ಸರಳ, ಸುಲಭ : ಇನ್ನು ಕೇವಲ ಈ 'ಬಲೂನ್' ಗಳೇ ನಿಮ್ಮ ತೂಕ ಇಳಿಸುತ್ತವೆ

Update: 2017-05-19 05:59 GMT

ಸ್ಥೂಲಕಾಯದವರಿಗೆ ತೂಕ ಇಳಿಸಿಕೊಳ್ಳಲು ಇಂಟ್ರಾಗ್ಯಾಸ್ಟ್ರಿಕ್ ಬಲೂನುಗಳನ್ನು ದಶಕಗಳ ಹಿಂದಿನಿಂದಲೇ ಬಳಸಲಾಗುತ್ತಿದೆ. ನೀರಿನಿಂದ ತುಂಬಿರುವ ಈ ಬಲೂನುಗಳು ಹಸಿವನ್ನು ಕಡಿಮೆಗೊಳಿಸಿ ಡಯಟಿಂಗ್ ಸುಲಭಗೊಳಿಸುತ್ತದೆ. ಆದರೆ ಈ ಇಂಟ್ರಾ ಗ್ಯಾಸ್ಟ್ರಿಕ್ ಬಲೂನುಗಳನ್ನು ಇಲ್ಲಿಯ ತನಕ ಶಸ್ತ್ರಕ್ರಿಯೆಯ ಮೂಲಕವೇ ರೋಗಿಯ ಹೊಟ್ಟೆಯಲ್ಲಿ ಇಡಲಾಗುತ್ತಿತ್ತು. ಇದು ದುಬಾರಿ ಪ್ರಕ್ರಿಯೆಯೂ ಆಗಿತ್ತು.

ಆದರೆ ರೋಮ್ ನಗರದಲ್ಲಿರುವ ಸಾಪಿಯೆಂಝಾ ವಿಶ್ವವಿದ್ಯಾಲಯದಲ್ಲಿ ಪ್ರಾಯೋಗಿಕ ಔಷಧಿ ವಿಭಾಗದ ಸಂಶೋಧಕಿ ರಾಬರ್ಟಾ ಐಯೆಂಕ ಅವರು ಸಂಶೋಧಿಸಿದ ಬಲೂನ್ ಒಂದನ್ನು ರೋಗಿಗಳು ಮೊದಲು ನುಂಗುತ್ತಾರೆ ನಂತರ ಅದರೊಳಗೆ ದ್ರವವನ್ನು ತುಂಬಲಾಗುತ್ತದೆ. ತಮ್ಮ ಈ ಪ್ರಯೋಗಕ್ಕೆ ಅವರು ಅತಿಯಾದ ದೇಹ ತೂಕ 42 ಮಂದಿ (29 ಪುರುಷರು ಹಾಗೂ 13 ಮಹಿಳೆಯರು) ಅತಿಯಾದ ದೇಹ ತೂಕ ಹೊಂದಿದವರನ್ನು ಆಯ್ದುಕೊಂಡಿದ್ದರು. ಬಲೂನಿಗೆ ಕ್ಯಾಥಟರ್ ಅಳವಡಿಸಿ ಕ್ಯಾಪ್ಸೂಲ್ ನಂತೆ ಮಡಚಲಾಗುತ್ತದೆ. ವೈದ್ಯರೊಬ್ಬರು ಸಣ್ಣ ಟ್ಯೂಬ್ ಒಂದರ ಮುಖಾಂತರ ಬಲೂನಿಗೆ ನೀರು ತುಂಬಿಸುತ್ತಾರೆ. ನಂತರ ಅದನ್ನು ಬಾಯಿಯಿಂದ ನೂಲಿನ ಮೂಲಕ ಹೊರಕ್ಕೆಳೆಯಲಾಗುತ್ತದೆ. ಇಡೀ ಪ್ರಕ್ರಿಯೆಗೆ ಕೆಲವೇ ಸೆಕೆಂಡುಗಳು ಸಾಕು ಎನ್ನುತ್ತಾರೆ ರಾಬರ್ಟಾ.

ಈ ಸಂಶೋಧನೆಯಲ್ಲಿ ಪಾಲ್ಗೊಂಡವರ ಬಾಡ್ ಮಾಸ್ ಇಂಡೆಕ್ಸ್ 30ರಿಂದ 45 ಇತ್ತು, ಬಲೂನುಗಳನ್ನು ಅವರ ಹೊಟ್ಡೆಯಲ್ಲಿ 16 ವಾರಗಳ ಕಾಲ ಇಡಲಾಗುತ್ತದೆ ಹಾಗೂ ಈ ಸಮಯ ಅವರಿಗೆ ಕಡಿಮೆ ಕಾರ್ಬೋಹೈಡ್ರೆಟ್ ಹಾಗೂ ಕಡಿಮೆ ಕ್ಯಾಲರಿ ಇರುವ ಆಹಾರ ನೀಡಲಾಗುತ್ತದೆ.

ಹದಿನಾರು ವಾರಗಳ ನಂತರ ಆಂತರಿಕ ರಿಲೀಸ್ ವಾಲ್ವ್ ಒಂದು ಸ್ವಯಂಚಾಲಿತವಾಗಿ ಬಲೂನನ್ನು ತೆರೆದು ಅದರಲ್ಲಿರುವ ನೀರನ್ನು ಹೊರಚೆಲ್ಲುತ್ತದೆ. ಸರಿಸುಮಾರು ವ್ಯಕ್ತಿಯೊಬ್ಬ 15 ಕೆಜಿಯಷ್ಟು ತೂಕವನ್ನು ಈ ಪ್ರಕ್ರಿಯೆಯ ಮೂಲಕ ಕಳೆದುಕೊಳ್ಳುತ್ತಾನೆ ಹಾಗೂ ಇದರಲ್ಲಿ ಯಾವುದೇ ಅಡ್ಡ ಪರಿಣಾಮವಿಲ್ಲ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಈ ಪ್ರಕ್ರಿಯೆಯಲ್ಲಿ ಯಾವುದೇ ಶಸ್ತ್ರಕ್ರಿಯೆ ಅಗತ್ಯವಿಲ್ಲದೇ ಇರುವುದರಿಂದ ಇದು ಹಲವರಿಗೆ ಉಪಕಾರಿ ಹಾಗೂ ಕಡಿಮೆ ವೆಚ್ಚದಲ್ಲಿ ನಡೆಸಬಹುದಾಗಿದೆ ಎನ್ನುತ್ತಾರೆ ರಾಬರ್ಟಾ.

ಅಮೇರಿಕಾದ ಅಲ್ಲುರಿಯನ್ ಟೆಕ್ನಾಲಜೀಸ್ ಗ್ಯಾಸ್ಟ್ರಿಕ್ ಬಲೂನನ್ನು ಅಭಿವೃದ್ಧಿ ಪಡಿಸಿದ್ದು ಅದು ಈಗಾಗಲೇ ಯುರೋಪ್, ಫ್ರಾನ್ಸ್, ಇಟಲಿ, ಬೆಲ್ಜಿಯಂ, ಸ್ಪೇನ್ ಹಾಗೂ ಗ್ರೀಸ್ ದೇಶಗಳಲ್ಲಿ ಮಾರಾಟವಾಗುತ್ತಿವೆ. ಸೌದಿ ಅರೇಬಿಯಾ ಹಾಗೂ ಕುವೈತಿನಲ್ಲೂ ಅದು ಲಭ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News