ಬಡವರ ಬಾದಾಮ್ ನೆಲಗಡಲೆ, ಪೌಷ್ಠಿಕಾಂಶದಲ್ಲಿ ಶ್ರೀಮಂತ !

Update: 2017-04-01 09:04 GMT

ಹೊಸದಿಲ್ಲಿ, ಎ. 1: ಕಡಲೆಕಾಯಿ ಯಾರಿಗಿಷ್ಟವಿಲ್ಲ ಹೇಳಿ. ಆದರೆ ಈ ಕಡಲೆಕಾಯಿ ಆರೋಗ್ಯದ ಖನಿಜ ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಅದನ್ನು ಸೂಪರ್ ಫುಡ್ ಎಂದೂ ಹೇಳಲಾಗುತ್ತದೆ. ಕೆಟ್ಟ ಕೊಲೆಸ್ಟ್ರಾಲನ್ನು ಕಡಿಮೆಗೊಳಿಸಿ ವಯೋ ಸಂಬಂಧಿತ ಹಲವು ಸಮಸ್ಯೆಗಳನ್ನು ನಿವಾರಿಸಬಹುದಾದರೂ ಆರೋಗ್ಯಕ್ಕೆ ಉತ್ತಮವೆಂದು ಹೇರಳವಾಗಿ ತಿನ್ನಕೂಡದು ಮಿತವಾಗಿ ತಿನ್ನಬೇಕು ಎಂದು ಹೇಳುತ್ತಾರೆ ತಜ್ಞರು.

ಕಡಲೆಕಾಯಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆ್ಯಂಟಿ-ಓಕ್ಸಿಡೆಂಟ್ ವಿಟಮಿನ್-ಇ, ಮ್ಯಾಗ್ನೀಸಿಯಂ ಹಾಗೂ ಝಿಂಕ್ ಇದೆ. ಕಡಲೆಕಾಯಿಯಲ್ಲಿ ಸಾಕಷ್ಟು ಪ್ರೊಟೀನ್ ಇದ್ದು 30 ಗ್ರಾಂ ಕಡಲೆ ಕಾಯಿ ಸೇವನೆಯಿಂದ ದೇಹಕ್ಕೆ 8 ಗ್ರಾಂ ಪ್ರೊಟೀನ್ ದೊರೆಯುತ್ತದೆ. ಇದಲ್ಲದೆ ನಾರಿನಂಶ, ಉತ್ತಮ ಕೊಬ್ಬು, ಪೊಟಾಶಿಯಂ ಕೂಡ ಇದೆ ಇದರಲ್ಲಿ.

ಕಡಲೆಕಾಯಿಯಲ್ಲಿರುವ ಒಲೇಕ್ ಆಸಿಡ್ ದೇಹದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಯಂತ್ರಿಸುತ್ತದೆ ಹಾಗೂ ಉರಿಯೂತವನ್ನೂ ತಡೆಗಟ್ಟುವುದು. ಚರ್ಮದ ಆರೋಗ್ಯ ಕಾಪಾಡುವಲ್ಲಿಯೂ ಕಡಲೆಕಾಯಿ ಸಹಕಾರಿ ಎನ್ನುತ್ತಾರೆ ತಜ್ಞರು.

ಕಡಲೆಕಾಯಿಯಲ್ಲಿ ನಿಯಾಸಿನ್, ರೆಸ್ವೆರಟ್ರೊಲ್ ಮತ್ತು ವಿಟಮಿನ್ ಇ ಇರುವುದರಿಂದ ಅದು ಅಲ್ಝೀಮರ್ಸ್ ಮತ್ತಿತರ ವಯೋಸಂಬಂಧಿ ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ.

ಕಡಲೆಕಾಯಿಯಲ್ಲಿರುವ ಪ್ರೊಟೀನ್ ಹಾಗೂ ನಾರಿನಂಶ ನಿಮ್ಮ ಹೊಟ್ಟೆ ತುಂಬಿದಂತೆ ಮಾಡುವುದರಿಂದ ಬೇಗನೇ ಹಸಿವಾಗದು. ಆದುದರಿಂದ ಇದು ದೇಹ ತೂಕ ಕಡಿಮೆಗೊಳಿಸುವಲ್ಲೂ ನೆರವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News