ ಕನಿಷ್ಠ 590 ಮಿಲಿಲೀಟರ್ ನೀರು ಸೇವಿಸಿ. ಇದೇ ವೇಳೆ ನೀರು ಅತಿ ಎನಿಸದಂತೆ ನೋಡಿಕೊಳ್ಳಿ.

2. ಕಪ್ಪು ಕಾಫಿ:

ಕಾಫಿ ಚೈತನ್ಯದಾಯಕ ಪೇಯ. ಆಹಾರದಿಂದ ನಿಮ್ಮ ದೇಹ ಶಕ್ತಿ ಗಳಿಸಿಕೊಳ್ಳುವಂತೆ ಇದು ಉತ್ತೇಜಿಸುತ್ತದೆ. ಅಧಿಕ ಕೊಬ್ಬನ್ನು ಕರಗಿಸುತ್ತದೆ. ಕೋಶಗಳು ಕೊಬ್ಬಿನ ಆಸಿಡ್ ಕ್ರೋಡೀಕರಿಸಲು ಇದು ನೆರವಾಗುತ್ತದೆ. ಇದರಿಂದ ನಿಮ್ಮ ಕ್ಷಮತೆ ಶೇಕಡ 12ರಷ್ಟು ಹೆಚ್ಚುತ್ತದೆ.

3. ಚೆನ್ನಾಗಿ ನಿದ್ದೆ ಮಾಡಿ:

ಉತ್ತಮ ಆರೋಗ್ಯಕ್ಕೆ ಉತ್ತಮ ನಿದ್ರೆ ಅತ್ಯವಶ್ಯಕ.

4. ಜಿಮ್‌ಗೆ ಹೋಗುವ ಮುನ್ನ ತಿನ್ನಿ:

ಸಾಮಾನ್ಯವಾಗಿ ಜಿಮ್‌ಗೆ ಹೋಗುವ ಮುನ್ನ ಆಹಾರ ಸೇವನೆ ಪದ್ಧತಿ ಇಲ್ಲ. ಎದ್ದು, ಬಟ್ಟೆ ಹಾಕಿಕೊಂಡು ತಕ್ಷಣ ಹೊರಟು ಬಿಡುತ್ತೇವೆ. ಆದರೆ ಒಳ್ಳೆಯ ಫಲಿತಾಂಶಕ್ಕಾಗಿ, ಜಿಮ್‌ಗೆ ಹೋಗುವ ಮುನ್ನ ಆಹಾರ ಸೇವನೆ ಅಗತ್ಯ, ಬಾಳೆಹಣ್ಣು, ಸೇಬು, ಕಡಿಮೆ ಸಕ್ಕರೆ ಅಂಶದ ಪ್ರೊಟೀನ್ ಬಾರ್, ಶೇಕ್‌ಗಳು ಉತ್ತಮ.

5. ನಿಮ್ಮ ದೈನಂದಿನ ದಿನಚರಿಯನ್ನು ದಾಖಲಿಸಿ ಇಟ್ಟುಕೊಳ್ಳಿ. ಇದು ನಿಮ್ಮ ಕ್ಷಮತೆಯನ್ನು ಅಳೆದುಕೊಳ್ಳಲು ಸಹಾಯವಾಗುತ್ತದೆ ಎನ್ನುವುದು ತಜ್ಞರ ಅಭಿಮತ.

6. ಉಡುಪು ಬಗ್ಗೆ ಇರಲಿ ಗಮನ:

ದೈಹಿಕ ವ್ಯಾಯಾಮಕ್ಕೆ ತಕ್ಕ ಉಡುಪು ಹಾಕಿಕೊಳ್ಳುವ ಬಗ್ಗೆ ಗಮನ ಹರಿಸಿ. ಇದು ಧನಾತ್ಮಕ ಪರಿಣಾಮ ಬೀರುತ್ತದೆ. ಒಳ್ಳೆಯದಾಗಿ ವ್ಯಾಯಾಮ ಮಾಡಲು ಅನುಕೂಲವಾಗುವ ಜತೆಗೆ, ಹೆಚ್ಚಿನ ಸಾಧನೆಗೆ ಪ್ರೇರೇಪಿಸುತ್ತದೆ.

7. ದಿನಚರಿಯನ್ನು ಯೋಜಿತವಾಗಿ ರೂಪಿಸುವುದು ಕೂಡಾ ಅಗತ್ಯ.

8. ಪ್ಲೇಲಿಸ್ಟ್ ಅಪ್‌ಡೇಟ್ ಮಾಡಿಕೊಳ್ಳಿ. ಇದು ನಿಮ್ಮ ಮನಸ್ಸಿಗೆ ಮುದ ನೀಡಬಲ್ಲದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News