ನಿಮ್ಮ ಹೃದಯ ಬಡಿತದ ದರ ನಿಮ್ಮ ಆರೋಗ್ಯವನ್ನು ಸೂಚಿಸುತ್ತದೆ, ಗೊತ್ತೇ?
ಇಂದು ದಿನವಿಡೀ ಹೃದಯ ಬಡಿತದ ದರವನ್ನು ತೋರಿಸುತ್ತಿರುವ ಹಾರ್ಟ್ ರೇಟ್ ಮಾನಿಟರ್(ಎಚ್‌ಆರ್‌ಎಂ)ಗಳ ಬಳಕೆ ಸಾಮಾನ್ಯವಾಗಿದೆ. ಸ್ಮಾರ್ಟ್‌ಫೋನ್‌ಗಳ ಲ್ಲಿಯೂ ಎಚ್‌ಎಂಆರ್‌ಗಳು ಲಭ್ಯವಿವೆ. ಫೋನ್‌ನ ಸೆನ್ಸರ್‌ನ ಮೇಲೆ ನಿಮ್ಮ ಕೈ ಬೆರಳನ್ನಿರಿಸಿದರೆ ಎಚ್‌ಎಂಆರ್ ನಿಮ್ಮ ಪಲ್ಸ್‌ನ್ನು ಲೆಕ್ಕ ಹಾಕಿ ನಿಮ್ಮ ಹೃದಯ ನಿಮಿಷಕ್ಕೆಷ್ಟು ಬಾರಿ ಬಡಿದುಕೊಳ್ಳುತ್ತಿದೆ ಎನ್ನುವದನ್ನು ಸ್ಕ್ರೀನ್‌ನಲ್ಲಿ ತೋರಿಸುತ್ತದೆ. ಅಂದ ಹಾಗೆ ನಿಮ್ಮ ಹೃದಯ ಬಡಿತದ ದರ ಅಂದರೆ ನಿಮ್ಮ ಹೃದಯ ಎಷ್ಟು ವೇಗವಾಗಿ ಅಥವಾ ನಿಧಾನವಾಗಿ ಬಡಿದುಕೊಳ್ಳುತ್ತಿದೆ ಎಂಬ ಈ ಅಂಕಿಗಳು ನಿಮ್ಮ ಆರೋಗ್ಯ ಹೇಗಿದೆ ಎನ್ನುವುದನ್ನು ಸೂಚಿಸುತ್ತವೆ. ನೀವು ಮಾಡುವ ಕೆಲವು ಕೆಲಸಗಳು ನಿಮ್ಮ ಹೃದಯ ಬಡಿತದ ದರದ ಮೇಲೆ ಪರಿಣಾಮವನ್ನು ಬೀರುತ್ತಿರುತ್ತವೆ.
ನಿಮ್ಮ ಹೃದಯವು ಪ್ರತಿ ನಿಮಿಷಕ್ಕೆ 60ರಿಂದ 80 ಬಾರಿ ಬಡಿದುಕೊಳ್ಳುತ್ತದೆ ಎಂದಾದರೆ ಅದು ಸಾಮಾನ್ಯ ಸ್ಥಿತಿಯಾಗಿದೆ. ಅದು ನಿಮಿಷಕ್ಕೆ 100 ಬಾರಿ ಬಡಿದುಕೊಂಡರೂ ಸುಸ್ಥಿತಿ ಯಲ್ಲಿದೆ ಎಂದೇ ಪರಿಗಣಿಸಬಹುದಾಗಿದೆ. ಆದರೆ ನಿಮ್ಮ ಹೃದಯ ಬಡಿತದ ದರ ತುಂಬ ಹೆಚ್ಚಾಗಿದ್ದರೆ ಅಥವಾ ಕಡಿಮೆಯಾಗಿದ್ದರೆ ನೀವು ವೈದ್ಯರನ್ನು ಕಾಣಲೇಬೇಕು. ಹೃದಯ ಬಡಿತದ ದರದಲ್ಲಿ ಏರುಪೇರಾಗಲು ಕಾರಣಗಳಿಲ್ಲಿವೆ.....
ದೈಹಿಕ ಚಟುವಟಿಕೆಯ ಕೊರತೆ
ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಹೃದಯವು ಸುಸ್ಥಿತಿಯಲ್ಲಿರುತ್ತದೆ. ಬೊಜ್ಜು ಮತ್ತು ದೈಹಿಕ ಚಟುವಟಿಕೆಯ ಕೊರತೆ ಹೃದಯ ಬಡಿತದ ದರವನ್ನು ಹೆಚ್ಚಿಸು ತ್ತವೆ. ನೀವು ಸ್ಥೂಲಕಾಯದವರಾಗಿದ್ದರೆ ನಿಮ್ಮ ಶರೀರದ ಎಲ್ಲ ಭಾಗಗಳಿಗೆ ರಕ್ತವನ್ನು ಪೂರೈಸಲು ಹೃದಯವು ಹೆಚ್ಚು ಶ್ರಮಿಸಬೇಕಾಗುತ್ತದೆ. ಹೆಚ್ಚಿನ ರಕ್ತವನ್ನು ಪಂಪ್ ಮಾಡಬೇಕಾದ ಅಗತ್ಯವಿದ್ದಾಗಲೂ ನಿಮ್ಮ ಹೃದಯವು ವೇಗವಾಗಿ ಹೊಡೆದುಕೊಳ್ಳು ತ್ತಿರುತ್ತದೆ.
