ಬೊಜ್ಜು ಕರಗಿಸಲು..
► ಲಿಂಬೆ ಹಣ್ಣಿನ ಜ್ಯೂಸ್
ಪ್ರತಿದಿನ ಬೆಳಗ್ಗ್ಗೆೆ ಎದ್ದ ಬಳಿಕ ಮೊದಲು ಲಿಂಬೆ ಹಣ್ಣಿನ ರಸ ಸೇರಿಸಿದ ನೀರು ಕುಡಿಯಿರಿ. ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಚಿಕ್ಕದಾದರೆ ಒಂದು, ದೊಡ್ಡದಾದರೆ ಅರ್ಧ ಲಿಂಬೆಯ ರಸವನ್ನು ಸೇರಿಸಿ ಕುಡಿದು ನಂತರ ನಿಮ್ಮ ದೈನಂದಿನ ವ್ಯಾಯಾಮಗಳನ್ನು ಮಾಡಿ. ಕನಿಷ್ಠ ಮುಕ್ಕಾಲು ಗಂಟೆಯವರೆಗೆ ಬೇರೇನನ್ನೂ ಸೇವಿಸಬೇಡಿ.
► ಬೆಳ್ಳುಳ್ಳಿ ಎಸಳು
ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಮೂರು ಎಸಳು ಬೆಳ್ಳುಳ್ಳಿಯನ್ನು ಸಿಪ್ಪೆಸುಲಿದು ಹಸಿಯಾಗಿಯೇ ಅಗಿಯಿರಿ. ಅಥವಾ ಲಿಂಬೆರಸ ಹಿಂಡಿದ ನೀರಿನ ಜೊತೆ ಅಗಿದ ಬೆಳ್ಳುಳ್ಳಿಯನ್ನು ನುಂಗಿ. ಹೀಗೆ ಮಾಡುವುದರಿಂದ ಎರಡು ವಾರದಲ್ಲಿಯೇ ಸೊಂಟದ ಸುತ್ತಳತೆ ಕಡಿಮೆಯಾಗುವ ಲಕ್ಷಣಗಳು ಗೋಚರಿಸತೊಡಗುತ್ತವೆ.
► ನೀರು
ದಿನಕ್ಕೆ ಇಂತಿಷ್ಟೇ ಲೋಟ ನೀರು ಕುಡಿಯಬೇಕು ಎಂಬ ಕಟ್ಟುಪಾಡುಗಳನ್ನೆಲ್ಲ ಬಿಟ್ಟುಬಿಡಿ. ನೀರು ಕುಡಿಯಬೇಕೆಂದು ಅನ್ನಿಸಿದಾಗಲೆಲ್ಲ ನೀರು ಕುಡಿಯುತ್ತಿರಿ. ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ನೀರು ಕುಡಿಯಿರಿ. ಉಗುರುಬೆಚ್ಚಗಿನ ನೀರು ದೇಹದಲ್ಲಿರುವ ಕೊಬ್ಬಿನಾಂಶವನ್ನು ಕರಗಿಸಬಲ್ಲದು. ನೀವು ಮಾಡಬೇಕಾದದು ಇಷ್ಟೇ ಊಟದ ಅರ್ಧ ಗಂಟೆ ಮೊದಲು ಹಾಗೂ ನಂತರ ಬಿಸಿ ನೀರನ್ನು ಕುಡಿಯಿರಿ. ಊಟದ ನಂತರ ತಕ್ಷಣವೇ ಎಂದೂ ನೀರು ಕುಡಿಯಬೇಡಿ.
► ಗ್ರೀನ್ ಟೀ
ಉತ್ತಮ ಗುಣಮಟ್ಟದ ಗ್ರೀನ್ ಟೀ ಎಲೆಗಳನ್ನು ಕುದಿಯುವ ನೀರಿನಲ್ಲಿ ಹಾಕಿ ಒಂದೆರಡು ನಿಮಿಷ ಕುದಿಸಬೇಕು. ನಂತರ ಈ ಹಸಿರು ಚಹಾವನ್ನು ಸೇವಿಸಬೇಕು. ಹೀಗೆ ಪ್ರತೀ ದಿನ ಎರಡು ಮೂರು ಸಲ ಮಾಡಿದಲ್ಲಿ ಕೆಲವೇ ದಿನಗಳಲ್ಲಿ ಪರಿಣಾಮವನ್ನು ಕಾಣಬಹುದು.
► ಶುಂಠಿ ಟೀ!
ಹಸಿಶುಂಠಿ ಜೀರ್ಣಶಕ್ತಿಯನ್ನು ಹೆಚ್ಚಿಸುವುದು ಸರಿ, ಆದರೆ ಇದು ದೇಹದ ಬಿಸಿಯನ್ನೂ ಹೆಚ್ಚಿಸುತ್ತದೆಂದು ನಿಮಗೆ ಗೊತ್ತೇ? ದೇಹದ ಬಿಸಿಯನ್ನು ಏರಿಸುವ ಮೂಲಕ ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬು ಕರಗಲು ನೆರವಾಗುತ್ತದೆ...
ಒಂದು ಲೋಟ ನೀರಿನಲ್ಲಿ ಒಂದು ಇಂಚು ಹಸಿಶುಂಠಿಯನ್ನು ಜಜ್ಜಿಹಾಕಿ ಸುಮಾರು ಹತ್ತು ನಿಮಿಷಗಳವರೆಗೆ ಚಿಕ್ಕ ಉರಿಯಲ್ಲಿ ಕುದಿಸಿ ಒಂದಿಷ್ಟು ಲಿಂಬೆರಸ ಮತ್ತು ಸ್ವಲ್ಪ ಜೇನು ಸೇರಿಸಿ ಬಿಸಿಬಿಸಿ ಯಾಗಿಯೇ ಸೇವಿಸಿ. ದಿನಕ್ಕೆ ಕನಿಷ್ಠ ಎರಡು ಕಪ್ ಈ ಟೀ ಸೇವಿಸಿದರೆ ಕೊಬ್ಬಿನಿಂದ ಮುಕ್ತಿಪಡೆಯಬಹುದು.