ಒತ್ತಡ
ವಿಶ್ರಾಂತಿ ಸ್ಥಿತಿಯಲ್ಲಿರುವಾಗ ಹೃದಯ ಬಡಿತದ ದರ ತೀರ ಹೆಚ್ಚಿದ್ದರೆ ನಿಮ್ಮ ಉದ್ವಿಗ್ನತೆ, ಮಾನಸಿಕ ಒತ್ತಡದ ಮಟ್ಟವೂ ಅದಕ್ಕೆ ಒಂದು ಕಾರಣವಾಗಿರಬಹುದು. ತೀವ್ರ ಮಾನಸಿಕ ಒತ್ತಡವು ಒಳ್ಳೆಯದಲ್ಲ, ಅದು ಹೃದಯದ ಕಾರ್ಯಭಾರವನ್ನು ಹೆಚ್ಚಿಸುತ್ತದೆ.
ಕೆಲವು ಔಷಧಿಗಳ ಬಳಕೆ
ವೈದ್ಯರು ಬರೆದು ಕೊಡುವ ಕೆಲವು ಔಷಧಿಗಳು ಸಹ ಹೃದಯ ಬಡಿತ ದರದಲ್ಲಿ ಬದಲಾವಣೆಗಳಿಗೆ ಕಾರಣವಾಗುತ್ತವೆ. ಇಂತಹ ಸಂದರ್ಭದಲ್ಲಿ ಕ್ಯಾಲ್ಸಿಯಂ ಚಾನೆಲ್ ಬ್ರೋಕರ್ ಹೃದಯಕ್ಕೆ ಆರಾಮವನ್ನು ನೀಡಿ ಅದರ ಬಡಿತದ ವೇಗವನ್ನು ತಗ್ಗಿಸುತ್ತದೆ.
ಥೈರಾಯ್ಡ ಸಮಸ್ಯೆಗಳು
ಹೈಪೊಥೈರಾಯ್ಡಿಸಂ ಹೃದಯದ ಗತಿಯನ್ನು ತಗ್ಗಿಸುತ್ತದೆ ಮತ್ತು ಹೈಪರ್‌ಥೈರಾಯ್ಡಿಸಂ ಅದನ್ನು ಹೆಚ್ಚಿಸುತ್ತದೆ. ಆದ್ದರಿಂದ ಥೈರಾಯ್ಡಿ ಗ್ರಂಥಿಯು ಹೆಚ್ಚುವರಿ ಕಾರ್ಯ ನಿರ್ವಹಿಸಿದರೆ ಅಥವಾ ಅದು ಕಾರ್ಯ ನಿರ್ವಹಿಸುತ್ತಿದ್ದರೆ ಹೃದಯ ಬಡಿತದ ದರ ಹೆಚ್ಚುಕಡಿಮೆಯಾಗುತ್ತದೆ.
ವಿದ್ಯುತ್ ಚಟುವಟಿಕೆ
ಹೃದಯದಲ್ಲಿಯ ವಿದ್ಯುತ್ ಚಟುವಟಿಕೆ ಸಮಸ್ಯೆಯು ಹೃದಯ ಬಡಿತ ಹೆಚ್ಚಲು ಕಾರಣಗಳಲ್ಲೊಂದಾಗಿದೆ. ಹೃದಯದ ವಿದ್ಯುತ್ ವ್ಯವಸ್ಥೆ ಅದು ಸೂಕ್ತವಾಗಿ ಬಡಿದುಕೊಳ್ಳಲು ನೆರವಾಗುತ್ತಿದ್ದರೆ ಅದು ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿರುತ್ತದೆ.
ಡಿಹೈಡ್ರೇಷನ್
ನಿಮ್ಮ ಶರೀರದಲ್ಲಿನ ಎಲೆಕ್ಟ್ರೋಲೈಟ್ ಸಮತೋಲನ ವ್ಯತ್ಯಯಗೊಂಡಿದ್ದರೆ ನಿಮ್ಮ ಹೃದಯ ಬಡಿತದ ದರ ಹೆಚ್ಚಾಗಬಹುದು. ಮ್ಯಾಗ್ನೇಷಿಯಂ, ಕ್ಯಾಲ್ಶಿಯಂ ಮತ್ತು ಪೊಟ್ಯಾಷಿಯಂನಂತಹ ಖನಿಜಗಳ ಪ್ರಮಾಣ ಕಡಿಮೆಯಾದರೂ ಹೃದಯ ಬಡಿತ ದರ ಹೆಚ್ಚುತ್ತದೆ.
ಅತಿಯಾದ ಕೆಫೀನ್ ಸೇವನೆ
ಕೆಫೀನ್ ಹೃದಯದ ಬಡಿತವನ್ನು ಹೆಚ್ಚಿಸುತ್ತದೆ. ಎನರ್ಜಿ ಡ್ರಿಂಕ್ ಅಥವಾ ಒಂದು ಕಪ್ ಕಾಫಿಯನ್ನು ಸೇವಿಸಿದ ಬಳಿಕ ನಿಮ್ಮ ಹೃದಯ ಬಡಿತ ದರದಲ್ಲಿ ಬದಲಾವಣೆ ಅನುಭವಕ್ಕೆ ಬರುತ್ತದೆ.
ಮಧುಮೇಹ
ನೀವು ಶೀಘ್ರವೇ ಮಧುಮೇಹಕ್ಕೆ ತುತ್ತಾಗಬಹುದು ಎನ್ನುವುದಕ್ಕೂ ಹೃದಯ ಬಡಿತ ದರ ಸಂಕೇತವಾಗುತ್ತದೆ. ಸಾಮಾನ್ಯವಾಗಿ ಮಧುಮೇಹವು ಹೃದಯ ಬಡಿತ ದರದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ ಮತ್ತು ಅದು ಹೃದ್ರೋಗದ ಅಪಾಯವನ್ನು ಹೆಚ್ಚಿಸಬಹುದಾಗಿದೆ.